Home Latest Sports News Karnataka Kaviya Maran: ಐಪಿಎಲ್ ಪಂದ್ಯದ ವೇಳೆ ಕ್ಯಾಮೆರಾಮ್ಯಾನ್​ ವಿರುದ್ಧ ಕೋಪ ಗೊಂಡ ಕಾವ್ಯ ಮಾರನ್: ಅಷ್ಟಕ್ಕೂ...

Kaviya Maran: ಐಪಿಎಲ್ ಪಂದ್ಯದ ವೇಳೆ ಕ್ಯಾಮೆರಾಮ್ಯಾನ್​ ವಿರುದ್ಧ ಕೋಪ ಗೊಂಡ ಕಾವ್ಯ ಮಾರನ್: ಅಷ್ಟಕ್ಕೂ ಆಗಿದ್ದೇನು?

Kaviya Maran

Hindu neighbor gifts plot of land

Hindu neighbour gifts land to Muslim journalist

Kaviya Maran: ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದಿದ್ದು, ಭಾನುವಾರ ನಡೆದ 14ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ (SRH vs PBKS) ತಂಡ ಭರ್ಜರಿ ಜಯ ಸಾಧಿಸಿತು. ಆದರೆ, ಪಂದ್ಯದ ಮಧ್ಯೆ ಕ್ಯಾಮೆರಾಮ್ಯಾನ್ ಮೇಲೆ ಮಾಲಕಿ ಕಾವ್ಯ ಮಾರನ್ (Kaviya Maran) ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನು ಗೊತ್ತಾ?

SRH vs PBKS ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಎಸ್​ಆರ್​ಹೆಚ್ ಬೌಲರ್​ಗಳು ಇನ್ನಿಂಗ್ಸ್​ನ ಮೊದಲ ಎಸೆತದಿಂದಲೇ ಉತ್ತಮವಾಗಿ ಆಟವಾಡಿದರು. ಪಂದ್ಯದಲ್ಲಿ ಪಂಜಾಬ್ 88 ರನ್​ಗೆ 9 ವಿಕೆಟ್ ಕಳೆದುಕೊಂಡು 100 ಕ್ಕೂ ಮೊದಲು ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ, ಅಂತಿಮ ಹಂತದಲ್ಲಿ ಪಂಜಾಬ್ 143 ರನ್ ಗಳಿಸಿತು.

ಪಂಜಾಬ್ 15ನೇ ಓವರ್ ಆಗುವಾಗ 9 ವಿಕೆಟ್ ಕಳೆದುಕೊಂಡಿದ್ದು, ​ ಹೈದರಾಬಾದ್​ಗೆ ಇನ್ನಿಂಗ್ಸ್ ಮುಕ್ತಾಯದವರೆಗೆ ಪಂಜಾಬ್ ನ 1 ವಿಕೆಟ್ ಪಡೆಯಲು ಸಾಧ್ಯವಾಗಲೇ ಇಲ್ಲ. ಇದರಿಂದಾಗಿ ಎಸ್​ಆರ್​ಹೆಚ್ ಮಾಲಕಿ ಕಾವ್ಯ ಮಾರನ್ ಕೋಪಗೊಂಡಿದ್ದರು. 19ನೇ ಓವರ್ ನಡೆಯುತ್ತಿರುವಾಗ ಕ್ಯಾಮೆರಾಮ್ಯಾನ್ ಪಂದ್ಯದ ಪೂರ್ತಿ ಚಿತ್ರಣ ಸೆರೆಹಿಡಿಯುತ್ತಾ, ಕಾವ್ಯ ಅವರ ಫೋಟೋ, ವಿಡಿಯೋವನ್ನು (Kaviya Maran viral video) ಸೆರೆಹಿಡಿದಿದ್ದಾರೆ.

ಹೈದರಾಬಾದ್​ನ ಪ್ರತಿ ಪಂದ್ಯಕ್ಕೆ ಉತ್ಸಾಹ ತುಂಬಲು ಮಾಲಕಿ ಕಾವ್ಯ ಮಾರನ್ (Kaviya Maran) ಮೈದಾನದಲ್ಲಿ ಇದ್ದೇ ಇರುತ್ತಾರೆ. ಅಲ್ಲದೆ, ಪಂದ್ಯ ನಡೆಯುವಾಗ ಕ್ಯಾಮೆರಾಮ್ಯಾನ್ ಗಳು ಪಂದ್ಯದ ಜೊತೆ ಕ್ರಿಕೆಟ್ ಅಭಿಮಾನಿಗಳ ಫೋಟೋವನ್ನೂ ಸೆರೆಹಿಡಿಯುತ್ತಾರೆ.
ಮತ್ತು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತವೆ. ಆದರೆ, ಈ ಬಾರಿ ಕಾವ್ಯ ಫೋಟೋ ಸೆರೆಹಿಡಿದ ಕ್ಯಾಮೆರಾಮ್ಯಾನ್ ಮೇಲೆ ಸಿಟ್ಟಾಗಿದ್ದಾರೆ.

ಪಂದ್ಯದ ವೇಳೆ ಕಾವ್ಯ ಮ್ಯಾಚ್ ನೋಡೋದ್ರಲ್ಲಿ ಮಗ್ನಳಾಗಿದ್ದು, ಕ್ಯಾಮೆರಾಮ್ಯಾನ್ (camera man) ಕಾವ್ಯ ಅವರ ಫೋಟೋ ಸೆರೆಹಿಡಿದಿದ್ದು, ತುಂಬಾ ಹೊತ್ತಾದರೂ ಕಾವ್ಯ ಅವರನ್ನು ಸ್ಕ್ರೀನ್​ನಿಂದ ಬದಲಾಯಿಸದ ಕಾರಣ ಆಕೆ ಕೋಪಗೊಂಡು ಕ್ಯಾಮೆರಾಮ್ಯಾನ್​ಗೆ ನನ್ನನ್ನು ತೋರಿಸಬೇಡಿ ಎಂಬರ್ಥದಲ್ಲಿ ಜೋರಾಗಿ ಗುಡುಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

https://twitter.com/nani71224/status/1645116810587697153?s=20