Home Technology ದೇಶಾದ್ಯಂತ ʻಇನ್ ಸ್ಟಾಗ್ರಾಮ್ʼ ಮತ್ತೆ ಡೌನ್ : ಬಳಕೆದಾರರು ಟ್ವಿಟ್ಟರ್‌ ಮೂಲಕ ಆಕ್ರೋಶ

ದೇಶಾದ್ಯಂತ ʻಇನ್ ಸ್ಟಾಗ್ರಾಮ್ʼ ಮತ್ತೆ ಡೌನ್ : ಬಳಕೆದಾರರು ಟ್ವಿಟ್ಟರ್‌ ಮೂಲಕ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

Meta :ಜಾಗತಿಕ ಮಟ್ಟದಲ್ಲಿ ಮೆಟಾ(Meta)ಒಡೆತನದ ಫೋಟೋ ಹಂಚಿಕೆ ಪ್ಲಾಟ್ಫಾರ್ಮ್ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳ ಒಂದು ಭಾಗವಾಗಿರುವ ಇನ್ ಸ್ಟಾಗ್ರಾಮ್  ಗುರುವಾರ ತಾಂತ್ರಿಕ ಸಮಸ್ಯೆಗಳಿಂದ ವಿಶ್ವದಾದ್ಯಂತ ಮತ್ತೆ ಸ್ಥಗಿತಗೊಂಡಿದೆ. 15 ದಿನಗಳಲ್ಲಿ ಎರಡನೇ ಬಾರಿಗೆ ಇನ್ಸ್ಟಾಗ್ರಾಮ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಬಳಕೆದಾರರು ಪರದಾಡುತ್ತಿದ್ದಾರೆ.

ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ಅಪ್ಲಿಕೇಶನ್ ಬಳಸುವಾಗ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ವರದಿಗಳು ಬೆಳಿಗ್ಗೆ 6:30 ರಿಂದ ಪ್ರಾರಂಭವಾಗಿ ಬೆಳಿಗ್ಗೆ 10:30 ರವರೆಗೆ ಮುಂದುವರೆದವು ಆದರೆ ಸಮಸ್ಯೆಯನ್ನು ಇನ್ನೂ ಪರಿಹರಿಸಲಾಗಿಲ್ಲ.

ಹಲವಾರು ಗಂಟೆಗಳ ಕಾಲ ಇನ್ಸ್ಟಾಗ್ರಾಮ್ ಡೌನ್ ಆಗಿದ್ದು, ತಮ್ಮ ಖಾತೆಯನ್ನು ಬಳಕೆ ಮಾಡಲಾಗುತ್ತಿಲ್ಲ, ಫೋಟೋ, ರೀಲ್ಸ್​​ಗಳನ್ನು ಅಪ್ಲೋಡ್ ಆಗುತ್ತಿಲ್ಲ, ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೆಟ್ಟಿಗರು ಟ್ಟಿಟ್ಟರ್‌ ಮೂಲಕ ಹೇಳಿಕೊಂಡಿದ್ದಾರೆ.

ದೇಶಾದ್ಯಂತ ಇನ್ ಸ್ಟಾಗ್ರಾಮ್ ಮತ್ತೆ ಡೌನ್ ಆಗಿರೋದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ,ಈಗಾಗಲೇ ಬಳಕೆದಾರರು ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಇನ್ ಸ್ಟಾಗ್ರಾಮ್ ಮತ್ತೆ ಡೌನ್ ಸಮಸ್ಯೆಗಳ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಇನ್ಸ್ಟಾಗ್ರಾಮ್ ಸ್ಥಗಿತವು ಮೇ 22 ರಂದು ಡೌನ್‌ ಆಗಿತ್ತು. ಇಂದು ಸೇರಿದಂತೆ ಎರಡನೇ ಬಾರಿಗೆ ಇನ್ಸ್ಟಾಗ್ರಾಮ್ ಡೌನ್ ಆಗಿದೆ ಎಂದು ವರದಿ ಮಾಡಲಾಗಿದೆ. ಇನ್ನೂ ಮೇ 18 ರಂದು, ಮೆಟಾ ಮಾಲೀಕತ್ವದ ಪ್ಲಾಟ್ಫಾರ್ಮ್ ಯುಎಸ್ಎ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸ್ಥಗಿತಗೊಂಡಿತು.

ಶುಕ್ರವಾರ ಬೆಳಿಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರು ಕೆಲವು ತಮಾಷೆಯ ಮೀಮ್ ಗಳ ಮೂಲಕ ತಮ್ಮ ಹತಾಶೆಯನ್ನು ಹಂಚಿಕೊಳ್ಳಲು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ :ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥಪ್ರಿಯಕರನ ಖಾಸಗಿ ಅಂಗಕ್ಕೆ ಕತ್ತರಿ ಪ್ರಯೋಗಿಸಿದ ಪ್ರಿಯಕರೆ !