Home Karnataka State Politics Updates ಉಪ್ಪಿನಂಗಡಿಗೆ ಶಿಫ್ಟ್ ಆದ ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ | ಸರಣಿ ಟ್ವೀಟ್ ಮಾಡಿ...

ಉಪ್ಪಿನಂಗಡಿಗೆ ಶಿಫ್ಟ್ ಆದ ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ | ಸರಣಿ ಟ್ವೀಟ್ ಮಾಡಿ ಗುಟ್ಟು ಬಿಚ್ಚಿಟ್ಟ ಬಿಜೆಪಿ?!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹೆಡ್ ಕ್ವಾರ್ಟರ್ಸ್ ಆಗಿ ಉಪ್ಪಿನಂಗಡಿಯನ್ನು ಆಯ್ಕೆ ಮಾಡಲಾಗಿದೆ !. ಆಶ್ಚರ್ಯ ಕರ ಸಂಗತಿ ಏನೆಂದರೆ, ಹೆಡ್ ಕ್ವಾಟರ್ಸ್ ಬದಲಿಸಿದ್ದು ರಾಜ್ಯ ಬಿಜೆಪಿ !! ಉಪ್ಪಿನ ಅಂಗಡಿಯನ್ನು ಪ್ರಸ್ತಾಪಿಸಿ, ಬಿಜೆಪಿ ರಾಜ್ಯ ಬಿಜೆಪಿ ನಾಯಕತ್ವವು ಸರಣಿ ಟ್ವೀಟ್ ಮಾಡಿ ‘ಉಪ್ಪಿನ ಅಂಗಡಿ ‘ಯನ್ನು ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ ಎಂದು ಕರೆದಿದೆ. ಏನು ಕನ್ಫ್ಯೂಸ್ ಆದ್ರಾ, ಹಾಗಾದರೆ ಬಿಜೆಪಿ ಮಾಡಿದ ಟ್ವೀಟ್ ಓದಿ.

10-ಜನಪಥ್ ಎಂಬ ಸೆಂಟ್ರಲ್ ಕಾಂಗ್ರೆಸ್ ಪಕ್ಷದ ಆಫೀಸ್ ಅನ್ನು ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

” ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ, ಭ್ರಷ್ಟಾಚಾರದ ಕಪ್ಪು ಹಣ ಕೊನೆಗೆ ಸೇರುವುದು ಇದೇ ಸ್ಥಳಕ್ಕೆ ಅಲ್ಲವೇ?, ಡಿಕೆಶಿ ಅವರೇ ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ? ” ಎಂದು ಟ್ವೀಟ್ ಬಾಣ ಬಿಟ್ಟಿದೆ. .

ಹಾಗೆ ಮಾಡುವಾಗ ದಕ್ಷಿಣಕನ್ನಡ ಜಿಲ್ಲೆಯ ಭರ್ಜರಿ ವ್ಯಾಪಾರ ತಾಣವೂ, ಹಲವು ಊರುಗಳಿಗೆ ದಾರಿ ಕವಲೊಡೆಯುವ ಉಪ್ಪಿನಂಗಡಿಯನ್ನು ( ಉಪ್ಪಿನ ಅಂಗಡಿ ) ಕನ್ನಡಿಗರು ಆಗ ನೆನಪು ಮಾಡಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ,” ಭ್ರಷ್ಟಾಚಾರದ ಅಲಿಬಾಬಾ ಮತ್ತು ಕಾಂಗ್ರೆಸ್‌ ಕಳ್ಳರು ” ‌ಎಂದು ಲೇವಡಿ ಮಾಡಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ ಕಾಂಗ್ರೆಸ್. ನಕಲಿ ಗಾಂಧಿ ಕುಟುಂಬವೇ ಈ ಗಂಗೋತ್ರಿಯ ಪ್ರಧಾನ ಪಾಲುದಾರರು‌. ಹಾಗಾದರೆ,  ಅಲಿಬಾಬಾ ಮತ್ತು ಕಾಂಗ್ರೆಸ್‌ ಕಳ್ಳರು ಗುಂಪಿನಲ್ಲಿರುವವರು ಯಾರು? ಎಂದು ಪ್ರಶ್ನಿಸಿದೆ.

“ಆಗಸ್ಟಾ ವೆಸ್ಟ್ ಲ್ಯಾಂಡ್,  2ಜಿ ಸ್ಪೆಕ್ಟ್ರಮ್ ಹಂಚಿಕೆ, ನ್ಯಾಷನಲ್ ಹೆರಾಲ್ಡ್,  ವಾದ್ರಾ-ಡಿಎಲ್‌ಎಫ್ ,ನೆಹರೂ ಕಾಲದ ಮುಂಡ್ರಾ ಹಗರಣ, ಇಂದಿರಾ ಕಾಲದ ಮಾರುತಿ ಹಗರಣಗಳ ಮೂಲಕ‌ ನಾವು ಭ್ರಷ್ಟಾಚಾರ ಮಾಡಲೆಂದೇ ಅಧಿಕಾರದಲ್ಲಿದ್ದೇವೆ” ಎಂಬುದನ್ನು ಕಾಂಗ್ರೆಸ್ ಸೂಚ್ಯವಾಗಿ ತಿಳಿಸಿತ್ತು” ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹಳೆಯ ಭ್ರಷ್ಟಾಚಾರದ ವಿಷಯ ಎತ್ತಿಕೊಂಡು ಹರಿ ಹಾಯ್ದಿದೆ.