Home Social Leopard Surya Namaskara: ಸೂರ್ಯ ನಮಸ್ಕಾರ ಮಾಡ್ತಿರೋ ಚಿರತೆ ವಿಡಿಯೋ ವೈರಲ್, ಯೋಗ ಕಲಿಸಿದ್ದು ಯಾರು?

Leopard Surya Namaskara: ಸೂರ್ಯ ನಮಸ್ಕಾರ ಮಾಡ್ತಿರೋ ಚಿರತೆ ವಿಡಿಯೋ ವೈರಲ್, ಯೋಗ ಕಲಿಸಿದ್ದು ಯಾರು?

Hindu neighbor gifts plot of land

Hindu neighbour gifts land to Muslim journalist

Leopard Surya Namaskara: ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ(Susanta Nanda) ಅವರು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿರ್ತಾರೆ. ಅವರ ಫಾಲೋವರ್ಸ್​ಗಳಿಗಾಗಿ ಆಗಾಗ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಚಿಂಪಾಂಜಿ ಮರಿಯೊಂದು ಪ್ರವಾಸಿಗರ ಮೇಲೆ ಕಲ್ಲೆಸಿದಿದ್ದಕ್ಕೆ ಅದರ ತಾಯಿ ಕೋಲಿನಿಂದ ಸರಿಯಾಗಿ ಪೆಟ್ಟು ಕೊಟ್ಟ ವಿಡಿಯೋ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆ ಪಾತ್ರವಾಗಿತ್ತು. ಇದರ ಬೆನ್ನಲೇ ಇದೀಗ ಚಿರತೆಯ(Leopard) ಆಕರ್ಷಕ ವೀಡಿಯೊವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗ್ತಿದೆ.

ಹೌದು, ಮನುಷ್ಯರು ಮಾತ್ರ ಅಲ್ಲ, ಪ್ರಾಣಿಯೂ ಕೂಡ ಫಿಟ್ನೆಸ್ ಹೇಗೆ ಮೇಟೈನ್ ಮಾಡುತ್ತಿದೆ ನೋಡಿ. ಚಿರತೆ ಸೂರ್ಯ (Leopard Surya Namaskara )ನಮಸ್ಕಾರ ನೋಡಿ ಎಂದು ಕ್ಯಾಪ್ಷನ್​​ ಬರೆದುಕೊಂಡಿದ್ದ ವಿಡಿಯೋವನ್ನು ಸುಸಂತ ಅವರು ಅಪ್ಲೋಡ್ ಮಾಡಿದ್ದು, ಇದೀಗಾ ಭಾರೀ ವೈರಲ್​ ಆಗಿದೆ. ಅಂದಹಾಗೆ ರಷ್ಯಾದ ದೂರದ ಪೂರ್ವದಲ್ಲಿರುವ ‘ಲ್ಯಾಂಡ್ ಆಫ್ ದಿ ಲೆಪರ್ಡ್’ ರಾಷ್ಟ್ರೀಯ ಉದ್ಯಾನವನದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.

ವೀಡಿಯೋದಲ್ಲಿ ಏನಿದೆ?: ಮುಂಜಾನೆ ವೇಳೆಯಲ್ಲಿ ಚಿರತೆಯೊಂದು ತನ್ನ ನಿದ್ದೆಯಿಂದ ಎದ್ದ ನಂತರ ಗುಡ್ಡದ ತುದಿಯಲ್ಲಿ ನಿಂತು ಸ್ಟ್ರೇಚ್ ಮಾಡಿಕೊಳ್ಳುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಈ ಚಿರತೆ ಮಾಡುತ್ತಿರುವ ಭಂಗಿಗಳೆಲ್ಲವೂ ಸೂರ್ಯ ನಮಸ್ಕಾರವನ್ನು ಹೋಲುತ್ತಿರುವುದು ವೀಡಿಯೋದಲ್ಲಿ ಇದೆ. ಈ ವೀಡಿಯೋಗೆ ಐಎಫ್‍ಎಸ್ ಅಧಿಕಾರಿ ಚಿರತೆಯಿಂದ ಸೂರ್ಯ ನಮಸ್ಕಾರ ಶೀರ್ಷಿಕೆಯನ್ನು ನೀಡಿದ್ದಾರೆ.

ಈಗಾಗಲೇ ಈ ವೀಡಿಯೋಗೆ 1,24,000ಕ್ಕೂ ಅಧಿಕ ವಿಕ್ಷಣೆ ಹಾಗೂ 3,200ಕ್ಕೂ ಹೆಚ್ಚು ಲೈಕ್ ಬಂದಿದೆ. ಜೊತೆಗೆ ಅನೇಕರು ಈ ವೀಡಿಯೋವನ್ನು ನೋಡಿ ಆನಂದಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟಿಸುತ್ತಿದ್ದಾರೆ. “ಯೋಗ ಶಿಕ್ಷಕರಿಲ್ಲ, ಯೂಟ್ಯೂಬ್ ಇಲ್ಲ, ಪುಸ್ತಕಗಳಿಲ್ಲ, ಈ ಯೋಗದ ಭಂಗಿಯನ್ನು ಚಿರತೆಗೆ ಕಲಿಸಿದವರು ಯಾರು? ” ಎಂದು ಒಬ್ಬ ಬಳಕೆದಾರರು ತಮಾಷೆಯಾಗಿ ಕಾಮೆಂಟ್​​ನಲ್ಲಿ ಬರೆದಿದ್ದಾರೆ. “ಫಿಟ್ನೆಸ್ ಫ್ರೀಕ್ ಚಿರತೆ,” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಯ ಸಾಕು ಪ್ರಾಣಿಯೂ ಸಂಜೆ ಹೀಗೆಯೇ ಮಾಡುತ್ತವೆ, ಅದು ಸೂರ್ಯ ನಮಸ್ಕಾರ ಅಲ್ಲ, ಸೋಮಾರಿತನ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.