Home Technology ಆ್ಯಪಲ್​ನ ಈ ಸಾಧನಗಳ ಮೇಲೆ ಭರ್ಜರಿ ರಿಯಾಯಿತಿ | ಈ ಆಫರ್ ಮಿಸ್ ಮಾಡ್ಕೊಂಡ್ರೆ, ಮತ್ತೆ...

ಆ್ಯಪಲ್​ನ ಈ ಸಾಧನಗಳ ಮೇಲೆ ಭರ್ಜರಿ ರಿಯಾಯಿತಿ | ಈ ಆಫರ್ ಮಿಸ್ ಮಾಡ್ಕೊಂಡ್ರೆ, ಮತ್ತೆ ಸಿಗಲ್ಲ

Hindu neighbor gifts plot of land

Hindu neighbour gifts land to Muslim journalist

ಹೊಸ ವರ್ಷದ ಪ್ರಯುಕ್ತ ಇದೀಗ ಪ್ರಮುಖ ಇ-ಕಾಮರ್ಸ್​ ವೆಬ್​ಸೈಟ್​ಗಳು ಹಲವು ಡಿವೈಸ್​ಗಳನ್ನು ಭರ್ಜರಿ ಡಿಸ್ಕೌಂಟ್​ನಲ್ಲಿ ಮಾರಾಟ ಮಾಡುತ್ತಿದೆ. ಈ ಆಫರ್ ನಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಡಿವೈಸ್ ಗಳು ಲಭ್ಯವಾಗಲಿದೆ. ಇದಂತು ಗ್ರಾಹಕರಿಗೆ ಉತ್ತಮ ಅವಕಾಶವಾಗಿದ್ದು, ಮಿಸ್ ಮಾಡ್ಕೊಂಡ್ರೆ ಮತ್ತೆ ಇಂತಹ ಅವಕಾಶ ಸಿಗೋದಿಲ್ಲ. ಇನ್ನೂ, ಯಾವೆಲ್ಲಾ ಸಾಧನಗಳ ಮೇಲೆ ಆಫರ್ ಇದೆ? ಬೆಲೆ ಎಷ್ಟು? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಡಿಸ್ಕೌಂಟ್ ಸೇಲ್ ಅನ್ನು ಎಲೆಕ್ಟ್ರಾನಿಕ್ಸ್ ರಿಟೇಲ್ ಸ್ಟೋರ್ ವಿಜಯ್ ಸೇಲ್ಸ್ ಆಯೋಜಿಸಿದೆ. ಈ ಬಂಪರ್ ಆಫರ್ ಡಿಸೆಂಬರ್​ 31ರಿಂದ ಆರಂಭವಾಗಲಿದ್ದು, ಈ ಸೇಲ್‌ನಲ್ಲಿ ಭಾರೀ ಅಗ್ಗದ ಬೆಲೆಗೆ ಗ್ರಾಹಕರಿಗೆ ಸಾಧನಗಳು ಲಭ್ಯವಾಗಲಿದೆ. ಈ ರಿಯಾಯಿತಿ ಮಾರಾಟವು ಸ್ಮಾರ್ಟ್ ವಾಚ್‌, ಏರ್‌ಪಾಡ್ಸ್ ಪ್ರೋ, ಮ್ಯಾಗ್‌ಸೇಫ್ ಚಾರ್ಜಿಂಗ್ ಕೇಸ್‌, ಮ್ಯಾಕ್‌ಬುಕ್‌, ಐಪ್ಯಾಡ್‌ ಮತ್ತು ಆ್ಯಪಲ್​ ಕಂಪನಿಯ ಸಾಧನಗಳ ಮೇಲೆ ಕೂಡ ಆಫರ್ ನೀಡುತ್ತದೆ.

ಈ ಸೇಲ್ ನಲ್ಲಿ ಐಫೋನ್ 14 ನ ಮೇಲೆ ಡಿಸ್ಕೌಂಟ್ ಲಭ್ಯವಿದ್ದು, ಈ ಸ್ಮಾರ್ಟ್ ಫೋನ್ ನ ಮೂಲ ಬೆಲೆ 79,900ರೂ. ಆಗಿದೆ. ಆದರೆ ನೀವು ಇದನ್ನು ಕೇವಲ 61,900ರೂ. ಗೆ ಖರೀದಿಸಬಹುದಾಗಿದೆ. ಅಲ್ಲದೆ, ಈ ಸ್ಮಾರ್ಟ್ ಫೋನ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, 5000 ರೂ. ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಹಾಗೇ ಈ ಫೋನಿನ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಇದೆ.

