Home Technology Jio ಗ್ರಾಹಕರಿಗೆ ಗುಡ್ ನ್ಯೂಸ್- ದರ ಹೆಚ್ಚಳ ಬೆನ್ನಲ್ಲೇ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ...

Jio ಗ್ರಾಹಕರಿಗೆ ಗುಡ್ ನ್ಯೂಸ್- ದರ ಹೆಚ್ಚಳ ಬೆನ್ನಲ್ಲೇ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !!

Hindu neighbor gifts plot of land

Hindu neighbour gifts land to Muslim journalist

Jio: ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್‌(Reliance) ಜಿಯೋ ಕೆಲವು ದಿನಗಳ ಹಿಂದಷ್ಟೇ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿತ್ತು. ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್‌ ಪ್ಲ್ಯಾನ್‌(Recharg Paln) ಗಳನ್ನು ಶೇ. 25ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಆದರೀಗ ಗ್ರಾಹಕರ ಆಕ್ರೋಶಕ್ಕೆ ಮಣಿದ ಸಂಸ್ಥೆಯು ಕೆಲುವ ಯೋಜನೆಗಳನ್ನು ಪರಿಷ್ಕರಿಸಿದೆ.

ಹೌದು, ಜಿಯೋ ತನ್ನ ಕೆಲವು ಯೋಜನೆಗಳನ್ನು ಪರಿಷ್ಕರಿಸಿದೆ. ಅಗ್ಗದ ದರಗಳಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿರುವ ಜಿಯೋ,ಇನ್ನೂ ಸಾಕಷ್ಟು ಅಗ್ಗವಾಗಿರುವ ಯೋಜನೆಯನ್ನು ಹೊರ ತರುತ್ತಿದೆ. ಕಂಪನಿಯ ಈ ಯೋಜನೆ ಸಾಕಷ್ಟು ಜನಪ್ರಿಯವಾಗಿದೆ ಎನ್ನಲಾಗಿದೆ. ಹಾಗಿದ್ರೆ ಆ ಪ್ಲಾನ್ ಬಗ್ಗೆ ತಿಳಿಯೋಣ ಬನ್ನಿ.

ಜಿಯೋ ಕೈಗೆಟುಕುವ ಯೋಜನೆ :
ಜಿಯೋ ನೀಡುತ್ತಿರುವ 299 ರೂ. ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಅನಿಯಮಿತ ಕರೆ ಮತ್ತು ಸಾಕಷ್ಟು ಡೇಟಾ ಸೌಲಭ್ಯ ಕೂಡಾ ಸಿಗುತ್ತದೆ.ಈ ಯೋಜನೆಯಲ್ಲಿ ಒಟ್ಟು 42GB ಡೇಟಾವನ್ನು ಪಡೆಯಬಹುದು. ಅಂದರೆ, ಪ್ರತಿದಿನ 1.5GB ಡೇಟಾ ಸಿಕ್ಕಿದ ಹಾಗೆ ಆಗುತ್ತದೆ.ಇದಲ್ಲದೇ ಪ್ರತಿದಿನ 100 SMS ಕೂಡಾ ಉಚಿತವಾಗಿ ಸಿಗುತ್ತಿದೆ.

ಜಿಯೋ 399 ಯೋಜನೆ :
Jio ಸಹ ಅನ್ಲಿಮಿಟೆಡ್ 5G ಜೊತೆಗೆ 349 ರೂ.ಗಳ ಯೋಜನೆಯನ್ನು ಹೊಂದಿದೆ.ಇದರಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಡೇಟಾ ಲಭ್ಯವಿದೆ.ಇತರ ಟೆಲಿಕಾಂ ಕಂಪನಿಗಳನ್ನು ಹೊರತುಪಡಿಸಿ,ಈ ಯೋಜನೆಯಲ್ಲಿ ಹೆಚ್ಚಿನ ಪ್ರಯೋಜನಗಳು ಸಿಗಲಿವೆ.