Home Karnataka State Politics Updates Harish poonja: ನಮಗೆ ಹುಟ್ಟೋದು ಒಂದು ಇಲ್ಲ ಎರಡು, ಮುಸ್ಲಿಮರಿಗೆ ಹುಟ್ಟೋದು 4 !! ಬೆಳ್ತಂಗಡಿ...

Harish poonja: ನಮಗೆ ಹುಟ್ಟೋದು ಒಂದು ಇಲ್ಲ ಎರಡು, ಮುಸ್ಲಿಮರಿಗೆ ಹುಟ್ಟೋದು 4 !! ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಪ್ರಚೋದನಾಕಾರಿ ಸ್ಟೇಟ್ಮೆಂಟ್!!

Hindu neighbor gifts plot of land

Hindu neighbour gifts land to Muslim journalist

Harish poonja: ಹಿಂದೂಗಳಿಗೆ ಹುಟ್ಟೋದು ಒಂದು ತಪ್ಪಿದರೆ ಎರಡು ಮಕ್ಕಳು. ಆದರೆ ಮುಸ್ಲಿಂಮರಿಗೆ ಹುಟ್ಟೋದು 4, 4 ಮಕ್ಕಳು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ(Harish poonja) ಅವರು ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಜ.7 ರಂದು ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದಲ್ಲಿ ತುಳುವಿನಲ್ಲಿ ಭಾಷಣ (Tulu Speech) ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Belthangady MLA Harish Poonja) ಅವರು ‘ಇವತ್ತು ಒಂದು ಮಕ್ಕಳು ಎರಡು ಮಕ್ಕಳು. ಆದರೆ ಬೇರೆ ಧರ್ಮದವರಿಗೆ 4, ಮಕ್ಕಳು ಹುಟ್ಟುತ್ತವೆ.ಇನನ್ನು ನೋಡಿದ್ರೆ ನಮ್ಮ ಸಂಖ್ಯೆ ಎಷ್ಟು ಇದೆ. ಕೆಲವರು ಹೇಳ್ತಾರೆ ನಮ್ಮ ಸಂಖ್ಯೆ 80 ಕೋಟಿ ಇದೆ ಅವರದ್ದು 20 ಕೋಟಿ ಇರೋದಲ್ವಾ ಅಂತಾ. ಈ 20 ಕೋಟಿಗೆ ನಾಲ್ಕು, ನಾಲ್ಕು ಮಕ್ಕಳು ಹುಟ್ಟುತ್ತಾ ಹೋದ್ರೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಎಂದು ಪ್ರಚೋದನಾಕಾರಿ ಭಾಷಣದ ಮಾಡಿದ್ದಾರೆ.

 

Go back

Your message has been sent

Warning
Warning
Warning
Warning

Warning.

ಇಷ್ಟೇ ಅಲ್ಲದೆ ನಮಗೆ ಹುಟ್ಟೋದು ಒಂದ ತಪ್ಪಿದ್ರೆ ಎರಡು…ನಮ್ಮದು ಎಷ್ಟಾಗುತ್ತೆ ಲೆಕ್ಕ ಹಾಕಿ. ಒಂದು ಸ್ವಲ್ಪ ಹೊತ್ತು ಮನೆಯಲ್ಲಿ ಕೂತು ಯೋಚನೆ ಮಾಡಿ. ಎಷ್ಟು ವರ್ಷಕ್ಕೆ ನಮ್ಮ ಜನಸಂಖ್ಯೆ ಕಡಿಮೆಯಾಗಬಹುದು. 4 ಮಕ್ಕಳು ಮಾಡೋದ್ರಿಂದ ಎಷ್ಟು ವರ್ಷದಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಬಹುದು. ಒಂದು ವೇಳೆ ಮುಸ್ಲಿಮರ ಸಂಖ್ಯೆ 80 ಕೋಟಿ ಆಗಿ ನಮ್ಮ ಜನಸಂಖ್ಯೆ 20 ಕೋಟಿಯಾಗುವಾಗ ನಮ್ಮ ದೇಶದಲ್ಲಿರುವ ಹಿಂದೂಗಳ ಪರಿಸ್ಥಿತಿ ಏನಾಗಬಹುದು ಅನ್ನೋದನ್ನ ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಸದ್ಯ ಇದರ ವಿಡಿಯೋ ಕ್ಲಿಪ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.