Home Social Belthangady: ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ ಎಫ್‌ಐಆರ್

Belthangady: ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ ಎಫ್‌ಐಆರ್

Hindu neighbor gifts plot of land

Hindu neighbour gifts land to Muslim journalist

 

Belthangady: ಸೌಜನ್ಯ (Soujanya) ತಾಯಿ ಕುಸುಮಾವತಿ ಸೇರಿದಂತೆ 12 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangady Police Station) ಎಫ್‌ಐಆರ್ ದಾಖಲಾಗಿದೆ.

ಅ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಿಮರೋಡಿ ಗಡಿಪಾರು ವಿರುದ್ಧ ಪ್ರತಿಭಟನೆ ಅಂತಾ ಕರೆ ನೀಡಲಾಗಿತ್ತು. ಪೊಲೀಸರಿಂದ ಅನುಮತಿ ಸಿಗದೇ ಇದ್ದರೂ ಜನ ಸೇರುವಂತೆ ಕರೆ ಕೊಡಲಾಗಿತ್ತು. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.