Home Karnataka State Politics Updates ಬೊಮ್ಮಾಯಿ ಸರಕಾರ : ಸಂಪುಟ ಪುನರಾಚನೆ : 6 ಸಚಿವರಿಗೆ ಕೊಕ್,10 ಮಂದಿ ಸೇರ್ಪಡೆ ?

ಬೊಮ್ಮಾಯಿ ಸರಕಾರ : ಸಂಪುಟ ಪುನರಾಚನೆ : 6 ಸಚಿವರಿಗೆ ಕೊಕ್,10 ಮಂದಿ ಸೇರ್ಪಡೆ ?

Hindu neighbor gifts plot of land

Hindu neighbour gifts land to Muslim journalist

ಬಿಜೆಪಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಳಿಕ, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಬದಲಾವಣಾ ಪ್ರಕ್ರಿಕೆಯಗಳು ಚುರುಕುಗೊಂಡಿವೆ. ಜೊತೆ ಜೊತೆಗೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆಯೂ ಚುರುಕು ಪಡೆದಿದೆ.

ದೆಹಲಿಗೆ ವರಿಷ್ಠರನ್ನು ಭೇಟಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ.

ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ ನಡೆಸುವ ಅಧಿಕೃತ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಸಿಎಂ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ರಾಜ್ಯ ಸಚಿವ ಸಂಪುಟ ಕಸರತ್ತಿಗೆ ವರಿಷ್ಠರ ಹಸಿರು ನಿಶಾನೆ ಪಡೆಯುವುದು ಎಂದು ತಿಳಿದುಬಂದಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಸರ್ಜರಿ ಮಾಡುಉವ ಉದ್ದೇಶವನ್ನು ಸಿಎಂ ಬೊಮ್ಮಾಯಿ ಹೊಂದಿದ್ದಾರೆ.ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ನಾಲ್ಕರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಡುವ ಮೂಲಕ ಹೆಚ್ಚೂ ಕಡಿಮೆ ಹತ್ತು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.