

Karnataka Government: ರಾಜ್ಯ ಸರ್ಕಾರ ನೀಡಿದ ಉಚಿತ ಗ್ಯಾರೆಂಟಿಗಳಿಂದ ಕರ್ನಾಟಕ ಖಜಾನೆ ಖಾಲಿಯಾಗಿದೆ. ಬೆಲೆ ಏರಿಕೆ ಮಾಡಿದರೂ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಂಗೆಟ್ಟಿರುವ ಸರ್ಕಾರ ಹಣ ಹೊಂದಿಸಲಾಗದೆ ಇದೀಗ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಕಂಪೆನಿಗೆ ವಹಿಸಲು ಮುಂದಾಗಿದೆ. ಸರ್ಕಾರದ ಈ ಕರ್ಮಕಾಂಡ ರಾಹುಲ್ ಗಾಂಧಿ(Rahul Gandhi) ಆಪ್ತ ಸಲಹೆಗಾರರಿಗಾರುವ ಪ್ರವೀಣ್ ಚಕ್ರವರ್ತಿ(Praveen Chakravarti) ಅವರಿಂದಲೇ ಬಯಲಾಗಿದೆ.
ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದುವರೆಗೂ ಮದ್ಯದ ದರ ಏರಿಸಿ ಏರಿಸಿ ಮದ್ಯ ಪ್ರಿಯರ ಶಾಪಕ್ಕೆ ಗುರಿಯಾಗಿತ್ತು. ಬಳಿಕ ಮುದ್ರಾಂಕ, ನೋಂದಣಿ ಶುಲ್ಕ ಎಲ್ಲವೂ ಏರಿತ್ತು. ಇದೀಗ ಸರ್ಕಾರದ ಕಣ್ಣು ಪೆಟ್ರೋಲ್, ಡೀಸೆಲ್ ಮೇಲೆ ಬಿದ್ದಿದ್ದು ಅದರ ಬೆಲೆಯೂ ಏರಿಕೆ ಕಂಡಿದೆ. ಆದರೆ ಈ ಬೆನ್ನಲ್ಲೇ ಅಚ್ಚರಿ ಸತ್ಯ ಹೊರಬಿದ್ದಿದ್ದು ಹಣ ಹೊಂದಿಸಲು ಬೇರೆ ದಾರಿ ಕಾಣದ ಸರ್ಕಾರ ಇದೀಗ ಖಾಸಗಿ ಕಂಪನಿಗೆ 10 ಕೋಟಿ ರೂಪಾಯಿಗೆ ಗುತ್ತಿಗೆ ನೀಡಿದೆ. ಈ ಕಂಪನಿ ಇದೀಗ ಆದಾಯ ಕ್ರೋಢೀಕರಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಮಾರ್ಗಗಳನ್ನು ಸೂಚಿಸಲಿದೆ ಎಂದು ತಿಳಿದುಬಂದಿದೆ.
ಹೌದು, ಸಿದ್ದರಾಮಯ್ಯ ಸರ್ಕಾರ ಖಾಸಗಿ ಬೋಸ್ಟನ್ ಕನ್ಸಲ್ಟೆಂಗ್ ಗ್ರೂಪ್ ಕಂಪನಿಯ ಮೊರೆ ಹೋಗಿದೆ. ಎಲ್ಲಾ ಪ್ರಯತ್ನದ ಹೊರತಾಗಿಯೂ ಸಿದ್ದರಾಮಯ್ಯ ಸರ್ಕಾರ ಹಣದ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್(BCG) ಕಂಪನಿಗೆ ಗುತ್ತಿಗೆ ನೀಡಿದೆ. ಈ ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಕಂಪನಿ ಸಿದ್ದರಾಮಯ್ಯ ಸರ್ಕಾರ ಆದಾಯ ಕ್ರೋಢಿಕರಣಕ್ಕೆ ಮಾರ್ಗಗಳನ್ನು ಹುಡಿಕೊಡಲಿದೆ. ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.
ಪ್ರವೀಣ್ ಚಕ್ರವರ್ತಿ ಹೇಳಿದ್ದೇನು?
ರಾಹುಲ್ ಗಾಂಧಿ ಆಪ್ತ ಸಲಹೆಗಾರರಿಗಾರುವ ಪ್ರವೀಣ್ ಚಕ್ರವರ್ತಿ ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದಾರೆ. ಒಂದು ರಾಜ್ಯ ಸರಿಯಾದ ಮಾರ್ಗದಲಿಲ್ಲ ಅನ್ನೋದನ್ನು ಒತ್ತಿ ಹೇಳಿದ್ದಾರೆ. ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಕಂಪನಿ ಸಿದ್ದರಾಮಯ್ಯ ಸರ್ಕಾರ ಆದಾಯ ಕ್ರೋಢಿಕರಣಕ್ಕೆ ಮಾರ್ಗಗಳನ್ನು ಹುಡಿಕೊಡಲಿದೆ. ಇದೇ ವೇಳೆ ರಾಜ್ಯದ ಖರ್ಚು ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸಲು ಮೂಲಗಳನ್ನು ಹುಡುಕಿಕೊಡಲಿದೆ. ಪಬ್ಲಿಕ್-ಪ್ರವೈಟ್ ಪಾರ್ಟ್ನರ್‌ಶಿಪಿ(ಪಿಪಿಪಿ ಮಾಡೆಲ್), ಸೋರಿಕೆ ತಡೆಗಟ್ಟುವಿಕೆ, ಆಸ್ತಿಗಳಿಂದ ಆದಾಯ ಕ್ರೋಢಿಕರಣ, ವಿವಿಧ ಇಲಾಖೆಗಳಲ್ಲಿ ಆದಾಯ ಹೆಚ್ಚಳಕ್ಕೆ ಮಾರ್ಗ, ಮೈನಿಂಗ್, ಅರಣ್ಯ ಸೇರಿದಂತೆ ಹಲವು ಮೂಲಗಳಿಂದ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಬಿಸಿಜಿ ಹೊತ್ತುಕೊಂಡಿದೆ. ಹಾಗಾಂತ ಈ ಕಂಪನಿ ಸುಮ್ಮನೆ ಈ ಹೊಣೆ ಹೊತ್ತುಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕಳೆದ 6 ತಿಂಗಳಲ್ಲಿ ಬೋಸ್ಟನ್ ಗ್ರೂಪ್ ಕಂಪನಿಗೆ ಬರೋಬ್ಬರಿ 9.5 ಕೋಟಿ ರೂಪಾಯಿ ಪಾವತಿಸಿದೆ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗೆ ಎಷ್ಟು ಖರ್ಚಾಗುತ್ತೆ?
ಕಾಂಗ್ರೆಸ್ ಅಧಿಕಾರಕ್ಕೇರಲು ಕರ್ನಾಟಕದಲ್ಲಿ 5 ಉಚಿತ ಗ್ಯಾರೆಂಟಿ ಭರವಸೆ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ 5 ಉಚಿತ ಗ್ಯಾರೆಂಟಿಯಿಂದ ಹೈರಾಣಾಗಿದೆ. ಕೇವಲ ಗ್ಯಾರೆಂಟಿಗಾಗಿ ವಾರ್ಷಿಕ 50 ರಿಂದ 60 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸರ್ಕಾರದ ಇತರ ವೆಚ್ಚ, ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ಕ್ರೋಢಿಕರಿಸಬೇಕಾಗಿದೆ.













