Home Karnataka State Politics Updates Waqf controversy: ವಿಜಯಪುರ ವಕ್ಪ್ ವಿವಾದ: ಬಿಜೆಪಿ ಅಧ್ಯಕ್ಷರ ವಿರುದ್ಧ ಶಾಸಕ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ:...

Waqf controversy: ವಿಜಯಪುರ ವಕ್ಪ್ ವಿವಾದ: ಬಿಜೆಪಿ ಅಧ್ಯಕ್ಷರ ವಿರುದ್ಧ ಶಾಸಕ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ: ಹೋರಾಟದ ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

Waqf controversy: ವಿಜಯಪುರದಲ್ಲಿ(Vijayapura) ವಕ್ಪ್ ವಿವಾದದ ಬಗ್ಗೆ ಬಿಜೆಪಿ(BJP)‌ ತಂಡ ರಚನೆ‌ ವಿಚಾರ ಸಂಬಂಧ ಬಿಜೆಪಿ ಅಧ್ಯಕ್ಷರ ವಿಜಯೇಂದ್ರ(Vijayenda) ವಿರುದ್ಧ ಶಾಸಕ ಯತ್ನಾಳ್(MLA Yatnal) ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಮಾಡಿರುವ ತಂಡವನ್ನು ಬಹಿಷ್ಕಾರ ಮಾಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಹಾಗೂ ಸಂಸದ ಜಿಗಜಿಣಗಿ ಜಿಲ್ಲೆಯಲ್ಲಿದ್ದೇವೆ. ಈಗ ರಚನೆ ಮಾಡಿದ್ದು ವಿಜಯೇಂದ್ರ ಟೀಮ್. ನಾನು ಹಾಗೂ ಸಂಸದರು ಈ ಟೀಮ್ ಬಹಿಷ್ಕಾರ ಮಾಡಿದ್ದೇವೆ. ನಮ್ಮನ್ನು ಬಿಟ್ಟು ಕಾಟಾಚಾರಕ್ಕೆ ತಂಡ ರಚನೆ ಮಾಡಲಾಗಿದೆ. ಈ ಹಿಂದೆ ಯಡಿಯೂರಪ್ಪ ಜಮಿರ್ ಅವರಿಗೆ 1000 ಕೋಟಿ ಫಂಡ್ ನೀಡಿದ್ದರು. 1000 ಕೋಟಿ ನೀಡಿದ್ದಾರಂದ್ರೆ ಏನಾದರೂ ತಗೊಂಡಿರಬೇಕಲ್ವ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ನಾನು ಶಾಸಕನಿದ್ದಿನಿ, ನಮ್ಮ ಲೋಕಸಭಾ ಸದಸ್ಯರಿದ್ದಾರೆ. ನಮ್ಮಿಬ್ಬರನ್ನ ಬಿಟ್ಟು ಸಮಿತಿ ಮಾಡಿದ್ದಿರಿ ಅಂದ್ರೆ ಹೋರಾಟ ಮಾಡಿದವರನ್ನ ತುಳಿಬೇಕು ಅಂತಾ ಮಾಡಿದ್ದಾರೆ. ತಂದೆ ಮಕ್ಕಳು ಯಾವಾಗಲು ಇದೇ ಮಾಡ್ತಾರೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಪ್ರಧಾನಮಂತ್ರಿ ಕಚೇರಿವರೆಗೆ ವಕ್ಪ್ ವಿರುದ್ಧ ಹೋರಾಟ ಮಾಡಿದ್ದೇನೆ. ಈ ಹಿಂದೆ ವಿಧಾನಸಭೆಯಲ್ಲೂ ಸಹ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಇದೀಗ ಕಾಟಾಚಾರಕ್ಕೆ ತಂಡ ಮಾಡಿದ್ದಾರೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ 3 ವರೆಗೆ ಗಡುವು ನೀಡಿದ ಶಾಸಕ ಯತ್ನಾಳ್:
ನವೆಂಬರ್ 3 ರ ಒಳಗಾಗಿ ವಕ್ಪ್ ಎಂದು ನೊಂದಾಗಿರುವ ಹೆಸರನ್ನ ತೆಗೆಯಬೇಕು. ರೈತರ ಆಸ್ತಿಯಲ್ಲಿ ದಾಖಲಾಗಿರುವ ವಕ್ಪ್ ಹೆಸರು ತೆಗೆಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದ ಶಾಸಕ ಯತ್ನಾಳ್ ಎಚ್ಚರಿಸಿದ್ದಾರೆ. ನವೆಂಬರ್ 3 ರ ನಂತರ ‌ರಾಜಾಧ್ಯಂತ ಜನ ಜಾಗೃತಿ ಹೋರಾಟ ಹಾಗೂ ಕಾನೂನು ಹೋರಾಟ ಎರಡನ್ನು ಮಾಡಲಾಗುವುದು ಎಂದ ಯತ್ನಾಳ್ ಹೇಳಿದ್ದಾರೆ.