Home Technology Rockrider E-ST100: ದೇಶೀಯ ಮಾರುಕಟ್ಟೆಗೆ ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಲಗ್ಗೆ!!

Rockrider E-ST100: ದೇಶೀಯ ಮಾರುಕಟ್ಟೆಗೆ ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಲಗ್ಗೆ!!

Rockrider E-ST100

Hindu neighbor gifts plot of land

Hindu neighbour gifts land to Muslim journalist

Rockrider E-ST100: ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ (electric vehicle) ಬೇಡಿಕೆ ಹೆಚ್ಚಿದೆ. ಪೆಟ್ರೋಲ್ (petrol) ಏರಿಕೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಕಂಪನಿಗಳು ಕೂಡ ಇವುಗಳ ಬಿಡುಗಡೆಯನ್ಞು ಹೆಚ್ಚಿಸಿದೆ. ಸ್ಕೂಟರ್ (electric scooter), ಕಾರು (electric car) ಇದೀಗ ಎಲೆಕ್ಟ್ರಿಕ್ ಸೈಕಲ್ (electric cycle) ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಹೌದು, ಡೆಕಥ್ಲಾನ್ ಬ್ರಾಂಡ್‌ನ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ (Rockrider E-ST100) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸಮತಟ್ಟಾದ ಮತ್ತು ಕಡಿದಾದ ಭೂಪ್ರದೇಶಗಳಿಗಾಗಿ ವಿನ್ಯಾಸಗೊಳಿಸಿದ್ದು, ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ವ್ಯಾಪಕ ಶ್ರೇಣಿಯ 150 ಇ ಸೈಕಲ್‌ಗಳನ್ನು ಬೆಂಗಳೂರಿನ ವೈಟ್‌ ಫೀಲ್ಡ್ ಮತ್ತು ಬನ್ನೇರುಘಟ್ಟ ರಸ್ತೆ ಸೇರಿದಂತೆ ಮೂರು ಮಳಿಗೆಗಳಲ್ಲಿ ಪರಿಚಯಿಸುತ್ತಿದೆ. ಇದರ ಬೆಲೆ ಸುಮಾರು ರೂ. 84,999 ಆಗಿದೆ.

“ನಾವು ಮೊಟ್ಟಮೊದಲ ಬಾರಿಗೆ ‘ರಾಕ್‌ರೈಡರ್ ಇ ಎಸ್‌ಟಿ 100’ ಎಲೆಕ್ಟ್ರಿಕ್ ಸೈಕಲ್ ಅನ್ನು ಆರಂಭಕವಾಗಿ ಬೆಂಗಳೂರು ನಗರದಲ್ಲಿ ಪ್ರಾರಂಭಿಸುತ್ತಿದ್ದೇವೆ. ಡೆಕಥ್ಲಾನ್‌ನ ಅತ್ಯಂತ ಸಕ್ರಿಯ ಸೈಕ್ಲಿಂಗ್ ಸಮುದಾಯ ವಾರಾಂತ್ಯದ ಬೆಟ್ಟ ಹತ್ತುವವರಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ‘ರಾಕ್‌ರೈಡರ್ ಇ-ಎಸ್‌ಟಿ 100’ ಕುರಿತು ಮಾತನಾಡಿದ ಡೆಕಥ್ಲಾನ್ ಸ್ಪೋರ್ಟ್ಸ್ ಇಂಡಿಯಾದ ಇ ಸೈಕಲ್ ಪ್ರಾಜೆಕ್ಟ್ ಲೀಡರ್ ಎಬಿನ್ ಮ್ಯಾಥ್ಯೂ ಹೇಳಿದರು.

Rockrider E-ST100 ಸೈಕಲ್ 250W ಹಿಂಬದಿಯ ಹಬ್ ಮೋಟಾರ್‌ ಹೊಂದಿದೆ. 42 Nm (ನ್ಯೂಟನ್ ಮೀಟರ್) ಇದ್ದು, ಈ ಎಲೆಕ್ಟ್ರಿಕ್ ಸೈಕಲ್ ಡಿಟ್ಯಾಚೇಬಲ್, ಸ್ಯಾಮ್‌ಸಂಗ್ ಲಿಥಿಯಂ-ಐಯಾನ್ ಸೆಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 10.5 Ah , 380 Wh ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಆರು ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದೆ. ಈ ಪೆಡಲ್ ಅಸಿಸ್ಟ್ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್‌ನೊಂದಿಗೆ, ಗ್ರಾಹಕರು ಸಲೀಸಾಗಿ 25 kmph ವೇಗವನ್ನು ತಲುಪಬಹುದು. ಫುಲ್‌ ಚಾರ್ಜ್‌ನಲ್ಲಿ ಸಮತಟ್ಟಾದ ಭೂಪ್ರದೇಶದಲ್ಲಿ ಮೋಡ್ 1 ರಲ್ಲಿ 100 ಕಿ.ಮೀ ಗಳವರೆಗೆ ಪೆಡಲ್ ಅಸಿಸ್ಟ್ ಸಹಾಯ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಇದು ಬ್ಯಾಟರಿ ಪ್ಯಾಕ್‌ನಲ್ಲಿ ಬಳಸಲಾದ ಸ್ಯಾಮ್‌ಸಂಗ್ ಸೆಲ್‌ಗಳು BIS ನಿಂದ ಪ್ರಮಾಣೀಕರಿಸಲ್ಪಟ್ಟಿವೆ. ಹೆಚ್ಚುವರಿಯಾಗಿ E-ST100, ಗರಿಷ್ಠ ಪವರ್ ಮತ್ತು ಗರಿಷ್ಠ ಕಟ್-ಆಫ್ ವೇಗಕ್ಕಾಗಿ ARAI ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿ ತಿಳಿಸಿದೆ.