Home News ಕೋಳಿ ನಾಯಿಯ ಕಾದಾಟ ! ಈ ರೋಷಾವೇಶದ ಗುದ್ದಾಟದಲ್ಲಿ ಗೆದ್ದಿದ್ದು ಇವರೇ! ವೀಡಿಯೋ ನೋಡಿ

ಕೋಳಿ ನಾಯಿಯ ಕಾದಾಟ ! ಈ ರೋಷಾವೇಶದ ಗುದ್ದಾಟದಲ್ಲಿ ಗೆದ್ದಿದ್ದು ಇವರೇ! ವೀಡಿಯೋ ನೋಡಿ

Hindu neighbor gifts plot of land

Hindu neighbour gifts land to Muslim journalist

Dog and chicken fight: ನೀವು ಎರಡು ಕೋಳಿಗಳು ಕಾದಾಡುವುದು ನೋಡಿರುತ್ತೀರಾ. ಹಳ್ಳಿಗಳಲ್ಲಿ ಕೋಳಿ(Chicken) ಅಂಕ ಸಾಮಾನ್ಯ. ಆದರೆ ನೀವು ಕೋಳಿ ಮತ್ತು ನಾಯಿ ಕಾದಾಡುವುದು(Dog and chicken fight) ನೋಡಿದ್ದೀರಾ. ನಾಯಿ ಕೋಳಿಯನ್ನು ಹಿಡಿಯುವುದು, ತಿನ್ನುವುದು ಇದನ್ನು ನೋಡಿರಬಹುದು. ಆದರೆ ಇಲ್ಲಿ ಆಗುತ್ತಿರುವ ಕೋಳಿ-ನಾಯಿಯ ಯುದ್ಧ ನೀವು ಎಲ್ಲೂ ನೋಡಿರಲಿಕ್ಕಿಲ್ಲ. ಹಾಗಿದ್ರೆ ಬನ್ನಿ ಯುದ್ಧದ ಸ್ವಾರಸ್ಯ ಕೇಳಿರಿ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋ, ವಿಚಾರಗಳು ವೈರಲ್ ಆಗುತ್ತಲೇ ಇರುತ್ತವೆ. ಹಾಗೇ ಇದೀಗ ಕೋಳಿ- ನಾಯಿಯ ಕಾದಾಟದ ವಿಡಿಯೋವೊಂದು ಭಾರೀ ವೈರಲ್ (viral video) ಆಗಿದೆ. ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಅದೆಂತಹ ಕಾಳಗ? ತಿಳಿಯೋಣ.

ವೈರಲ್ ಆದ ವಿಡಿಯೋದಲ್ಲಿ ಹುಂಜ ಮತ್ತು ಶ್ವಾನ ಭಾರೀ ಕಾದಾಡುತ್ತಿದೆ. ನಾಯಿಯನ್ನು ಕಂಡು ಹುಂಜ ಕೋಪಗೊಂಡು, ರೋಷದಿಂದ ತನ್ನ ಕುತ್ತಿಗೆಯ ಗರಿಗಳನ್ನು ಅರಳಿಸಿ ಶ್ವಾನದ ಮೇಲೆ ಜಿಗಿಜಿಗಿದು ದಾಳಿ ಮಾಡುತ್ತಿದೆ. ಮತ್ತೆ ಮತ್ತೆ ಧೈರ್ಯದಿಂದ ನಾಯಿಯನ್ನು ಬೆನ್ನಟ್ಟಿ ದಾಳಿ ಮಾಡುತ್ತಿದೆ. ಈ ವಿಡಿಯೋ ನೋಡಿದ್ರೆ ಅಬ್ಬಬ್ಬಾ!! ಕೋಳಿಯ ಧೈರ್ಯ ಮೆಚ್ಚಲೇಬೇಕು ಅಂತಿರಾ.

ನಾಯಿ ಏನು ಬಲಹೀನವಲ್ಲ, ತಾನು ಧೈರ್ಯಶಾಲಿ ಎಂದು ಸರಿಯಾಗಿ ಕಾದಾಡುತ್ತಿದೆ. ನಿನ್ನನ್ನು ತಿನ್ನುತ್ತೇನೆ ಎಂದು ಬಾಯಿ ತೆರೆದು ಹುಂಜಕ್ಕೆ ಕಚ್ಚಲು ಹೋಗುತ್ತಿದೆ. ಆದರೆ ಹುಂಜ ಬಿಡಬೇಕಲ್ಲ, ತನ್ನ ಪಂಜದಿಂದ ಜಿಗಿದು ಜಿಗಿದು ಎದುರೇಟು ಕೊಡುತ್ತಿದೆ. ಶ್ವಾನ ಎಲ್ಲಿ ಹೋದರೂ ಹುಂಜ ಅದನ್ನು ಹಿಂಬಾಲಿಸುತ್ತಲೇ ಇತ್ತು. ಕೊನೆಗೂ ಹುಂಜ ಬಿಡಲೇ ಇಲ್ಲ, ಇದರ ಏಟಿಗೆ ಸುಸ್ತಾದ ನಾಯಿ, ಇದರ ಸಹವಾಸವೇ ಬೇಡ ಎಂದು ಅಲ್ಲಿಂದ ಓಡಿ ಹೋಯಿತು.

ಹುಂಜ-ಶ್ವಾನದ ಫೈಟ್ ಅನ್ನು ಸ್ಥಳೀಯರು ಮೊಬೈಲ್(mobile) ಮೂಲಕ ವಿಡಿಯೋ(video) ಮಾಡುತ್ತಿದ್ದರು. ಈ ಕಾಳಗ ಸಾಕಷ್ಟು ಹೊತ್ತು ನಡೆಯುತ್ತಲೇ ಇದ್ದು, ಕೊನೆಗೆ ಹುಂಜವೇ ಗೆದ್ದು ಬೀಗಿತು. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹಾಗೇ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.