Home Karnataka State Politics Updates ರಾಜ್ಯದ ರಾಜಕಾರಣಿಗಳ ಕೈಯ್ಯಲ್ಲಿ ಅರ್ಜೆಂಟ್ ಕೆಲಸವಾಗಬೇಕಾದರೆ ಮುತ್ತು ಕೊಡ್ಬೇಕಾ!!? ತನ್ನೂರಿನ ರಸ್ತೆ ಸಮಸ್ಯೆಯ ವಿವರಿಸಿ ಆದಷ್ಟು...

ರಾಜ್ಯದ ರಾಜಕಾರಣಿಗಳ ಕೈಯ್ಯಲ್ಲಿ ಅರ್ಜೆಂಟ್ ಕೆಲಸವಾಗಬೇಕಾದರೆ ಮುತ್ತು ಕೊಡ್ಬೇಕಾ!!? ತನ್ನೂರಿನ ರಸ್ತೆ ಸಮಸ್ಯೆಯ ವಿವರಿಸಿ ಆದಷ್ಟು ಬೇಗ ಬಗೆಹರಿಸಲು ಬೊಮ್ಮಾಯಿಗೇ ಕಿಸ್ ಕೊಟ್ಟ ಮಹಿಳೆ

Hindu neighbor gifts plot of land

Hindu neighbour gifts land to Muslim journalist

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಭಾ ವೇದಿಕೆಯೊಂದರಲ್ಲಿ ಮಹಿಳೆಯೊಬ್ಬರು ನೀಡಿದ ಮುತ್ತು ಹಾಗೂ ರಾಹುಲ್ ಗಾಂಧಿ ಕೇರಳ ಪವಾಹ ಪೀಡಿತ ಪ್ರದೇಶಕ್ಕೆ ಭೇಟಿ ಯುವಕನೋರ್ವ ನೀಡಿದ ಮುತ್ತಿನ ಸ್ಟೋರಿ ಮೂಲೆಸೇರುತ್ತಿರುವ ಹೊತ್ತಲ್ಲೇ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಮಹಿಳೆಯೊಬ್ಬರು ಕಿಸ್ ಕೊಟ್ಟ ಬಗ್ಗೆ ವರದಿಯಾಗಿದ್ದು, ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ರಾಜ್ಯದ ಪ್ಯಾಲೇಸ್ ಗುಟ್ಟಹಳ್ಳಿ ಎಂಬ ಊರಿನಲ್ಲಿ ಜನಸೇವಕ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತೆರಳಿದ್ದಾಗ ಈ ಘಟನೆ ನಡೆದಿದ್ದು, ಬೊಮ್ಮಾಯಿಯವರನ್ನು ಕಂಡು ಕೂಡಲೇ ಮಹಿಳೆ ಬೊಮ್ಮಾಯಿಯ ಕೈಗೆ ಮುತ್ತಿಕ್ಕಿದ್ದಾಳೆ.

ಈ ವೇಳೆ ಪ್ರತಿಕ್ರಿಯಿಸಿದ ಬೊಮ್ಮಾಯಿ ತಾವೂ ಬರುವ ದಾರಿ ಮಧ್ಯೆ ರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಆದಷ್ಟು ಬೇಗ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ಹದಿನೈದು ದಿನಗಳ ಬಳಿಕ ನಾನು ಮರಳಿ ಬಂದು ವೀಕ್ಷಿಸುವಾಗ ಸಮಸ್ಯೆ ಕಾಣಬಾರದು ಹಾಗೂ ಖುದ್ದು ತಾನೇ ವೀಕ್ಷಣೆ ನಡೆಸುವುದಾಗಿ ಹೇಳಿದರು.

ಒಟ್ಟಿನಲ್ಲಿ ರಾಜ್ಯದ ರಾಜಕೀಯ ನಾಯಕರು ರಸಿಕರಾಗುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಎಲ್ಲಾ ವಿಚಾರಕ್ಕೂ ರಾಜಕಾರಣಿಗಳನ್ನು ಬೈಯುವ ರಾಜ್ಯದ ಜನರಿಗೆ ಮುತ್ತು ಕೊಡುವಷ್ಟು ಮಟ್ಟಿಗೆ ಪ್ರೀತಿ ಇದೆಯೇ ಎಂಬುವುದೇ ಯಕ್ಷ ಪ್ರಶ್ನೆ.