Home Karnataka State Politics Updates ಮಗ MLA ಆದರೂ ಸ್ವಚ್ಛತಾ ಕೆಲಸ ಮುಂದುವರಿಸುವೆ – ಮಾಜಿ ಸಿಎಂ ಚನ್ನಿಗೆ ಸೋಲುಣಿಸಿದ ಲಾಭ್...

ಮಗ MLA ಆದರೂ ಸ್ವಚ್ಛತಾ ಕೆಲಸ ಮುಂದುವರಿಸುವೆ – ಮಾಜಿ ಸಿಎಂ ಚನ್ನಿಗೆ ಸೋಲುಣಿಸಿದ ಲಾಭ್ ಸಿಂಗ್ ತಾಯಿ

Hindu neighbor gifts plot of land

Hindu neighbour gifts land to Muslim journalist

ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಅವರು ಭರ್ಜರಿ ಗೆಲವನ್ನು ಸಾಧಿಸಿದ್ದಾರೆ. ಇವರ ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತನ್ನ ಮಗ ಗೆದ್ದ ನಂತರವೂ ಬಲ್ಲೇವ್ ಕೌರ್ ಅವರು ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಉಗೋಕೆ ಅವರ ತಂದೆ ದರ್ಶನ್ ಸಿಂಗ್ ಚಾಲಕ ವೃತ್ತಿಯಲ್ಲಿದ್ದಾರೆ. ಅವರು ಸಹ ನಮ್ಮ ಕುಟುಂಬವು ಹಿಂದಿನ ರೀತಿಯಲ್ಲಿಯೇ ಮುಂದುವರಿಯುತ್ತದೆ. ಮಗ ಶಾಸಕರಾದ ನಂತರ ಹೆಚ್ಚೇನೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಮಗನ ಗೆಲುವು ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಅಷ್ಟು ಮಾತ್ರವಲ್ಲದೇ ಅವರಿಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಮಗ ಗೆಲ್ಲುತ್ತಾನೆ ಎಂದು ಭಾರೀ ವಿಶ್ವಾಸ ಇತ್ತು ಎಂದು ಹೇಳಿದ್ದಾರೆ.

ಲಭ್ ಸಿಂಗ್ ಉಗೋಕೆ ಆಮ್ ಆದ್ಮ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಎಎಪಿ ಅಭ್ಯರ್ಥಿಯಾಗಿ ಪಕ್ಷದ ಚಿಹ್ನೆ ಪೊರಕೆಯಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.