Home Latest Sports News Karnataka ಕ್ರಿಕೆಟ್‌ನಲ್ಲಿ ಬಳಸುವ LED ಸ್ಟಂಪ್‌ಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತೇ? ಇದರ ಬೆಲೆ ಕೇಳಿದರೆ ನೀವು...

ಕ್ರಿಕೆಟ್‌ನಲ್ಲಿ ಬಳಸುವ LED ಸ್ಟಂಪ್‌ಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತೇ? ಇದರ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಖಂಡಿತ!!!

Hindu neighbor gifts plot of land

Hindu neighbour gifts land to Muslim journalist

ಕ್ರಿಕೆಟ್ ಈಗ ಒಂದು ಆಟವಾಗಿ ಮಾತ್ರ ಉಳಿದಿಲ್ಲ.ಅದೊಂದು ಉಧ್ಯಮವಾಗಿ ಬಲು ಎತ್ತರಕ್ಕೆ‌ ಬೆಳೆದು ನಿಂತಿದೆ. ಅದರಲ್ಲಿಯೂ ಐಪಿಎಲ್ ಲೀಗ್ ಆರಂಭವಾದರಂತೂ ರಸದೌತಣ. ಇನ್ನು ಕ್ರಿಕೆಟ್ ನ ವಿಷಯದಲ್ಲಿ ಸ್ಟಂಪ್ ಗಳ ಬಗ್ಗೆ ನಾವು ಮಾತನಾಡೋದಾದರೆ ಮೊದಲು, ಸಾಧಾರಣ ಸ್ಟಂಪ್ ಗಳನ್ನು ಬಳಸಾಗುತ್ತಿತ್ತು. ಅದರೆ ಇದೀಗ ಕೆಲ ವರ್ಷಗಳಿಂದಿಚೇಗೆ ಕ್ರಿಕೆಟ್ ನಲ್ಲಿಯೂ ತಂತ್ರಜ್ಞಾನದ ಬೆಳವಣಿಗೆ ಆಗಿದೆ.

ಅದರಂತೆ ಇದೀಗ ಕ್ರಿಕೆಟ್ ನಲ್ಲಿ ಎಲ್‌ಇಡಿ ಸ್ಟಂಪ್‌ಗಳನ್ನು ಹೆಚ್ಚು ಬಳಸಲಾಗುತ್ತದೆ. ಮೊದಲಿಗೆ ಇದನ್ನು ಐಸಿಸಿ ಕ್ರಿಕೆಟ್‌ನಲ್ಲಿ ಎಲ್‌ಇಡಿ ಸ್ಟಂಪ್‌ಗಳನ್ನು ಬಳಸಲು ಪ್ರಾರಂಭಿಸಿತು. ನಂತರ ಇದನ್ನು ಐಪಿಎಲ್ ಅಳವಡಿಸಿಕೊಂಡಿತು.

ಇದು ಅಂಪೈರ್ ಗಳಿಗೆ ಹಾಗೂ ಥರ್ಡ್ ಅಂಪೈರ್ ಗಳಿಗೆ ವಿಕೆಟ್ ಅನ್ನು ಗುರುತಿಸಲು ಬಹಳ ಸಹಾಯಕವಾಗುತ್ತಿದೆ. ಆದರೆ ನೀವು ಈ ಸ್ಟಂಪ್‌ಗಳ ಬೆಲೆಯನ್ನು ಕೇಳಿದರೆ ಒಮ್ಮೆ ಬೆಚ್ಚಿಬೀಳೋದಂತೂ ಖಂಡಿತ.

ಎಲ್ ಇಡಿ ಸ್ಟಂಪ್ ಗಳ ಬೆಲೆ ಲಕ್ಷಗಳ ಬೆಲೆಯಲ್ಲಿರುತ್ತದೆ. ಹೌದು ಒಂದು ಎಲ್‌ಇಡಿ ಸ್ಟಂಪ್ ಬೆಲೆ ಸರಿಸುಮಾರು 30 ಲಕ್ಷದಿಂದ 45 ಲಕ್ಷಗಳವರೆಗೆ ಇರುತ್ತದೆ.

ಈ ಸ್ಟಂಪ್ ಗಳು ಬ್ಯಾಟರಿ ಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸೆನ್ಸಾರ್ ಅನ್ನು ಅಳವಡಿಸಲಾಗಿದ್ದು, ಸ್ಟಂಪ್‌ಗೆ ಏನಾದರೂ ತಗುಲಿದರೆ ಮಾತ್ರವೇ ಅದು ಬೆಳಕಾಗುತ್ತದೆ. ಅಂದರೆ ಸ್ಟಂಪ್ ಗಳಲ್ಲಿ ಮೈಕ್ರೋಪ್ರೊಸೆಸರ್ ಅಳವಡಿಸಲಾಗಿದ್ದು, ಅದಕ್ಕೆ ಏನಾದರೂ ತಗುಲಿದಾಗ ಮಾತ್ರ ಬೆಳಕು ಕಾಣಿಸುತ್ತದೆ.

ಆಸ್ಟ್ರೇಲಿಯಾದ ಮೆಕ್ಯಾನಿಕಲ್ ಬ್ರಾಂಟೆ ಎಕೆರ್ಮನ್ ಎಂಬಾತನೇ ಇದನ್ನು ಮೊದಲಿಗೆ ಕಂಡು ಹಿಡಿದ ವ್ಯಕ್ತಿ. 2012ರಲ್ಲಿ ಬಿಗ್ ಬ್ಯಾಷ್ ಲೀಗ್ ನಲ್ಲಿ ಇದನ್ನು ಬಳಲಾಯಿತು. ಇದನ್ನು ಜಿಂಗೋಲಿಕ್ ಅಥವಾ ಜಿಂಗ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಸ್ಟಂಪ್ ಮತ್ತು ಬೇಲ್ ಗಳ ಬೆಲೆ 30 ಲಕ್ಷ ಹಾಗೂ ಪಾಕಿಸ್ತಾನದಲ್ಲಿ 47.5 ಲಕ್ಷ ಬೆಲೆಬಾಳುತ್ತದೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಈ ಎಲ್ಇಡಿ ಸ್ಟಂಪ್ ಗಳನ್ನು ಮೊದಲು ಪರಿಚಯ ಮಾಡಿಸಿದ್ದೇ ಭಾರತ. 2016ರಲ್ಲಿ ಆಯೋಜಿಸಿದ್ದ ಐಸಿಸಿ ಟಿ20 ವರ್ಲ್ಡ್ ಕಪ್ ನಲ್ಲಿ ಇದನ್ನು ಮೊದಲ ಬಾರಿಗೆ ಬಳಸಲಾಯಿತು. ಅಲ್ಲಿಯವರೆಗೂ ಇದನ್ನು ಕೇವಲ್ ಕೆಲ ಲೀಗ್ ಟೂರ್ನಿಮೆಂಟ್‌ಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು.