‘ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ’ | ಬಿಜೆಪಿ ಸಂಸದನ ಮೇಲೆ ದೇಶಾದ್ಯಂತ ಆಕ್ರೋಶ !
ಮಂಗಳೂರು (ನ.12): ಜಾರ್ಖಂಡ್ ನ ಸಂಸದ ನಿಶಿಕಾಂತ್ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ ಮೇಲೆ ಅಡಕೆಯ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿದೆ. ಅಡಕೆಯ ಉಪಯೋಗಕ್ಕೆ ಶತಮಾನಗಳ ಇತಿಹಾಸವಿದೆ. ಅದು ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ. ಮಧುಮೇಹ, ಕೊಲೆಸ್ಟರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೊಟೊ ಜೋವನ್ ಪರಾವಲಂಬಿಗಳು ಇತ್ಯಾದಿಗಳನ್ನು ಸವಾರಿಸುವ …