Home Karnataka State Politics Updates Sharad Pawar: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್! NCP ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ!...

Sharad Pawar: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್! NCP ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ! ಬಿಜೆಪಿ ಸೇರೋದು ಪಕ್ಕಾನಾ?

Sharad Pawar
Image source- Hindusthan Times

Hindu neighbor gifts plot of land

Hindu neighbour gifts land to Muslim journalist

Sharad Pawar: ದೇಶದ ಹೈ ವೋಲ್ಟೇಜ್ ರಾಜಕೀಯ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಮಹಾರಾಷ್ಟ್ರ(Maharastra) ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತದೆ. ಇತ್ತೀಚೆಗೆ ಶರದ್‌ ಪವಾರ್‌ ಪುತ್ರಿ, ಸಂಸದೆ ಸುಪ್ರಿಯಾ ಸುಳೆ(Supriya Sule) ಅವರು ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ 2 ಪ್ರಮುಖ ಅಚ್ಚರಿಗಳು ನಡೆಯಲಿವೆ ಎಂದು ಹೇಳಿಕೆ ನೀಡಿದ್ರು. ಈ ಬೆನ್ನಲ್ಲೇ ಶರದ್‌ ಪವಾರ್‌(Sharad Pawar) ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೌದು, ಮಹಾರಾಷ್ಟ್ರ ರಾಜಕೀಯದಲ್ಲಿ ಇತ್ತೀಚಿನ ಕೆಲ ದಿನಗಳಿಂದ ನಾನಾ ತಿರುವುಗಳು ಕಾಣಿಸಕೊಳ್ಳುತ್ತಿದೆ. ಅಜಿತ್ ಪವಾರ್‌ ಎನ್‌ಸಿಪಿ ತೊರೆದು ಬಿಜೆಪಿಗೆ ಹೋಗ್ತಾರೆ, ಹಾಗೇ ಅವರ ಜತೆಗೆ ಅನೇಕ ಶಾಸಕರನ್ನೂ ಕರೆದೊಯ್ತಾರೆ ಎಂಬ ನಾನಾ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಅದೆಲ್ಲ ಕೇವಲ ಊಹಾಪೋಹ ಎಂದು ಅಜಿತ್ ಪವಾರ್‌ ಹಾಗೂ ಶರದ್‌ ಪವಾರ್‌ ಹೇಳಿದ್ದರು. ಆದರೀಗ, ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಮುಂಬೈನಲ್ಲಿ ನಡೆದ ತಮ್ಮ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಮಹತ್ವದ ನಿರ್ಧಾರವನ್ನು ಶರದ್ ಪವಾರ್ ಘೋಷಿಸಿದರು. ಆದರೆ ರಾಜಕೀಯದಿಂದ ಹಿಂದೆ ಸರಿಯುತ್ತಿಲ್ಲ. ನನ್ನ ಸಹೋದ್ಯೋಗಿಗಳೇ, ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದರೂ, ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತಿಲ್ಲ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಅಚ್ಚರಿಗೊಳಗಾದ ಎನ್‌ಸಿಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಪ್ರತಿಭಟನೆ ಮಾಡಿದರು. ಇದೇ ವೇಳೆ ಹಲವರು ಬೇಸರದಿಂದ ತಮ್ಮ ನಾಯಕ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ನಿರ್ಧಾರಕ್ಕೆ ಭಾವುಕರಾಗಿ ಕಣ್ಣೀರು ಹಾಕಿದರು.

ನಾಲ್ಕು ಬಾರಿ ಮಹಾರಾ‍ಷ್ಟ್ರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಶರದ್ ಪವಾರ್ ಅವರ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ವಿಶೇಷ ಅಂದ್ರೆ ಶರದ್ ಪವಾರ್ ತಮ್ಮ ನಿರ್ಧಾರ ಘೋಷಣೆ ಮಾಡುವ ವೇಳೆ ತಮ್ಮ ಸೋದರನ ಮಗ ಅಜಿತ್ ಪವಾರ್ ಕೂಡ ವೇದಿಕೆಯಲ್ಲಿ ಇದ್ದರು. ಮುಂದೆ ಪಕ್ಷದ ಮುಖ್ಯಸ್ಥರು ಯಾರಾಗುತ್ತಾರೆ ಅನ್ನೋದನ್ನು ಪಕ್ಷದ ಹಿರಿಯ ನಾಯಕರ ಸಮಿತಿ ನಿರ್ಧಾರ ಮಾಡಲಿದೆ ಎಂದು ಶರದ್ ಪವಾರ್ ಹೇಳಿದರು.

ಅಂದಹಾಗೆ ಪವಾರ್ ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಮೈತ್ರಿಯನ್ನು ಒಟ್ಟುಗೂಡಿಸುವಲ್ಲಿ ದೊಡ್ಡ ಪಾತ್ರ ಹೊಂದಿದ್ದರು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಶಿವಸೇನ್, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವಿನ ಅಸಂಭವ ಮೈತ್ರಿಯನ್ನು ಒಟ್ಟಿಗೆ ಸೇರಿಸುವಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದರು. ಪವಾರ್ ನಂತರ ಪಕ್ಷದ ಮುಖ್ಯಸ್ಥ ಸ್ಥಾನ ಯಾರು ಅಲಂಕರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗಿಲ್ಲ.

ಇನ್ನು ಶರದ್ ಪವಾರ್ ಅವರ ಅಣ್ಣನ ಮಗ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್(Ajith Pawar) ಅವರು ಬಿಜೆಪಿಗೆ ಸೇರಲು ಯೋಚನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ಎನ್‌ಸಿಪಿ ಮುಖ್ಯಸ್ಥರ ಈ ಅಚ್ಚರಿಯ ನಡೆ ಭಾರೀ ಕುತೂಹಲ ಮೂಡಿಸಿದೆ.

 

ಇದನ್ನು ಓದಿ: M.B. Patil: ದೆಹಲಿಯ ಹೋಟೆಲಲ್ಲಿ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಭೇಟಿ: ಎಂ ಬಿ. ಪಾಟೀಲ್ ಹೊಸ ಬಾಂಬ್ !