Home News Gemopai ryder supermax : 100 ಕಿಮೀ ರೇಂಜ್‌ ನೀಡುವ ಹೊಸ ವೈಶಿಷ್ಟ್ಯಗಳನ್ನು...

Gemopai ryder supermax : 100 ಕಿಮೀ ರೇಂಜ್‌ ನೀಡುವ ಹೊಸ ವೈಶಿಷ್ಟ್ಯಗಳನ್ನು ಹೊಂದಿದ ಅತಿ ಕಡಿಮೆ ಬೆಲೆಯ ಸ್ಕೂಟರ್‌ ಬಿಡುಗಡೆ!

Hindu neighbor gifts plot of land

Hindu neighbour gifts land to Muslim journalist

Gemopai ryder supermax :ಸದ್ಯ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದ್ದು, ಇದರ ಮಾರಾಟ ಕೂಡ ಅಧಿಕ ಸಂಖ್ಯೆಯಲ್ಲಿ ಆಗುತ್ತಿದೆ. ಮಾರುಕಟ್ಟೆಗೆ ವಿವಿಧ ವಿನ್ಯಾಸದ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದ್ದು, ಇವುಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಅದರಲ್ಲೂ ಇತ್ತಿಚೆಗೆ ಎಲ್ಲಿ ಕಣ್ಣು ಹಾಯಿಸಿದರೂ ಎಲೆಕ್ಟ್ರಿಕ್ ಸ್ಕೂಟರ್(electric scooter) ಗಳು ಕಂಡೇ ಕಾಣುತ್ತವೆ. ಹಾಗೆಯೇ ಕಂಪನಿಗಳೂ ನೂತನ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ನೋಯ್ಡಾ ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜೆಮೊಪೈ (Gemopai), ಭಾರತದ ಮಾರುಕಟ್ಟೆಯಲ್ಲಿ ರೈಡರ್ ಸೂಪರ್‌ಮ್ಯಾಕ್ಸ್ (Gemopai Ryder Supermax) ಎಂಬ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ.

ಈ ಸ್ಕೂಟರ್ನ ಎಕ್ಸ್ ಶೋರೂಂ ಬೆಲೆ ರೂ.79,999 ಆಗಿದ್ದು,
ಗ್ರಾಹಕರು, ಅಧಿಕೃತ ವೆಬ್‌ಸೈಟ್ ಅಥವಾ ಮಾರ್ಚ್ 10ರಿಂದ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಿ, ರೂ.2,999ರ ಆರಂಭಿಕ ಮೊತ್ತ ಪಾವತಿಸಿ ಈ ಜೆಮೊಪೈ ರೈಡರ್ ಸೂಪರ್‌ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಬಹುದಾಗಿದೆ.

ನೂತನ ರೈಡರ್ ಸೂಪರ್‌ಮ್ಯಾಕ್ಸ್ ಸ್ಕೂಟರ್ ಪವರ್ ಟ್ರೇನ್ ಬಗ್ಗೆ, 1.8 kW AIS-156 ಕಂಪ್ಲೈಂಟ್ ಬ್ಯಾಟರಿ ಹಾಗೂ ಚಾರ್ಜರ್ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ರೇಂಜ್ ನೀಡಲಿದೆ. ಹಾಗೇ 60 Kmph ಟಾಪ್ ಸ್ವೀಡ್ ಹೊಂದಿದೆ. ಇದು BLDC ಹಬ್ ಮೋಟಾರ್ ನಿಂದ ಕಾರ್ಯ ನಿರ್ವಹಿಸಲಿದ್ದು, 2.7 kW ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ರೈಡರ್ ಸೂಪರ್‌ಮ್ಯಾಕ್ಸ್ , ಜಾಝಿ ನಿಯಾನ್, ಎಲೆಕ್ಟ್ರಿಕ್ ಬ್ಲೂ, ಬ್ಲೇಜಿಂಗ್ ರೆಡ್, ಸ್ಪಾರ್ಕ್ಲಿಂಗ್ ವೈಟ್, ಗ್ರ್ಯಾಫೈಟ್ ಗ್ರೇ ಹಾಗೂ ಫ್ಲೋರೊಸೆಂಟ್ ಯೆಲ್ಲೋ ಈ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ.

ಈ ಸ್ಕೂಟರ್ ಹಲವು ಸುರಕ್ಷತಾ ಅಪ್ಲಿಕೇಶನ್ ಹೊಂದಿದೆ. ವೇಗದ ಎಚ್ಚರಿಕೆಗಳು, ಸೇವಾ ಜ್ಞಾಪನೆಗಳು ಮತ್ತು ನೈಜ-ಸಮಯದ ಮೇಲ್ವಿಚಾರಣೆ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸುತ್ತದೆ. ಒಟ್ಟಾರೆ ಈ ಸ್ಕೂಟರ್ ಇತರ ಕಂಪನಿಯ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.