Home Karnataka State Politics Updates Zameer Ahmed: ಕರ್ನಾಟಕದವರಿದ್ರೆ ಮಾತ್ರ ಮನೆ ಕೊಡ್ತೀವಿ, ಹೊರಗಿನವರಿಗೆ ಮನೆ ಕೊಡಲ್ಲ: ಜಮೀರ್ ಸ್ಪಷ್ಟನೆ

Zameer Ahmed: ಕರ್ನಾಟಕದವರಿದ್ರೆ ಮಾತ್ರ ಮನೆ ಕೊಡ್ತೀವಿ, ಹೊರಗಿನವರಿಗೆ ಮನೆ ಕೊಡಲ್ಲ: ಜಮೀರ್ ಸ್ಪಷ್ಟನೆ

Hindu neighbor gifts plot of land

Hindu neighbour gifts land to Muslim journalist

Zameer Ahmed: ಕರ್ನಾಟಕದವರಿದ್ದರೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನಿಂದ ಬಂದವರಿಗೆ ನಾವು ಮನೆ ಕೊಡಲ್ಲ ಎಂದು ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆ ತೆರವು ವಿವಾದಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed) ಸ್ಪಷ್ಟನೆ ನೀಡಿದರು.

ಕೋಗಿಲು ಲೇಔಟ್ (Kogilu Layout) ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನ ಎಂಟ್ರಿಗೆ ಸಚಿವ ಜಮೀರ್ ಕಿಡಿಕಾರಿದ್ದಾರೆ. ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ? ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಮುಸ್ಲಿಮರನ್ನ ನೋಡಿಕೊಳ್ಳೋಕೆ, ಅವರು ಯಾರು ನಮಗೆ ಹೇಳೋಕೆ. ಮೊದಲು ಪಾಕಿಸ್ತಾನ ಅವರು ಅವರ ದೇಶ ನೋಡಿಕೊಳ್ಳಲಿ. ಪಾಕಿಸ್ತಾನದಲ್ಲಿ ಬಡತನ ಇದೆ. ಮೊದಲು ಅದನ್ನ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ಅಕ್ರಮ ಮನೆಗಳನ್ನ ಸಕ್ರಮ ಮಾಡ್ತಿರೋ ವಿಚಾರ ಕುರಿತು ಮಾತನಾಡಿ, ನಾಳೆ ನಾನು ಸುದ್ದಿಗೋಷ್ಠಿ ಮಾಡಿ ಸಂಪೂರ್ಣ ಮಾಹಿತಿ ಕೊಡ್ತೀನಿ. ಎಲ್ಲಾ ವಿವರ ಕೊಡ್ತೀನಿ. ಡಾಕ್ಯುಮೆಂಟ್ ಪರಿಶೀಲನೆ ಮಾಡಿ ಅಂತ ಸಿಎಂ, ಡಿಸಿಎಂ ಅವರು ಸೂಚನೆ ನೀಡಿದ್ದಾರೆ. ನಮ್ಮ ಕರ್ನಾಟಕದವರು ಇದ್ದರೆ ಮಾತ್ರ ಮನೆ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆಚೆಯಿಂದ ಬಂದವರಿಗೆ ನಾವು ಮನೆ ಕೊಡೊಲ್ಲ ಎಂದು ತಿಳಿಸಿದರು