Home Technology IPhone 11 : ಕೇವಲ 13 ಸಾವಿರ ರೂಪಾಯಿಗೆ ಐಪೋನ್ ನಿಮ್ಮದಾಗಲಿದೆ! ಈ...

IPhone 11 : ಕೇವಲ 13 ಸಾವಿರ ರೂಪಾಯಿಗೆ ಐಪೋನ್ ನಿಮ್ಮದಾಗಲಿದೆ! ಈ ಅವಕಾಶ ಕಳೆದುಕೊಳ್ಳಬೇಡಿ

iPhone 11

Hindu neighbor gifts plot of land

Hindu neighbour gifts land to Muslim journalist

iPhone 11 : ಪ್ರತಿಷ್ಟಿತ Appleನ ಐಫೋನ್ ಅಂದರೆ ಪ್ರತಿಯೊಬ್ಬರಿಗೂ ಇಷ್ಟ ಮತ್ತು ಕೊಂಡುಕೊಳ್ಳಬೇಕೆಂಬ ಆಸೆ ಇದೆ. ಆದರೆ ಐಪೋನ್ ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಇದೀಗ ನಿಮ್ಮ ಕನಸು ನನಸು ಆಗಲಿದೆ. ಹೌದು, ಐಫೋನ್ 11 ಅನ್ನು ಗ್ರಾಹಕರು ಕೈಗೆಟಕುವ ದರದಲ್ಲಿ ತಮ್ಮದಾಗಿಸಿಕೊಳ್ಳಬಹುದು.

ಈಗಾಗಲೇ ಐಫೋನ್ 11 ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಇದು ಎನ್ನಲಾಗಿದೆ. Apple iPhone SE 3 5G ಮಾರಾಟದ ಮೇಲೆ ಹೊಡೆತ ಬೀಳುತ್ತಿದೆ ಎನ್ನುವ ಕಾರಣಕ್ಕಾಗಿ ಕಂಪನಿ Apple iPhone 11 ಅನ್ನು ಕಳೆದ ವರ್ಷ ಸ್ಥಗಿತಗೊಳಿಸಿತ್ತು.

ಸದ್ಯ ಇಲ್ಲಿಯವರೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸಾಲಿನಲ್ಲಿ ಐಫೋನ್ 11 ಬರುತ್ತದೆ . ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಅನ್ನು ಕೇವಲ 12,999 ರೂಗಳಿಗೆ ಖರೀದಿಸಲು ಸಾಧ್ಯವಾಗಲಿದೆ.

ಫ್ಲಿಪ್‌ಕಾರ್ಟ್‌ ಐಫೋನ್ 11 ಮೇಲೆ 2,901 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಬಳಿಕ ಈ ಫೋನ್‌ನ ಬೆಲೆ 40,999 ರೂ. ಆಗುತ್ತದೆ. ಇನ್ನು ಬ್ಯಾಂಕ್ ಆಫ್ ಬರೋಡಾ ಮತ್ತು IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿ ನೀಡುತ್ತಿದೆ. ಅಂದರೆ ಈಗ ಈ ಫೋನಿನ ಬೆಲೆ 39,999 ರೂಪಾಯಿ ಆದ ಹಾಗಾಯಿತು. ಇಷ್ಟು ಮಾತ್ರವಲ್ಲದೆ ಈ ಫೋನ್ ಖರೀದಿ ಮೇಲೆ 27 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ.

ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು 27,000 ರೂ. ಎಕ್ಸ್‌ಚೇಂಜ್ ಮಾಡಿಕೊಂಡ ಮೇಲೆ, ನೀವು ಖರೀದಿಸುವ ಐಫೋನ್ 11 ಫೋನ್‌ನ ಬೆಲೆ 12,999 ರೂಪಾಯಿಗೆ ನಿಮಗೆ ದೊರೆಯಲಿದೆ.