Home Entertainment Exam Viral Answer Sheet : ಎಕ್ಸಾಮ್ ಆನ್ಸರ್ ಶೀಟ್ ನಲ್ಲಿ ಫಿಲ್ಮ್ ಸಾಂಗ್...

Exam Viral Answer Sheet : ಎಕ್ಸಾಮ್ ಆನ್ಸರ್ ಶೀಟ್ ನಲ್ಲಿ ಫಿಲ್ಮ್ ಸಾಂಗ್ ಬರೆದ ವಿದ್ಯಾರ್ಥಿ!! ಇಲ್ಲಿದೆ ನೋಡಿ ಈ ಆನ್ಸರ್‌ ಶೀಟ್‌!

Answer Sheet

Hindu neighbor gifts plot of land

Hindu neighbour gifts land to Muslim journalist

Answer Sheet : ಶಾಲಾ ದಿನಗಳೆಂದರೆ (School Days)ಆ ದಿನಗಳ ಗಮ್ಮತ್ತೇ ಬೇರೆ. ವಿದ್ಯಾರ್ಥಿಗಳಿಗೆ ಓದು, ಮಸ್ತಿ, ರಜೆ, ಪರೀಕ್ಷೆ ಭಯ, ಆತಂಕ ಕಾಡುವುದು ಸಹಜ. ಈಗಾಗಲೇ, ಎಸೆಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆ ಎಂದಾಗ ವಿದ್ಯಾರ್ಥಿಗಳು ಭಯಪಡುವುದು ಸಾಮಾನ್ಯ. ಇನ್ನು ಕೆಲವರು ಭಯದಲ್ಲಿ ಸರಿಯಾಗಿ ಓದದೆ ಪರೀಕ್ಷೆ(Exam) ಬರೆಯೋದು ಸಹಜ. ಇದೀಗ, ವಿದ್ಯಾರ್ಥಿಯು(Students)ಬರೆದ ಉತ್ತರ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಜೋರಾಗಿ ಸದ್ದು ಮಾಡುತ್ತಿದೆ.

ಒಂದೆಡೆ ಐಪಿಎಲ್ ಆರಂಭವಾಗಿದ್ದು, ಈ ನಡುವೆ ಮಕ್ಕಳು ಪರೀಕ್ಷೆಯಲ್ಲಿ ಏನು ಉತ್ತರ ಬರೆಯುತ್ತಾರೋ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಚಂಡೀಗಢದಲ್ಲಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಲ್ಲಿ ಒಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದ ಉತ್ತರ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ.

ವಿದ್ಯಾರ್ಥಿಯು ಉತ್ತರ ಪತ್ರಿಕೆಯಲ್ಲಿ’ ಗಿವ್ ಮಿ ಸಮ್ ಸನ್‌ಶೈನ್ ‘ ಮತ್ತು’ ಭಗವಾನ್ ಹೈ ಕಹಾನ್ ರೆ ತು ‘ಹಾಡಿನ ಸಾಲುಗಳನ್ನು ಬರೆದಿರುವುದನ್ನು ಕಂಡುಬರುತ್ತದೆ. ಈ ಉತ್ತರ ಪತ್ರಿಕೆಯನ್ನು(Answer Sheet) ವಿಡಿಯೋ(Video) ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ(Instagram), ಎರಡೇ ದಿನಗಳಲ್ಲಿ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋವನ್ನು ಚಂಡೀಗಢ ಯೂನಿವರ್ಸಿಟಿ ಮೀಮ್ಸ್ ಎಂಬ ಇನ್‌ಸ್ಟಾಗ್ರಾಮ್‌ ಪೇಜ್​​​ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಉತ್ತರ ಪತ್ರಿಕೆಯಲ್ಲಿ ದೊಡ್ದ ಸೊನ್ನೆಯನ್ನು(Zero Marks) ನೀಡಿದ್ದಾರೆ.

ವಿದ್ಯಾರ್ಥಿಯು ಮೂರು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, 3 ಈಡಿಯಟ್ಸ್‌ನ(3 Idiots) ‘ಗಿವ್ ಮಿ ಸಮ್ ಸನ್‌ಶೈನ್(‘Give Me Sunshine) ಮತ್ತು ಪಿಕೆ ಯಿಂದ (PK) ‘ಭಗವಾನ್ ಹೈ ಕಹಾನ್ ರೇ ತೂ’ ಜನಪ್ರಿಯ ಹಾಡುಗಳ ಸಾಹಿತ್ಯವನ್ನು ವಿದ್ಯಾರ್ಥಿ ಬರೆದಿದ್ದಾನೆ. ಒಟ್ಟಿನಲ್ಲಿ ವಿದ್ಯಾರ್ಥಿಯ ಉತ್ತರ ಪತ್ರಿಕೆ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಈಗಾಗಲೇ ಈ ಟ್ರಿಕ್ಸ್ ಅನ್ನು ಸಾಕಷ್ಟು ಮಂದಿ ಬಳಕೆ ಮಾಡಿರಬಹುದೇನೋ ಆದರೆ ಅಪರೂಪಕ್ಕೆ ಕೆಲವರು ಸಿಕ್ಕಿ ಬೀಳುತ್ತಾರೆ. ಬಹುಶಃ ವಿದ್ಯಾರ್ಥಿಯ ಬಳಿ ಈ ರೀತಿ ಉತ್ತರ ಬರೆಯಲು ಕಾರಣವೇನು ಎಂದು ಕೇಳಿದರೆ, ಉತ್ತರ ಗೊತ್ತಿಲ್ಲದೇ ಇದ್ದಾಗ ಗೊತ್ತಿದ್ದದನ್ನು ಬರೆಯಬೇಕಲ್ಲ ಎಂದು ಉತ್ತರ ನೀಡಬಹುದೇನೋ!! ಒಟ್ಟಿನಲ್ಲಿ ಇನ್ಸ್ತಾಗ್ರಂ ನಲ್ಲಿ ಈ ಉತ್ತರ ಪತ್ರಿಕೆ ಭಾರೀ ಸಂಚಲನ ಮೂಡಿಸಿದೆ.

https://www.instagram.com/reel/CqYAKe2oM_5/?utm_source=ig_embed&ig_rid=fb4c383d-800f-469a-9c80-60b3ffe84d2a