

Tech Tips: ವಾಯ್ಸ್ ನೋಟ್ಗಳಂತೆ, ಇನ್ಮುಂದೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಂದೇಶಗಳ ಮೂಲಕ ಶುಭ ಹಾರೈಸಲು ನೀವು ವಾಟ್ಸಾಪ್ ನಲ್ಲಿ 60 ಸೆಕೆಂಡುಗಳ ವಿಡಿಯೋ ಟಿಪ್ಪಣಿಗಳನ್ನು ಕಳುಹಿಸಬಹುದು.
ಹೌದು, ಈ ವಾಟ್ಸಾಪ್ ವಿಡಿಯೋ ನೋಟ್ಸ್ ವೈಶಿಷ್ಟ್ಯವು ವಾಯ್ಸ್ ನೋಟ್ಗಳಂತೆಯೇ ಬಳಸಲು ಸಾಧ್ಯ.
ವಾಟ್ಸಾಪ್ ನಲ್ಲಿ ಆಂಡ್ರಾಯ್ಡ್ (android) ಬಳಕೆದಾರರು ವಿಡಿಯೋ ನೋಟ್ಸ್ ಹೇಗೆ ಕಳುಹಿಸುವುದು?
ಮೊದಲು ವಾಟ್ಸಾಪ್ ಅಪ್ಲಿಕೇಶನ್ (application) ನವಿಕರಿಸಿದ ನಂತರ ಓಪನ್ ಮಾಡಿ ನೀವು ವಿಡಿಯೋ ಟಿಪ್ಪಣಿಗಳನ್ನು ಯಾರಿಗೆ ಕಳುಹಿಸುತ್ತೀರಿ ಅವರ ಚಾಟ್ ವಿಂಡೋವನ್ನು ತೆರೆಯಿರಿ. ನಂತರ, ಕೆಳಗೆ ನೀಡಲಾದ ಕ್ಯಾಮೆರಾ ಐಕಾನ್ (camera icon) ಅನ್ನು ಒತ್ತಿ ಹಿಡಿದುಕೊಳ್ಳಿ. ಈಗ ಮುಂಭಾಗದ ಕ್ಯಾಮೆರಾ ತೆರೆಯುತ್ತದೆ ಮತ್ತು ವಿಡಿಯೋ ನೋಟ್ಸ್ ರೆಕಾರ್ಡ್ (record) ಮಾಡಲು ಪ್ರಾರಂಭಿಸುತ್ತದೆ. ಹಿಂದಿನ ಕ್ಯಾಮೆರಾಕ್ಕಾಗಿ, ಬದಿಯಲ್ಲಿರುವ ಫ್ಲಿಪ್ ಐಕಾನ್ ಅನ್ನು ಟ್ಯಾಪ್ ಮಾಡಿ. ನೀವು 60 ಸೆಕೆಂಡುಗಳವರೆಗೆ ವಿಡಿಯೋ(video) ಟಿಪ್ಪಣಿಗಳನ್ನು ರೆಕಾರ್ಡ್ ಮಾಡಬಹುದು. ನಂತರ, ಕೆಳಗೆ ನೀಡಿರುವ ಕಳುಹಿಸು ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ವಿಡಿಯೋ ಟಿಪ್ಪಣಿಗಳನ್ನು ಕಳುಹಿಸಿ.

ಐಫೋನ್ (iPhone) ಬಳಕೆದಾರರು ವಿಡಿಯೋ ಟಿಪ್ಪಣಿಗಳನ್ನು ಹೇಗೆ ಕಳುಹಿಸಬಹುದು?
ಇದನ್ನೂ ಓದಿ:JOB: ರಾಜ್ಯದಲ್ಲಿ ಖಾಲಿ ಇರುವ ‘600 ಸ್ಟಾಫ್ ನರ್ಸ್ ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ
ಆಂಡ್ರಾಯ್ಡ್‌ನಂತೆ, ಐಫೋನ್ ಬಳಕೆದಾರರು ವಾಟ್ಸಪ್ (whatsapp) ಅನ್ನು ನವೀಕರಿಸಿದ ನಂತರ, ನೀವು ವಿಡಿಯೋ ಟಿಪ್ಪಣಿಗಳನ್ನು ಕಳುಹಿಸಲು ಬಯಸುವ ವ್ಯಕ್ತಿಯ ಚಾಟ್ ಬಾಕ್ಸ್‌ಗೆ (chat box) ಹೋಗಿ. ಕೆಳಭಾಗದಲ್ಲಿರುವ ಕ್ಯಾಮೆರಾ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ ಮತ್ತು ಅದನ್ನು ಮೇಲಕ್ಕೆ ಸ್ಲೈಡ್ ಮಾಡಿ. ನಂತರ, ವಿಡಿಯೋ ಟಿಪ್ಪಣಿಗಳನ್ನು ರೆಕಾರ್ಡ್ ಮಾಡಿ ಮತ್ತು ನೀವು ಬಯಸುವ ವ್ಯಕ್ತಿಗೆ ಕಳುಹಿಸಿ.













