Home Technology ಕರಾವಳಿ ಭಾಗದ ಜನರಿಗೆ ಗುಡ್‌ನ್ಯೂಸ್ !

ಕರಾವಳಿ ಭಾಗದ ಜನರಿಗೆ ಗುಡ್‌ನ್ಯೂಸ್ !

Hindu neighbor gifts plot of land

Hindu neighbour gifts land to Muslim journalist

ದೂರದ ಪ್ರಯಾಣಕ್ಕೆ ರೈಲು ಸಂಚಾರವನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಸಹಜ. ಯಾಕೆಂದರೆ ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ. ಪ್ರಸ್ತುತ ಕರ್ನಾಟಕದ ರೈಲು ಪ್ರಯಾಣಿಕರು ಗಮನಿಸಬೇಕಾದ ಮಾಹಿತಿ ಇಲ್ಲಿದೆ.

ಹೌದು ಇದೀಗ ಭಾರತೀಯ ರೈಲ್ವೆ ಬೆಂಗಳೂರು ಮತ್ತು ಕರಾವಳಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಮುರುಡೇಶ್ವರ- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ರೈಲು ಸೇವೆಯನ್ನು ವಿಸ್ತರಿಸಲು ಆದೇಶಿಸಿದೆ.

ಬೆಂಗಳೂರಿನಲ್ಲಿ ವಾಸವಿರುವ ಕರಾವಳಿ ಭಾಗದ ಜನರಿಗೆ ಈ ರೈಲು ಅತಿ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಹೀಗಾಗಿ ಈ ರೈಲು ಸೇವೆಯ ಬೇಡಿಕೆ ಮನಗಂಡು ಮೇ ತಿಂಗಳವರೆಗೂ ಮುಂದುವರೆಸಲಾಗಿದೆ.

ಸದ್ಯ ಬಹು ಬೇಡಿಕೆ ಹೊಂದಿದ್ದ ಮುರುಡೇಶ್ವರ- ಬೆಂಗಳೂರು ರೈಲಿನ ಸಂಚಾರ ಸೇವೆಯನ್ನು 2023ರ ಮೇ ತಿಂಗಳ ಕೊನೆಯವರೆಗೂ ಮುಂದುವರೆಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ.

ಈ ಹಿಂದೆ ಮುರುಡೇಶ್ವರ-ಪಡೀಲ್, ಬೈಪಾಸ್-ಯಶವಂತಪುರ ನಡುವೆ ವಾರಕ್ಕೊಮ್ಮೆ ಈ ರೈಲು ಸೇವೆಯನ್ನು ಘೋಷಿಸಲಾಗಿತ್ತು. ಕೇವಲ ಚಳಿಗಾಲದ ಅವಧಿಗೆ ಮಾತ್ರ ಈ ರೈಲು ಸೇವೆಯನ್ನು ಒದಗಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ರೈಲು ಸೇವೆಯನ್ನು ಇನ್ನಷ್ಟು ಕಾಲ ಮುಂದುವರೆಸುವಂತೆ ಬೇಡಿಕೆ ಇರಿಸಲಾಗಿತ್ತು. ಆ ಸಂಧರ್ಭದಲ್ಲಿ ರಾಜ್ಯ ರಾಜಧಾನಿ ಮತ್ತು ಕರಾವಳಿಯ ನಡುವೆ ಸಂಪರ್ಕ ಸೇತುವಾಗಿ ಈ ರೈಲು ಕೆಲಸ ಮಾಡುತ್ತಿತ್ತು.

ಸದ್ಯ ಬೆಂಗಳೂರಿನ ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಪ್ರಯಾಣ ಆರಂಭಿಸುವ ಈ ರೈಲು ಮಾರನೇ ದಿನ ಮಧ್ಯಾಹ್ನ 1 ಗಂಟೆಗೆ ಮುರುಡೇಶ್ವರ ತಲುಪುತ್ತದೆ.

ಮುರುಡೇಶ್ವರದಿಂದ ರವಿವಾರ ಮಧ್ಯಾಹ್ನ 1.30ಕ್ಕೆ ಸಂಚಾರ ಆರಂಭಿಸಿ ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ತಲುಪುತ್ತದೆ ಎಂದು ಮಾಹಿತಿ ನೀಡಲಾಗಿದೆ.