Home Karnataka State Politics Updates BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಈ ಯುವ ನಾಯಕ ನೇಮಕ ?! ವರಿಷ್ಠರೆಲ್ಲರನ್ನು ಬಿಟ್ಟು ಈ...

BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಈ ಯುವ ನಾಯಕ ನೇಮಕ ?! ವರಿಷ್ಠರೆಲ್ಲರನ್ನು ಬಿಟ್ಟು ಈ ಕಿರಿಯ ನಾಯಕನಿಗೆ ಬಿಜೆಪಿ ಮಣೆ ಹಾಕಿದ್ದೇಕೆ

Hindu neighbor gifts plot of land

Hindu neighbour gifts land to Muslim journalist

BJP: ಜೆಪಿ ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಐದು ವರ್ಷಗಳು ಸಂಪೂರ್ಣವಾಗಿವೆ. ಆದರೂ ಕೂಡ ಇಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷರಾಗಿ(National President) ಅವರೇ ಮುಂದುವರೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬದಲಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಿಜೆಪಿ ವರಿಷ್ಠರು ಅದನ್ನು ತಳ್ಳಿ ಹಾಕಿ ನಡ್ಡಾ ಅವರನ್ನೇ ತಮ್ಮ ಅಧ್ಯಕ್ಷರನ್ನಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೀಗ ಮತ್ತೆ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯ ವಿಚಾರ ಮುನ್ನಲೆಗೆ ಬಂದಿದೆ. ಅಚ್ಚರಿಯೇನೆಂದರೆ ಬಿಜೆಪಿಯು ಹಿರಿಯ ನಾಯಕರನ್ನೆಲ್ಲ ಬಿಟ್ಟು ಈ ಯುವನಾಯಕನಿಗೆ ರಾಷ್ಟ್ರೀಯ ಅಧ್ಯಕ್ಷರ ಪಟ್ಟವನ್ನು ಕಟ್ಟಲು ಮುಂದಾಗಿದೆಯಂತೆ. ಹಾಗಿದ್ರೆ ಆ ಯುವ ನಾಯಕ ಯಾರು? ಅವರು ಬಿಜೆಪಿ ವರಿಷ್ಠರ ಮನೆಗೆದ್ದಿದ್ದೇಕೆ? ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು ಹೊಸ ವರ್ಷಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಆಗಲಿದ್ದು, ಆ ಬಳಿಕ ರಾಜ್ಯದಲ್ಲೂ ಪದಾಧಿಕಾರಿಗಳ ಬದಲಾವಣೆ ಆಗಲಿದೆ. ವಿವಿಧ ರಾಜ್ಯಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಬಹುತೇಕ ಜನವರಿಯಲ್ಲಿ ಆರಂಭವಾಗಬಹುದು, ಅದೇ ವೇಳೆ ಕರ್ನಾಟಕದಲ್ಲೂ ಬದಲಾವಣೆ ಆಗಲಿದೆ ಎಂದು ಮೂಲಗಳು ಹೇಳಿವೆ. ಇದೆಲ್ಲ ಓಕೆ ಆದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವ ಆ ಯುವ ನಾಯಕ ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಅವರು ಬೇರಾರು ಅಲ್ಲ ಮಾಜಿ ಕೇಂದ್ರ ಸಚಿವ, ಬಿಜೆಪಿಯ ಯುವ ನೇತಾರ ಅನುರಾಗ್ ಠಾಕೂರ್(Anurag Thakur) ಅವರು.

ಯಸ್.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್‌ ಸಿಂಗ್ ಠಾಕೂರ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ‘ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿ ವಿವಿಧ ಖಾತೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದ ಅನುರಾಗ್‌ ಪಕ್ಷ ಸಂಘಟನೆಯಲ್ಲೂ ಪಳಗಿದ್ದು, ಯುವ ಸಮೂಹದಲ್ಲೂ ಜನಪ್ರಿಯರಾಗಿದ್ದಾರೆ. ಈ ಅವರನ್ನು ಅಧ್ಯಕ್ಷ ಮಾಡುವುದಕ್ಕಾಗಿಯೇ ಬಾರಿ ಅವರಿಗೆ ಯಾವುದೇ ಖಾತೆ ನೀಡಿಲ್ಲ ’ ಎಂದು ಮೂಲಗಳು ತಿಳಿಸಿವೆ.