

Renault india :’ರೆನಾಲ್ಟ್ ಇಂಡಿಯಾ’ (Renault india ) ಕಂಪನಿ (company ) ತನ್ನ ಗ್ರಾಹಕರಿಗೆ (customer) ಸಿಹಿ ಸುದ್ದಿ ನೀಡಿದೆ. ಅದಲ್ಲದೆ ರೈತರು, ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚುವರಿಯಾಗಿ ರಿಯಾಯಿತಿ ಪಡೆಯಬಹುದಾಗಿದೆ. ಸದ್ಯ ದೇಶಾದ್ಯಂತ BS6 ಹಂತ 2 ಎಮಿಷನ್ ಮಾನದಂಡಗಳು ಜಾರಿಯಾಗುವ ಮುನ್ನ ‘ರೆನಾಲ್ಟ್ ಇಂಡಿಯಾ‘ ತನ್ನ ವಿವಿಧ ಮಾದರಿ ಕಾರುಗಳ ಮೇಲೆ ರೂ.62,000ವರೆಗೆ ರಿಯಾಯಿತಿಯನ್ನು ಘೋಷಿಸಿದ್ದು, ಖರೀದಿದಾರರು ಈ ತಿಂಗಳಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
ರೆನಾಲ್ಟ್ ಟ್ರೈಬರ್ (Renault Triber) :
ರೆನಾಲ್ಟ್ ಟ್ರೈಬರ್ ಕಾರಿನ ಎಂಜಿನ್ ಇದು 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 72 PS ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 18.2 – 20 kmpl ಮೈಲೇಜ್ ನೀಡುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.
ಮುಖ್ಯವಾಗಿ ಭಾರತದ ಗ್ರಾಹಕರಿಗೆ ‘ರೆನಾಲ್ಟ್ ಟ್ರೈಬರ್’ ಕಾರಿನ 2022ರ ಮಾದರಿ ಮೇಲೆಯು ರೆನಾಲ್ಟ್ ಇಂಡಿಯಾ ರೂ.62,000ವರೆಗೆ ರಿಯಾಯತಿ ಪ್ರಯೋಜನವನ್ನು ನೀಡುತ್ತಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಈ ಕಾರು, ರೂ.6.33 ಲಕ್ಷದಿಂದ ರೂ.8.97 ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ.
ರೆನಾಲ್ಟ್ ಕ್ವಿಡ್ (Renault Kwid) :
ದೇಶೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ರೂ.4.70 ಲಕ್ಷದಿಂದ ರೂ.6.33 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 PS ಗರಿಷ್ಠ ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಎಂಟ್ರಿ ಲೆವೆಲ್ 2022ರ ‘ಕ್ವಿಡ್’ ಮಾದರಿ ಮೇಲೆ ಒಟ್ಟು ರೂ.57,000ವರೆಗೆ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ವಿಶೇಷವಾಗಿ ರೈತರು, ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚುವರಿಯಾಗಿ ರೂ.5,000 ರಿಯಾಯಿತಿ ಪಡೆಯಬಹುದಾಗಿದ್ದು, ಇದೊಂದು ಉತ್ತಮ ಕೊಡುಗೆ ಆಗಿದೆ.
ರೆನಾಲ್ಟ್ ಕಿಗರ್ ( Renault Kiger ):
ರೆನಾಲ್ಟ್ ಕಿಗರ್ ರೂ.6.50 ಲಕ್ಷದಿಂದ ರೂ.11.23 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 18.24 – 20.5 kmpl ಮೈಲೇಜ್ ನೀಡಲಿದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 PS ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 PS ಪವರ್ 160 Nm ಹಾಗೂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.
ಸಬ್ 4 ಮೀಟರ್ ಎಸ್‌ಯುವಿ, ‘ಕಿಗರ್’ 2022 ಹಾಗೂ 2023 (BS6 ಹಂತ 1) ಮಾದರಿಗಳು ಕೂಡ ರೂ.62,000ವರೆಗೆ ರಿಯಾಯತಿ ಪ್ರಯೋಜನಗಳನ್ನು ಒಳಗೊಂಡಿವೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.25,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.12,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿದೆ. ಜೊತೆಗೆ 2023ರ ಕಿಗರ್ (BS6 ಹಂತ 2) ಮಾದರಿಯು ಒಟ್ಟು ರೂ.54,000ವರೆಗೆ ಡಿಸ್ಕೌಂಟ್ ಆಫರ್ ಒಳಗೊಂಡಿದೆ. ರೂ.10,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.12,000 ಕಾರ್ಪೊರೇಟ್ ರಿಯಾಯಿತಿ ಇದೆ.
ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ‘ರೆನಾಲ್ಟ್’ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದ್ದು, ಜೊತೆಗೆ ರೆನಾಲ್ಟ್ ಇಂಡಿಯಾ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯತಿ ನೀಡಿದೆ. ಅದಲ್ಲದೆ ರೈತರಿಗೂ ವಿಶೇಷ ಆಫರ್ ನೀಡುತ್ತಿರುವುದರಿಂದ ಮತ್ತಷ್ಟು ಈ ಕಾರು ಬೇಡಿಕೆ ಪಡೆಯಲಿದೆ.













