Home News Maruti alto 800 : ಮಾರುತಿ ಆಲ್ಟೊ 800 ಬೆಲೆಯಲ್ಲಿಯೇ ಖರೀದಿಸಿ ಅತ್ಯುತ್ತಮ ವೈಶಿಷ್ಟ್ಯದ ಆಲ್ಟೊ...

Maruti alto 800 : ಮಾರುತಿ ಆಲ್ಟೊ 800 ಬೆಲೆಯಲ್ಲಿಯೇ ಖರೀದಿಸಿ ಅತ್ಯುತ್ತಮ ವೈಶಿಷ್ಟ್ಯದ ಆಲ್ಟೊ ಕೆ10 ಕಾರು!!!

Hindu neighbor gifts plot of land

Hindu neighbour gifts land to Muslim journalist

Maruti alto 800 : ಮಾರುತಿ ಸುಜುಕಿ (Maruti alto 800) ಜನಪ್ರಿಯ ಕಾರು ಕಂಪನಿಗಳಲ್ಲಿ ಒಂದಾಗಿದೆ. ಗ್ರಾಹಕರಿಗಾಗಿ ಈಗಾಗಲೇ ಸಾಕಷ್ಟು ಕಾರುಗಳನ್ನು ಬಿಡುಗಡೆ ಮಾಡಿದೆ. ಅತ್ಯುತ್ತಮ ವೈಶಿಷ್ಟ್ಯತೆ, ಕಣ್ಮನ ಸೆಳೆಯುವ ಬಣ್ಣಗಳ ಆಯ್ಕೆ ಹೊಂದಿರುವ ಕಾರುಗಳನ್ನು ಪರಿಚಯಿಸುತ್ತಿದೆ. ಹಾಗೆಯೇ ಕಂಪನಿ ಆಲ್ಟೊದ ಅಡಿಯಲ್ಲಿ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ. ಅದು ಮಾರುತಿ ಆಲ್ಟೊ ಕೆ 10 (maruti alto K10) ಮತ್ತು ಮಾರುತಿ ಆಲ್ಟೊ 800 (maruti alto 800) ಆಗಿದೆ. ಸದ್ಯ ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾರುತಿ ಆಲ್ಟೊ ಕೆ10 : ಇದರಲ್ಲಿ ಸಿಎನ್ಜಿ (CNG ) ಆವೃತ್ತಿ ಲಭ್ಯವಿದ್ದು, ಇದು ಪೆಟ್ರೋಲ್ ಎಂಜಿನ್ 67 PS ಮತ್ತು 89 Nm ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಿಎನ್ ಜಿಯಲ್ಲಿ ಎಂಜಿನ್ 57PS ಮತ್ತು 82.1 Nm ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಇರಲಿದೆ. ಆಲ್ಟೊ ಕೆ10 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೇ ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ.

5-ಸ್ಪೀಡ್ ಮ್ಯಾನುವಲ್ (ಸ್ಟ್ಯಾಂಡರ್ಡ್), AMT ಗೇರ್ ಬಾಕ್ಸ್ (ಐಚ್ಛಿಕ) ಇರಲಿದ್ದು, ಈ ಕಾರು ಸಿಎನ್ಜಿ ಯಲ್ಲಿ 33.85KM ಮೈಲೇಜ್ ಕ್ರಮಿಸುತ್ತದೆ. ಅಲ್ಲದೆ, ಇದರಲ್ಲಿ ಸ್ಟೀರಿಂಗ್ ಮೌಂಟೆಡ್ ನಿಯಂತ್ರಣಗಳನ್ನು ನೀಡಲಾಗಿದೆ. ಸದ್ಯ ಈ ಕಾರಿನ ಆರಂಭಿಕ ಬೆಲೆ 3.99 ಲಕ್ಷ ರೂ. ಆಗಿದೆ. ಮಾರುತಿ ಆಲ್ಟೊ ಕೆ10ನ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 5.95 ಲಕ್ಷ ರೂ ಇರಲಿದೆ.

ಮಾರುತಿ ಆಲ್ಟೊ 800: ಈ ಕಾರು 0.8-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಸಿಎನ್ ಜಿ ಕಿಟ್ ಆಯ್ಕೆಯೊಂದಿಗೆ ಸಿಗಲಿದೆ. ಕಾರಿನ ಪೆಟ್ರೋಲ್ ಎಂಜಿನ್ 48 PS ಮತ್ತು 69 Nm ಔಟ್‌ಪುಟ್ ನೀಡುತ್ತದೆ. ಸಿಎನ್ಜಿ ಮೋಡ್ ನಲ್ಲಿ ಇದು 41 PS ಮತ್ತು 60 Nm ಔಟ್‌ಪುಟ್ ನೀಡುತ್ತದೆ.

ಈ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಲಭ್ಯವಿದೆ. ಸಿಎನ್ಜಿ ಇದರ ಮೈಲೇಜ್ ಸುಮಾರು 31KM ಇದ್ದು, ಆಲ್ಟೊ 800 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ), ಮುಂಭಾಗದ ಪವರ್ ಕಿಟಕಿಗಳು, ಕೀಲೆಸ್ ಎಂಟ್ರಿ, ಸುರಕ್ಷತಾ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.
ಈ ಕಾರಿನ ಎಕ್ಸ್ ಶೋರೂಂ ಬೆಲೆ 3.54 ಲಕ್ಷ ರೂ.ಗಳಿಂದ 5.13 ಲಕ್ಷ ರೂ.ವರೆಗೆ ಇರಲಿದೆ.