Home Karnataka State Politics Updates V Somanna: ಕೇಂದ್ರ ಸಚಿವ ವಿ. ಸೋಮಣ್ಣಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್: ಕಚೇರಿ ಕೊಟ್ಟಂಗೆ...

V Somanna: ಕೇಂದ್ರ ಸಚಿವ ವಿ. ಸೋಮಣ್ಣಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್: ಕಚೇರಿ ಕೊಟ್ಟಂಗೆ ಮಾಡಿ ಹಿಂತೆಗೆತ !

Hindu neighbor gifts plot of land

Hindu neighbour gifts land to Muslim journalist

V Somanna: ಕೇಂದ್ರ ಸಚಿವ ವಿ. ಸೋಮಣ್ಣ(V Somanna) ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ದೊಡ್ಡ ಶಾಕ್ ನೀಡಿದೆ. ಹಳೆಯ ಐಬಿ(IB)ಯನ್ನ ಕಚೇರಿ ಉಪಯೋಗಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿ ಸೋಮಣ್ಣ ನೂತನ ಕಚೇರಿ ಉದ್ಘಾಟನೆಗೆ ಪೂಜೆ ಮಾಡಿ ಕಚೇರಿ ತೆರೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ರಾಜ್ಯ ಸರ್ಕಾರ ನೂತನ ಸಂಸದರ ಕಚೇರಿಯನ್ನು ವಾಪಸ್ ಪಡೆದಿದೆ. ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೆಯ ಪರಿವೀಕ್ಷಣಾ ಮಂದಿರದಲ್ಲಿ ಸಂಸದರಿಗೆ ಕಚೇರಿಯನ್ನು ನೀಡಲಾಗಿತ್ತು.

ಇದೇ 18 ಭಾನುವಾರದಂದು ನೂತನ ಕಚೇರಿ ಉದ್ವಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಹಾಕಲಾಗಿತ್ತು. ನೂತನ ಕಚೇರಿ ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರಗಳನ್ನು ಹಾಕಿಸಿ ವಿ ಸೋಮಣ್ಣ ಉದ್ಘಾಟನೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ಹಳೆ ಐಬಿ ಕೊಠಡಿಯಲ್ಲಿ ನಾಲ್ಕು ಕೊಠಡಿಗಳನ್ನ ಸೋಮಣ್ಣರಿಗೆ ಸರ್ಕಾರ ನೀಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ವಾಪಾಸ್ ಪಡೆದು ವಿ ಸೋಮಣ್ಣಗೆ ಬಿಗ್ ಶಾಕ್ ನೀಡಿದೆ.

ಸರ್ಕಾರ ಕಟ್ಟಡವನ್ನು ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನು ಸಂಸದರು ಉನ್ನತಿಕರಣ ಮಾಡಿಸಿದ್ದರು. ಇದೀಗ ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಸೂಚನೆ ನೀಡಿದ್ದಾರೆ. ಸರ್ಕಾರದ ಈ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ. ಮುಂದೆ ಸೋಮಣ್ಣ ಅವರಿಗೆ ರಾಜ್ಯ ಸರ್ಕಾರ ಬೇರೆ ಕಟ್ಟಡ ನೀಡುತ್ತದಾ ? ಇಲ್ಲ ಸಂಸದರು ಈ ಬಗ್ಗೆ ಏನು ಹೇಳುತ್ತಾರೆ ಅನ್ನೋದನ್ನ ಕಾದು ನೋಡಬೇಕಷ್ಟೆ.