Home Karnataka State Politics Updates Sumalatha Ambareesh: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ ಅಂಬರೀಷ್’ರಿಂದ ಬಿಗ್...

Sumalatha Ambareesh: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ ಅಂಬರೀಷ್’ರಿಂದ ಬಿಗ್ ಹೇಳಿಕೆ !

Sumalatha Ambareesh
Image source: Public TV

Hindu neighbor gifts plot of land

Hindu neighbour gifts land to Muslim journalist

Sumalatha Ambareesh : ಮಂಡ್ಯ ರಾಜಕಾರಣ ಕ್ಷಣಕ್ಕೂ ಹೊಸ ತಿರುಗುಗಳನ್ನು ಪಡೆದುಕೊಂಡು ರಣಾಂಗಣ ರೋಚಕವಾಗುತ್ತಿದೆ. ಹಿರಿಯ ನಾಯಕರನ್ನು ಜೆಡಿಎಸ್ (JDS) ಸರಿಯಾಗಿ ನಡೆಸಿಕೊಂಡಿಲ್ಲ. ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹಾಲಿ ಸಂಸದೆ ಸುಮಲತಾ (Sumalatha Ambareesh) ಅಂಬರೀಶ್ (Sumalatha) ಹೇಳಿದ್ದಾರೆ.

‘ ಎಂ ಶ್ರೀನಿವಾಸ್ ಅವರಂತಹ 3 ಬಾರಿ ಎಂಎಲ್‌ಎ ಆಗಿದ್ದವರಿಗೆ ಜೆಡಿಎಸ್ ಅವಮಾನ ಮಾಡಿದೆ. ಈ ಬಾರಿ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ಉತ್ತಮ ವಾತಾವರಣ ಇದೆ. ಕೆಆರ್ ಪೇಟೆ ಕ್ಷೇತ್ರದಲ್ಲಿಯಂತೂ 100% ಬಿಜೆಪಿಗೆ ವರದಾನ ಎನ್ನುವಂತೆ ಇದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯೇ ಎಲ್ಲರನ್ನೂ ಸೈಡ್ ಹೊಡ್ಯತ್ತೆ ಅನ್ನೋ ವಾತಾವರಣ ಕಾಣಿಸುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಇಲ್ಲ ಎನ್ನುವ ಕಾಂಗ್ರೆಸ್ (Congress), ಜೆಡಿಎಸ್‌ನವರು ಫಲಿತಾಂಶ ಬಂದ ಮೇಲೆ ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ‘ ಎಂದು ಸುಮಲತಾ ಅವರು ಟಾಂಗ್ ನೀಡಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡುತ್ತಾ ಸುಮಲತಾ ಅವರು ಈ ಹೇಳಿಕೆ ನೀಡಿದ್ದಾರೆ.

” ಈ ಮಂಡ್ಯ ಜಿಲ್ಲೆಯ ಜನರಿಗೆ ಬದಲಾವಣೆ ಬೇಕಾಗಿದೆ. ಜನ ಎರಡು ಪಕ್ಷಗಳ ಮೇಲೆ ಜನರು ಬೇಸತ್ತು ಹೋಗಿದ್ದಾರೆ. ದ್ವೇಷ, ಮೋಸದ ಮಾತು, ಸುಳ್ಳು, ದಬ್ಬಾಳಿಕೆಯಿಂದ ಜನರು ಈಗ ತಿರುಗಿಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಸೀಟ್‌ಗಳನ್ನು ಬಿಜೆಪಿ ಗೆಲ್ಲುತ್ತದೆ ” ಎಂದು ಸುಮಲತಾ ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಮಾಜಿ ಶಾಸಕಿ ಕಲ್ಪನ ಸಿದ್ದರಾಜು ಭೇಟಿ ವಿಚಾರವಾಗಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಇರುವಾಗಲೇ ಕಲ್ಪನ ಸಿದ್ದರಾಜು ಅವರು ನಮ್ಮ ಸ್ನೇಹಿತರು. ಅವರು ಇಷ್ಟು ದಿನ ಬೇರೆ ಬೇರೆ ಪಕ್ಷದಲ್ಲಿ ಇದ್ದರು. ಈಗ ಬಿಜೆಪಿಗೆ ಸಪೋರ್ಟ್ ಮಾಡಿ ಎಂದು ಕೇಳಿದ್ದೇನೆ. ಖಂಡಿತವಾಗಿಯೂ ಅವರು ಬಿಜೆಪಿಗೆ ಸಪೋರ್ಟ್ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ: Devanuru mahadeva : ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ಸಾಹಿತಿ ದೇವನೂರು ಮಹಾದೇವ ಕಿಡಿ!!