Home Social Puducherry: ಪ್ರೇಯಸಿ ಜೊತೆಗಿರುವಾಗಲೇ ಮತ್ತೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ; ಪ್ಯಾಂಟ್​ ಜಿಪ್​...

Puducherry: ಪ್ರೇಯಸಿ ಜೊತೆಗಿರುವಾಗಲೇ ಮತ್ತೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ; ಪ್ಯಾಂಟ್​ ಜಿಪ್​ ಓಪನ್ ; ಸಹಪ್ರಯಾಣಿಕರಿಂದ ಧರ್ಮದೇಟು!!

Puducherry
Image source: ವಿಜಯವಾಣಿ

Hindu neighbor gifts plot of land

Hindu neighbour gifts land to Muslim journalist

Puducherry: ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತದೆ. ಇದೀಗ ಛೀ!! ಇಂತಾ ಜನರೂ ಇರುತ್ತಾರಾ? ಅನ್ನುವಂತಾ ವಿಚಾರ ವೈರಲ್ ಆಗುತ್ತಿದೆ. ಹೌದು, ಗರ್ಲ್​ಫ್ರೆಂಡ್​ (girl friend) ಜೊತೆಗಿರುವಾಗಲೇ ಇನ್ನೊಬ್ಬಳು ಯುವತಿಯ ಜೊತೆಗೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ಪುದುಚೇರಿಯಲ್ಲಿ (Puducherry) ನಡೆದಿದೆ.

ಯುವಕನ ಹೆಸರು ಶರತ್ ಎಂದಾಗಿದ್ದು, ಈತ ತನ್ನ ಪ್ರೇಯಸಿಯ ಜೊತೆಗೆ ಸ್ಲೀಪರ್​ ಕೋಚ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದನು. ಮುಂದಿನ ಸೀಟಿನಲ್ಲಿ ಯುವತಿಯೊಬ್ಬಳು ಕುಳಿತಿದ್ದಳು. ಯುವಕ ತನ್ನ ಪ್ರೇಯಸಿಯನ್ನು ಮಲಗಿಸಿ ನಂತರ ಮುಂದಿನ ಸೀಟಿನಲ್ಲಿದ್ದ ಯುವತಿಯ ಮೇಲೆ ಕಣ್ಣು ಹರಿಸಿದ್ದಾನೆ. ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸಿದ್ದಾನೆ. ಮೊದಲು ಆಕೆಯ ಮೈಮುಟ್ಟಲು ಶುರು ಮಾಡಿದ. ಯುವತಿ ಒಂದು ಕ್ಷಣ ಗಾಬರಿಗೊಂಡಳಾದರೂ ಆಕಸ್ಮಿಕವಾಗಿ ಇರಬಹುದು ಎಂದು ಸುಮ್ಮನಾದಳು.

ಶರತ್ ಮತ್ತೊಮ್ಮೆ ಹಾಗೇ ಮಾಡಿದ ಮತ್ತು ಆಕಸ್ಮಿಕ ಎಂದು ಯುವತಿಯ ಬಳಿ ಕ್ಷಮೆಯೂ ಕೇಳಿದ. ಹಾಗಾಗಿ ಆಕೆ ಸುಮ್ಮನಿದ್ದಳು. ಆದರೆ ಶರತ್ ತನ್ನ ವಿಕಾರ ರೂಪ ಪರಿಚಯಿಸಲು ಮುಂದಾದ. ತನ್ನ ಬಟ್ಟೆ ಬಿಚ್ಚಿ, ಪ್ಯಾಂಟ್ ಜಿಪ್ ತೆಗೆದು ಯುವತಿಯನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಈಗ ಯುವತಿ ಭಯಗೊಂಡ ಕಿರುಚಾಡಿದ್ದಾಳೆ. ಈಕೆಯ ಕಿರುಚಾಟ ಕೇಳಿ​ ಬಸ್ ನಲ್ಲಿದ್ದ ಸಿಬ್ಬಂದಿ, ಬಸ್ ಡ್ರೈವರ್​ ಮತ್ತು ಕಂಡಕ್ಟರ್​ ಓಡಿ ಬಂದು ವಿಷಯ ತಿಳಿದು, ಶರತ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಷ್ಟರಲ್ಲಿ ಶರತ್ ನ ಮಲಗಿದ್ದ ಪ್ರೇಯಸಿ ಎಚ್ಚರಗೊಂಡಿದ್ದಾಳೆ. ಏನೂ ತಿಳಿಯದ ಆಕೆ ತನ್ನ ಪ್ರಿಯಕರ ಶರತ್ ಗೆ ಹೊಡೆಯದಂತೆ ತಡೆಯಲು ಯತ್ನಿಸಿದಳು. ಇದರಿಂದ ಕೋಪಗೊಂಡ ಬಸ್ ನಲ್ಲಿದ್ದ ಸಿಬ್ಬಂದಿಯೊಬ್ಬರು ಆತನ ಗರ್ಲ್​ಫ್ರೆಂಡ್​ ಕಪಾಳಕ್ಕೆ ಬಾರಿಸಿದ್ದಾರೆ.

 

ಸಂತ್ರಸ್ತೆಯು ತಮಿಳುನಾಡಿನ ತಿಂಡಿವನಂ ಮೂಲದವಳು ಎನ್ನಲಾಗಿದ್ದು, ಈಕೆ ಬೆಂಗಳೂರಿಗೆ (Bengaluru) ತಲುಪಲು ಪುದುಚೇರಿಯಿಂದ ಸ್ಲೀಪರ್​ ಕೋಚ್​ ಬಸ್​ ಏರಿದ್ದಳು ಎನ್ನಲಾಗಿದೆ. ಸಂತ್ರಸ್ತೆ ತನಗಾದ ಕಿರುಕುಳದ ಬಗ್ಗೆ ವಿವರವಾಗಿ ಹೇಳಿದ್ದು, ಸದ್ಯ ಘಟನೆಯನ್ನು ದೃಶ್ಯವನ್ನು ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಚಾರ ವೈರಲ್ ಆಗುತ್ತಿದ್ದಂತೆ ಉರುಳಾಯನಪೇಟೆಯ ವ್ಯಾಪ್ತಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಬಸ್​ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಆರೋಪಿ ಶರತ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Actress Palak Tiwari: ಸೈಫ್ ಮಗ ಇಬ್ರಾಹಿಂ ಆಲಿ ಖಾನ್ ಜೊತೆ ಕಿಸ್ ಮಾಡುವಾಗ ಸಿಕ್ಕಿ ಬಿದ್ದ ಶ್ವೇತಾ ತಿವಾರಿ ಮಗಳು!!!