ಇನ್ನೂ, ರಿಯಾಯಿತಿಯ ಮೇಲೆ ಐಫೋನ್ 14 ಪ್ಲಸ್​ ಲಭ್ಯವಿದ್ದು, ಇದರ ಬೆಲೆ 68,699, ರೂ. ಆಗಿದೆ. ಹಾಗೇ ಐಫೋನ್ 14 ಪ್ರೋ ಡಿಸ್ಕೌಂಟ್ ನ ಮೇಲೆ ರೂ.1,26,100 ಗೆ ಲಭ್ಯವಾಗಲಿದೆ. ಐಫೋನ್ 14 ಪ್ರೋ ಮ್ಯಾಕ್ಸ್​ ಕೂಡ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ನಿಮಗೆ ರೂ.135,800 ರೂ ಸಿಗಲಿದೆ. ಈ ಆಫರ್ ನಲ್ಲಿ ಐಫೋನ್ 12 ರೂ.52,900 ಯಲ್ಲಿ ಮತ್ತು ಐಫೋನ್ 13 ರೂ.62,900 ಗೆ ಲಭ್ಯವಾಗಲಿದೆ.

ಐಪ್ಯಾಡ್ ನ ಮೇಲೆ ಕೂಡ ರಿಯಾಯಿತಿ ಇದ್ದು, ಐಪ್ಯಾಡ್ 9 ಜನರೇಷನ್ ಆರಂಭಿಕ ಬೆಲೆ 25,600 ರೂಪಾಯಿ ಆಗಿದೆ. ಹಾಗಾಗಿ ನೀವು ಐಪ್ಯಾಡ್ ಪ್ರೋ ಅನ್ನು ರೂ.73,000 ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದು.

ಆ್ಯಪಲ್ ಲ್ಯಾಪ್‌ಟಾಪ್‌ಗಳು ಕೂಡ ಭರ್ಜರಿ ಆಫರ್ ನಲ್ಲಿ ಲಭ್ಯವಾಗಲಿದೆ. ಮ್ಯಾಕ್‌ಬುಕ್ ಏರ್ ಲ್ಯಾಪ್​ಟಾಪ್​ ನ ಆರಂಭಿಕ ಬೆಲೆ ರೂ. 77,900 ಆಗಿದ್ದು, ಎಮ್​2 ಚಿಪ್‌ನೊಂದಿಗೆ ಮ್ಯಾಕ್‌ಬುಕ್ ಏರ್ ಬೆಲೆ 95,500 ರೂ. ಆಗಿದೆ. ಹಾಗೇ M2 ಚಿಪ್‌ನೊಂದಿಗೆ ಮ್ಯಾಕ್‌ಬುಕ್ ಪ್ರೋ 1,04,300 ರೂ ಆಗಿದ್ದು, M1 ಪ್ರೋ ಚಿಪ್‌ನೊಂದಿಗೆ ಮ್ಯಾಕ್‌ಬುಕ್ ಪ್ರೋ ಲ್ಯಾಪ್​ಟಾಪ್​ 1,07,500 ರೂ. ಗೆ ಲಭ್ಯವಾಗಲಿದೆ‌.

ಇದಿಷ್ಟೇ ಅಲ್ಲದೆ ಈ ವಿಶೇಷ ಆಫರ್ ಆ್ಯಪಲ್​ ವಾಚ್ ಮೇಲೆ ಕೂಡ ನೀಡುತ್ತಿದೆ. ಈ ಸೇಲ್‌ನಲ್ಲಿ ಆ್ಯಪಲ್ ವಾಚ್ 8 ನ ಬೆಲೆ ರೂ 39,900 ರಿಂದ ಆರಂಭವಾಗುತ್ತದೆ. ಹಾಗೇ ಆ್ಯಪಲ್ ವಾಚ್​ ಎಸ್​​ಇ ಸ್ಮಾರ್ಟ್​ವಾಚ್​ ನ ಆರಂಭಿಕ ಬೆಲೆ 26,000 ರೂಪಾಯಿ. ಹಾಗೇ ಆ್ಯಪಲ್ ವಾಚ್ ಅಲ್ಟ್ರಾ ಆರಂಭಿಕ ಬೆಲೆ ರೂ.82,300 ಆಗಿದ್ದು, ಕಂಪನಿಯು ಆ್ಯಪಲ್ ವಾಚ್ ಕೇರ್​ ನ ಮೇಲೆ 20 ಶೇಕಡಾದಷ್ಟು ರಿಯಾಯಿತಿ ನೀಡುತ್ತಿದೆ.