Home Karnataka State Politics Updates Yogi Adithyanath: ಪುತ್ತೂರಿನಲ್ಲಿ ಇಂದು ಯೋಗಿ ಆದಿತ್ಯನಾಥ್‌ ಹವಾ! ರೋಡ್‌ ಶೋ ಸಂಪೂರ್ಣ ವಿವರ ಇಲ್ಲಿದೆ

Yogi Adithyanath: ಪುತ್ತೂರಿನಲ್ಲಿ ಇಂದು ಯೋಗಿ ಆದಿತ್ಯನಾಥ್‌ ಹವಾ! ರೋಡ್‌ ಶೋ ಸಂಪೂರ್ಣ ವಿವರ ಇಲ್ಲಿದೆ

Yogi Adithyanath
Image Credit Source: News 18

Hindu neighbor gifts plot of land

Hindu neighbour gifts land to Muslim journalist

Yogi Adithyanath: ಚುನಾವಣೆ ಹಿನ್ನೆಲೆ ಮೇ 6ಕ್ಕೆ (ಇಂದು) ಉತ್ತರ ಪ್ರದೇಶದ (uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪುತ್ತೂರಿಗೆ (Yogi Visit to Puttur) ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ (dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಬಿಜೆಪಿ (bjp) ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌(Yogi Adithyanath) ಅವರು ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರ ಪುತ್ತೂರು ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ಯೋಗಿ ಹೆಲಿಕಾಪ್ಟರ್ ಮೂಲಕ ಬಂದು ಪುತ್ತೂರು ಸಮೀಪದ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ವಾಹನದಲ್ಲಿ ತೆರಳಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11 ಗಂಟೆಯ ಹೊತ್ತಿಗೆ ತಲುಪಲಿದ್ದಾರೆ. ಮುಖ್ಯ ಅಂಚೆ ಕಛೇರಿಯ ಬಳಿಯಿಂದ ಜಾಥಾ ಹೊರಡಲಿದೆ. ತೆರೆದ ವಾಹನದ ಮೂಲಕ ಯೋಗಿ ಸಂಚರಿಸಲಿದ್ದಾರೆ. ಜಾಥಾ ಸರ್ಕಾರಿ ಬಸ್ ನಿಲ್ದಾಣವಾಗಿ ಕೋರ್ಟ್ ರಸ್ತೆಯ ಮೂಲಕ ಕಿಲೆಮೈದಾನಕ್ಕೆ ತೆರಳಲಿದ್ದಾರೆ. ಸುಮಾರು ಒಂದು ಕಿ.ಮೀ ಉದ್ದಕ್ಕೆ ಜಾಥ ನಡೆಯಲಿದೆ. ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಯೋಗಿ ಕಿಲ್ಲೆಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಬೊಳುವಾರು ಜಂಕ್ಷನ್‌ನಿಂದ ಗಾಂಧಿಕಟ್ಟೆಯ ತನಕ ಮತ್ತು ಕಿಲ್ಲೆ ಮೈದಾನದ ಸುತ್ತಮುತ್ತ ರಸ್ತೆಗಳಲ್ಲಿ, ಕೋರ್ಟ್‌ ರೋಡ್‌ನಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನ ಹೊರತುಪಡಿಸಿ ಇತರ ವಾಹನ ಸಂಚಾರ ನಿಷೇಧಿಸಲಾಗಿದೆ.

ಕಾರ್ಯಕ್ರಮ ಮುಗಿಯುವವರೆಗೆ ಶ್ರೀಧರ ಭಟ್‌ ಜಂಕ್ಷನ್‌ನಿಂದ ಗಾಂಧಿಕಟ್ಟೆಯ ತನಕ ಹಾಗೂ ಗಾಂಧಿ ಕಟ್ಟೆಯಿಂದ ಕೋರ್ಟ್‌ ರಸ್ತೆಯ ಮೂಲಕ ಕಿಲ್ಲೆ ಮೈದಾನದ ತನಕ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ನಿಷೇಧ

ಮಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ಲಘು ವಾಹನಗಳು ಮತ್ತು ಸುಳ್ಯ ಮತ್ತು ಸಂಪ್ಯ ಕಡೆಗೆ ಸಂಚರಿಸಲು ಲಿನೆಟ್‌ ಜಂಕ್ಷನ್‌-ಬೊಳುವಾರು-ಕೊಟೇಚಾ ಹಾಲ್‌- ಸಾಲ್ಮರ-ಪುರುಷರಕಟ್ಟೆ ತನಕ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ನಿಷೇಧ

ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಜನಗಳು ಪಪುಂಜ ಕ್ರಾಸ್-ಪಂಜಳ, ಪುರುಷರಕಟ್ಟೆ-ದರ್ಬೆ-ಅರುಣಾ ಥಿಯೇಟರ್‌-ಸಾಲ್ಮರ-ಪಡೀಲ್‌-ಬೊಳುವಾರು-ಲಿನೆಟ್‌ ಜಂಕ್ಷನ್‌ ಮಾರ್ಗವಾಗಿ ಸಂಚರಿಸಲು ಸೂಚನೆ.