ಸಂತ್ರಸ್ತೆ ಗುಪ್ತಾಂಗಕ್ಕೆ 2 ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡಿ | ಬಾಂಬೆ ಹೈಕೋರ್ಟ್ ತಾಕೀತು !
ಮುಂಬೈ: ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗಕ್ಕೆ ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡುವಂತೆ ಬಾಂಬೆ ಹೈಕೋರ್ಟ್ ಹೇಳಿದೆ. ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿದೆಯೇ ಇಲ್ಲವೇ ಎಂದು ಪತ್ತೆ ಹಚ್ಚಲು ಬೆರಳು ಹಾಕಿ ನಡೆಸಲಾಗುವ ಪರೀಕ್ಷೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ವಿಧಾನಕ್ಕೆ ಅಂತ್ಯ ಹಾಡಲು ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂಬ ಆಶಾಭಾವವನ್ನು ಬಾಂಬೆ ಹೈಕೋರ್ಟ್ ವ್ಯಕ್ತಪಡಿಸಿದೆ. 2013ರಲ್ಲಿ ಮುಂಬೈನ ಶಕ್ತಿಮಿಲ್ ಆವರಣದಲ್ಲಿ 19 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು …