Home Karnataka State Politics Updates V.Somanna: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ವಿ ಸೋಮಣ್ಣ ಅವರಿಗೆ ಹೇಳಿದ್ಯಾರು? ಮಾಹಿತಿ ಬಹಿರಂಗಪಡಿಸಿದ ಸೋಮಣ್ಣ!

V.Somanna: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ವಿ ಸೋಮಣ್ಣ ಅವರಿಗೆ ಹೇಳಿದ್ಯಾರು? ಮಾಹಿತಿ ಬಹಿರಂಗಪಡಿಸಿದ ಸೋಮಣ್ಣ!

V. Somanna
Image source: Star of mysore

Hindu neighbor gifts plot of land

Hindu neighbour gifts land to Muslim journalist

V.Somanna: ಈ ಬಾರಿ ಚುನಾವಣೆಗೆ ವರುಣಾ ಕ್ಷೇತ್ರದಿಂದ ವಿ ಸೋಮಣ್ಣ ( V.Somanna ) ಅವರು ಸ್ಪರ್ಧಿಸಲಿದ್ದಾರೆ. ಬೆಂಗಳೂರಿನ (Bengaluru) ಗೋವಿಂದರಾಜನಗರ ಕ್ಷೇತ್ರ ಬಿಟ್ಟು
ವಿ ಸೋಮಣ್ಣ ಅವರು ವರುಣಾದಲ್ಲಿ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯ (Siddaramaiah) ವಿರುದ್ಧ ಸ್ಪರ್ಧೆಗಳಿದಿದ್ದಾರೆ. ಅಷ್ಟಕ್ಕೂ ಸೋಮಣ್ಣ ವರುಣಾದಲ್ಲಿ ಕಣಕ್ಕಿಳಿಯಲು ಕಾರಣ‌ ಯಾರು? ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದ್ದು ಯಾರು? ಈ ಬಗ್ಗೆ ವಿ. ಸೋಮಣ್ಣ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ.

ಮೇ.02ರಂದು (ಇಂದು) ವರುಣಾ ಕ್ಷೇತ್ರದ ಹೊಸಕೋಟೆಯಲ್ಲಿ ಅಮಿತ್ ಶಾ (Amit Shah) ನೇತೃತ್ವದಲ್ಲಿ ನಡೆದ ಬಿಜೆಪಿ (bjp) ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸೋಮಣ್ಣ, “ನಾನು ಇಲ್ಲಿ ಚುನಾವಣೆಗೆ ನಿಲ್ಲಲು ಕಾರಣ ಅಮಿತ್ ಶಾ ಹಾಗೂ ನರೇಂದ್ರ ಮೋದಿ (Narendra modi). ಇಲ್ಲಿ ಸ್ಪರ್ಧಿಸಲು ನಾನು ಒಪ್ಪಿಕೊಳ್ಳಲು ಕಾರಣ ಬಿ ಎಸ್ ಯಡಿಯೂರಪ್ಪನವರು (B. S. Yediyurappa) ಎಂದು ಹೇಳಿದರು. ಅವರು ವಿಜಯನಗರದಂತೆ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ” ಎಂದು ಹೇಳಿದರು.

ಈ ವೇಳೆ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಿದ ಸೋಮಣ್ಣ “ಸಿದ್ದರಾಮಯ್ಯನವರೇ ವರುಣಾ ಕ್ಷೇತ್ರವಾಗಿ 15 ವರ್ಷವಾಗಿದೆ. ನೀವು 10 ವರ್ಷ ನಿಮ್ಮ‌ ಮಗ 05 ವರ್ಷ ಶಾಸಕರಾಗಿದ್ದೀರಾ? ಮೂರು ತಾಲ್ಲೂಕಿನಲ್ಲಿರುವ ಕ್ಷೇತ್ರವನ್ನು ಯಾಕೆ ಒಂದು ಮಾಡಲು ಆಗಲಿಲ್ಲ? 7 ಜಿಲ್ಲಾ ಪಂಚಾಯತಿ ಜನರ ಬಳಿಗೆ ಹೋಗಿದ್ದೀರಾ? ಅವರ ಸಮಸ್ಯೆ ಏನೆಂದು ಕೇಳಿದ್ದೀರಾ? ನಿಮ್ಮನ್ನು ಸಿಎಂ ಮಾಡಿದ ಕ್ಷೇತ್ರದ ಜನರ ಋಣ ತೀರಿಸಿದ್ದೀರಾ? ನೀವು ಸಿಎಂ ಆಗಿದ್ದಾಗ ನಿಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಎಂದು ಜನರ ಬಳಿ ಕೇಳಿದ್ದೀರಾ?” ಎಂದು ಈಟಿಯಂತೆ ಒಂದೇ ಸಮನೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.

ನನಗೆ 5 ವರ್ಷ ವರುಣಾ ಕ್ಷೇತ್ರದಲ್ಲಿ ಅವಕಾಶ ಕೊಡಿ. ಅವರು 15 ವರ್ಷ ಇಲ್ಲಿ ಬೇರೂರಿದ್ದರು. ಆದರೆ, ಏನೊಂದೂ ಅಭಿವೃದ್ಧಿ ಮಾಡಿಲ್ಲ. ನನಗೆ ಕೇವಲ 5 ವರ್ಷ ಅವಕಾಶ ಕೊಡಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ನಾನು ಕೂಡ ಸಿದ್ದರಾಮಯ್ಯ ಅವರ ಭಾಷೆ‌ ಬಳಸಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ತಾಯಿ ಚಾಮುಂಡೇಶ್ವರಿ, ಮಹಾದೇಶ್ವರನ ಕೃಪೆ‌ ನನಗಿದೆ. ನಾನು ಗೆಲ್ಲುತ್ತೇನೆ, ಆ ಭರವಸೆ ನನಗೂ ಇದೆ‌ ಎಂದು ಸೋಮಣ್ಣ ಹೇಳಿದರು.

 

ಇದನ್ನು ಓದಿ: Lokayukta Raid: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ : ಗಿಡದಲ್ಲಿತ್ತು ಒಂದು ಕೋಟಿ ರೂ.