Home latest WPL: RCB ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ! ಈ ಸಲ ಕಪ್​ ನಮ್ದೇ ಎಂದು...

WPL: RCB ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ! ಈ ಸಲ ಕಪ್​ ನಮ್ದೇ ಎಂದು ಸಂಭ್ರಮಿಸಿದ ಫ್ಯಾನ್ಸ್!

Hindu neighbor gifts plot of land

Hindu neighbour gifts land to Muslim journalist

WPL: ಭಾರತದ ಮಹಿಳಾ ಪ್ರೀಮಿಯರ್ ಲೀಗ್(WPL) ಗೆ ದಿನಗಣನೆ ಆರಂಭವಾಗಿದೆ. ವಾರದ ಹಿಂದೆ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಫ್ರಾಂಚೈಸಿಯು ಉತ್ತಮ ತಂಡವನ್ನೇ ಖರೀದಿ ಮಾಡಿದೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾದಂತಹ ಸ್ಮೃತಿ ಮಂಧಾನ(Smrithi Mandaana) ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಖರೀದಿಸಿದ ಸಂದರ್ಭದಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನಂತರದಲ್ಲಿ ತಂಡದ ನಾಯಕಿ(Captain) ಯಾರಾಗುತ್ತಾರೆ ಎಂಬ ಕುತೂಹಲವೂ ಹಲವರಲ್ಲಿತ್ತು. ಇದೀಗ ಎಲ್ಲರ ಕುತೂಹಲ ತಣಿದಿದೆ ಎನ್ನಬಹುದು.

ಹೌದು, ಉತ್ತಮ ದೇಶಿಯ ಮತ್ತು ವಿದೇಶಿ ಆಟಗಾರರನ್ನು ಖರೀದಿಸಿದ ಆರ್ಸಿಬಿ ಮೊದಲ ಕೂಟಕ್ಕೆ ಸಿದ್ದವಾಗಿದೆ. ಇದೀಗ ತಂಡದ ನಾಯಕಿಯ ನೇಮಕವೂ ಆಗಿದೆ. ವಿರಾಟ್ ಕೊಹ್ಲಿ(Virath kohli) ಮತ್ತು ಆರ್ ಸಿಬಿ ಪುರುಷರ ತಂಡದ ನಾಯಕ ಫಾಪ್ ಡುಪ್ಲೆಸಿಸ್(Paap Duplesis) ಅವರು ವಿಡಿಯೋ ಮೂಲಕ ಆರ್ ಸಿಬಿ ವನಿತಾ ನಾಯಕಿಯ ಹೆಸರನ್ನು ಅನಾವರಣ ಮಾಡಿದ್ದಾರೆ. ಎಲ್ಲರ ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧನಾ ಅವರು ಆರ್ ಸಿಬಿ ಮಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.

ಡಬ್ಲ್ಯುಪಿಎಲ್ ಹರಾಜಿನಲ್ಲಿ ಸ್ಮೃತಿ ಮಂಧಾನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಕೋಟಿ 40 ಲಕ್ಷ ರೂ.ಗೆ ಖರೀದಿಸಿತ್ತು. ಮೊದಲ ಋತುವಿನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ಆಟಗಾರ್ತಿ ಮಂಧಾನ ಅವರನ್ನು ತಂಡ ನಾಯಕಿಯಾಗಿ ಆಯ್ಕೆ ಮಾಡಿದೆ. ಆರ್​ಸಿಬಿ ಮಹಿಳಾ ತಂಡವು ಬಲಿಷ್ಠವಾಗಿದ್ದು, ಆರ್​ಸಿಬಿಯ ಮಹಿಳಾ ನಾಯಕಿಯಾಗಿ ಮತ್ತೊಬ್ಬರು 18ನೇ ಜೆರ್ಸಿ ನಂಬರ್​ನ ಪ್ಲೇಯರ್ ವಹಿಸಿಕೊಳ್ಳುತ್ತಾರೆ. ಅವರ ಹೆಸರು ಸ್ಮೃತಿ ಮಂಧಾನ ಎಂದು ಕೊಹ್ಲಿ ಹೇಳಿದ್ದಾರೆ

ವಿಶೇಷ ವಿಡಿಯೋ ಮೂಲಕ ಮಂಧಾನ ಅವರ ಹೆಸರನ್ನು ಘೋಷಿಸಿದ ಕೊಹ್ಲಿ, ಸುಮಾರು 10 ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ಕ್ಷಣವನ್ನು ಎಂಜಾಯ್ ಮಾಡಿದ್ದೇನೆ. ಇದು ತಮ್ಮ ವೃತ್ತಿಜೀವನದ ಅವಿಸ್ಮರಣೀಯ ಕ್ಷಣ ಎಂದು ಹೇಳಿದ್ದಾರೆ. ಅಲ್ಲದೆ ಆರ್‌ಸಿಬಿ ಪುರುಷರ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕಿಯಿಸಿ ‘ನಮ್ಮ ಮಹಿಳಾ ನಾಯಕಿ ಆರ್‌ ಸಿಬಿಯನ್ನು ಮುನ್ನಡೆಸುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಆಲ್ ದಿ ವೆರಿ ಬೆಸ್ಟ್ ಸ್ಮೃತಿ ಮಂಧನಾ. ಪಂದ್ಯಗಳಲ್ಲಿ ನಾವು ಭೇಟಿಯಾಗೋಣ’ ಎಂದು ಹೇಳಿ ಶುಭಾಶಯಗಳನ್ನು ತಿಳಿಸಿದ್ದಾರೆ.

ನೂತನ ನಾಯಕಿ ಮಂದನಾ ಅವರೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ‘ನನಗೆ ಈ ಅದ್ಭುತ ಅವಕಾಶವನ್ನು ನೀಡಿದ ಆರ್ಸಿಬಿ(RCB) ಫ್ರಾಂಚೈಸಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಭಿಮಾನಿಗಳಿಂದ ಎಲ್ಲಾ ಪ್ರೀತಿ ಮತ್ತು ಬೆಂಬಲವನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ, ಆರ್ ಸಿಬಿ ಅಭಿಮಾನಿಗಳು ವಿಶ್ವದ ಅತ್ಯುತ್ತಮರು ಎಂದು ನಾನು ಕೇಳಿದ್ದೇನೆ ಮತ್ತು ಡಬ್ಲ್ಯುಪಿಎಲ್‌ ನಲ್ಲಿ ಆರ್‌ಸಿಬಿಯನ್ನು ಯಶಸ್ಸಿನತ್ತ ಮುನ್ನಡೆಸಲು ನಾನು ಪೂರ್ಣ ಪ್ರಯತ್ನ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ಮಂಧಾನ ಈವರೆಗೆ 112 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಗಳಿಸಿದ್ದಾರೆ. ಈ ವೇಳೆ ಮಂಧಾನ ಸ್ಟ್ರೈಕ್ ರೇಟ್(Strick Rate)123ಕ್ಕಿಂತ ಹೆಚ್ಚಿದೆ. ಇನ್ನು, ಮಾರ್ಚ್​(March) 4ರಿಂದ ಮಹಿಳಾ ಐಪಿಎಲ್​ ಆರಂಭವಾಗಲಿದ್ದು, ಪಂದ್ಯದ ಉದ್ಘಾಟನಾ ಪಂದ್ಯ ಬಳಿಕ ಅಂದರೆ ಮಾರ್ಚ್​ 5ರಂದು ಆರ್​ಸಿಬಿ ಮತ್ತು ಡೆಲ್ಲಿ(Delli) ಸೆಣಸಾಡಲಿದೆ.