Home Latest Sports News Karnataka Manu Bhakar: ಯಾರೊಂದಿಗೆ ಒಂದು ಕಳೆಯಲು ಬಯಸುವಿರಿ? ನಾಚಿ ನೀರಾಗಿ ಮನು ಭಾಕರ್ ಹೇಳಿದ್ದು ಈ...

Manu Bhakar: ಯಾರೊಂದಿಗೆ ಒಂದು ಕಳೆಯಲು ಬಯಸುವಿರಿ? ನಾಚಿ ನೀರಾಗಿ ಮನು ಭಾಕರ್ ಹೇಳಿದ್ದು ಈ ಹೆಸರನ್ನು !!

Manu Bhakar

Hindu neighbor gifts plot of land

Hindu neighbour gifts land to Muslim journalist

Manu Bhakar: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕಗಳನ್ನು ಗೆದ್ದುತಂದ ಮನು ಭಾಕರ್(Manu Bhakar) ಇದೀಗ ಭಾರತದ ಮನೆ ಮಾತಾಗಿದ್ದಾಳೆ. ಅಲ್ಲದೆ ಹಲವು ಹುಡುಗರ ಹೃದಯ ಕದ್ದ ಚೋರಿಯೂ ಹೌದು. ಈಕೆಗೆ ಈಗ ಪುರುಷಾಭಿಮಾನಿಗಳೇ ಹೆಚ್ಚು. ಆಕೆಯ ಕ್ರೀಡಾ ಸಾಹಸವನ್ನು ಮೆಚ್ಚುವುದರೊಂದಿಗೆ ಆಕೆಯ ಸೌಂದರ್ಯಕ್ಕೂ ಅನೇಕರು ಮಾರುಹೋಗಿದ್ದಾರೆ. ಈಕೆ ಈಗ ಹಲವರ ಕ್ರಶ್ ಕೂಡ ಹೌದು.

ಸಂದರ್ಶನವೊಂದರಲ್ಲಿ ಮನು ಭಾಕರ್ ಗೆ ಈ ಪ್ರೀತಿ, ಪ್ರೇಮ, ಪ್ರಣಯ ವಿಚಾರವಾಗಿ ಕೆಲವೊಂದು ತಮಾಷೆಯ ಪ್ರಶ್ನೆಗಳು ಎದುರಾಗಿವೆ. ಅದರಲ್ಲಿ ‘ನೀವು ಒಂದು ದಿನವನ್ನು ಯಾರ ಜೊತೆ, ಯಾವ ಕ್ರೀಡಾಳು ಜೊತೆ ಕಳೆಯಲು ಬಯಸುತ್ತೀರಿ? ಎಂಬುದು ಕೂಡ. ಇದಕ್ಕೆ ಮನು ಭಾಕರ್ ‘ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಧೋನಿ ಸರ್ ಮತ್ತು ವಿರಾಟ್ ಕೊಹ್ಲಿ. ಅವರಲ್ಲಿ ಯಾರೊಂದಿಗಾದರೂ ಒಂದು ಗಂಟೆ ಕಳೆಯುವುದು ಕೂಡ ತುಂಬ ಗೌರವದ ವಿಷಯ!’ ಎಂದಿದ್ದಾರೆ.

ನೀರಜ್ ಚೋಪ್ರಾ ಕುರಿತು ಸ್ಪಷ್ಟೀಕರಣ:
ನೀರಜ್ ಚೋಪ್ರಾ ಜೊತೆ ಮನು ಭಾಕರ್ ತಾಯಿ ಮಾತನಾಡುತ್ತಿರುವ ವಿಡಿಯೋ ಹಲವು ವದಂತಿಗಳಿಗೆ ಕಾರಣವಾಗಿತ್ತು. ಅಂದು ನೀರಜ್ ಜೊತೆ ಅಮ್ಮ ಏನು ಮಾತಾಡಿದ್ದಾರೆ ಎಂಬುದು ನನಗೆ ನಿಜವಾಗಿಯೂ ಗೊತ್ತಿಲ್ಲ. ಆ ಕ್ಷಣದಲ್ಲಿ ನಾನು ಅಲ್ಲಿ ಇರಲಿಲ್ಲ. 2018ರಿಂದ ನಾನು ಮತ್ತು ನೀರಜ್ ಕೆಲವು ಇವೆಂಟ್‌ಗಳಲ್ಲಿ ಭೇಟಿಯಾಗುತ್ತಿರುತ್ತೇವೆ. ಭೇಟಿಯಾದಾಗ ಕುಶಲೋಪಚಾರ ಹಾಗೂ ಕಾರ್ಯಕ್ರಮಗಳ ಮಾತನಾಡುತ್ತೇವೆ. ನಾನು ಹೆಚ್ಚು ನೀರಜ್ ಜೊತೆ ಮಾತನಾಡಿಲ್ಲ. ವೈರಲ್ ಆಗುತ್ತಿರುವ ವದಂತಿಗಳು ಯಾವುದೂ ನಿಜವಲ್ಲ ಎಂದು ಮನು ಭಾಕರ್ ಸ್ಪಷ್ಟನೆ ನೀಡಿದ್ದಾರೆ.