Home Social Viral Timetable: 6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್‌ ; ಓದಿಗೆ...

Viral Timetable: 6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್‌ ; ಓದಿಗೆ 15 ನಿಮಿಷ, ನಿದ್ದೆಗೆ 2 ಗಂಟೆ ! ವೇಳಾಪಟ್ಟಿಯಲ್ಲಿ ಇನ್ನು ಏನೆನೆಲ್ಲಾ ಇದೆ ಗೊತ್ತಾ?

Viral Timetable
Image Credit Source: Twitter

Hindu neighbor gifts plot of land

Hindu neighbour gifts land to Muslim journalist

Viral Timetable: ಇಂದಿನ ಮಕ್ಕಳು ಪಾಠಕ್ಕಿಂತ ಹೆಚ್ಚಾಗಿ ಆಟಕ್ಕೆ ಸಮಯ ಮೀಸಲಿಡುತ್ತಾರೆ. ಆಟ ಎಂದರೆ ಹಿಂದಿನ ಮಕ್ಕಳು ಎಲ್ಲಾ ಸ್ನೇಹಿತರೊಂದಿಗೆ ಸೇರಿ ಆಡುತ್ತಿದ್ದ ಆಟ ಅಲ್ಲ. ಈಗಿನವರು ಮೊಬೈಲ್ ನಲ್ಲಿ ಆಟವಾಡಲು, ಮೊಬೈಲ್ ಟಿವಿ ನೋಡುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಊಟವನ್ನೂ ಬಿಟ್ಟು ಟಿವಿ, ಮೊಬೈಲ್ ನಲ್ಲೇ ಮುಳುಗಿರುತ್ತಾರೆ.

ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 6 ವರ್ಷದ ಬಾಲಕನ ದಿನಚರಿಯ ಟೈಂ ಟೇಬಲ್ (Viral Timetable) ನೆಟ್ಟಿಗರಲ್ಲಿ ವಿಭಿನ್ನ ಭಾವನೆಯ ಜೊತೆಗೆ ನಗು ತರಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೋ ಫೋಟೋ ಗಳು ವೈರಲ್ ಆಗುತ್ತಲೇ ಇರುತ್ತದೆ ಅಂತೆಯೇ ಇದೀಗ ಬಾಲಕನೊಬ್ಬನ ದಿನಚರಿಯ ಟೈಮ್ ಟೇಬಲ್ ವೈರಲ್ ಆಗಿದೆ.

ಸಾಮಾನ್ಯವಾಗಿ ತರಗತಿಯ ವೇಳಾಪಟ್ಟಿ ಎಲ್ಲರೂ ಜೊತೆಗಿಟ್ಟುಕೊಂಡಿರುತ್ತಾರೆ. ಇನ್ನು ದಿನಚರಿಯ ವೇಳಾಪಟ್ಟಿಯನ್ನು ಓದಲು ಆಸಕ್ತಿ ಇರುವವರು, ಟಾಪರ್ ಗಳು ಮಾಡಿಕೊಂಡಿರುತ್ತಾರೆ. ಈ 6 ವರ್ಷ ವಯಸ್ಸಿನ ಮಗುವಿನ ಟೈಂ ಟೇಬಲ್ ಮಗುವಿನ ಮನಸ್ಸಿನಂತೆ ಮುಗ್ಧವಾಗಿದೆ.

ಹೌದು, 6 ವರ್ಷದ ಬಾಲಕನ ದಿನಚರಿಯನ್ನು ವೇಳಾಪಟ್ಟಿಯಲ್ಲಿ ಉತ್ತಮವಾಗಿ ವರ್ಗೀಕರಿಸಿದ್ದು ಸಮಯವನ್ನು ನಿರ್ವಹಿಸುವ ಪ್ರಯತ್ನವು ಶ್ಲಾಘನೀಯವಾಗಿದೆ. ವೇಳಾಪಟ್ಟಿಯಲ್ಲಿ ತಿಂಡಿಯ ಸಮಯ, ಟಿವಿ ನೋಡಲು ಸಮಯ ನಿಗದಿಯಾಗಿದೆ.

ಅಧ್ಯಯನದ ಸಮಯವನ್ನು ಕೇವಲ 15 ನಿಮಿಷಗಳು ಎಂದು ನಮೂದಿಸಲಾಗಿದೆ. ಆದರೆ, ನಿದ್ದೆ ಹಾಗೂ ಫೈಟಿಂಗ್ ಸಮಯ ಗಂಟೆಗಟ್ಟಲೆ ಇದೆ. ಇದಂತೂ ನೆಟ್ಟಿಗರಿಗೆ ಹೆಚ್ಚಿನ ನಗು ತರಿಸಿದೆ.
ಸದ್ಯ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಸಖತ್ ಆಗಿ ಕಮೆಂಟಿಸಿದ್ದಾರೆ.

ಇದನ್ನೂ ಓದಿ: Bank Locker : ದೀರ್ಘಕಾಲದವರೆಗೆ ಬ್ಯಾಂಕ್ ಲಾಕರ್ ತೆರೆಯದಿದ್ದರೆ ಏನಾಗುತ್ತದೆ ? ಆರ್ ಬಿಐ ಹೊಸ ಮಾರ್ಗಸೂಚಿಗಳು ಏನು ಹೇಳುತ್ತೆ ?!