Home Karnataka State Politics Updates PM Modi- ಕರ್ನಾಟಕ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್! ಕಾಂಗ್ರೆಸ್ ಗೆ ಶುಭಕೋರಿ ಏನಂದ್ರು...

PM Modi- ಕರ್ನಾಟಕ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್! ಕಾಂಗ್ರೆಸ್ ಗೆ ಶುಭಕೋರಿ ಏನಂದ್ರು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

PM Modi:2023ರ ವಿಧಾನಸಭೆ ಚುನಾವಣೆಯ(Karnataka Assembly) ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಯ ಫಲಿತಾಂಶವನ್ನು ಕನ್ನಡ ನಾಡಿನ ಜನತೆ ನೀಡಿದ್ದಾರೆ. ಆಡಳಿತ ರೂಡ ಬಿಜೆಪಿಗೆ ಹೀನಾಯವಾಗಿ ಸೋಲುಣಿಸಿ ಕಾಂಗ್ರೆಸ್(Congress) ಗೆ ಅಭೂತಪೂರ್ವ ಗೆಲುವುನ್ನು ನೀಡಿ ಕೈ ಹಿಡಿದಿದ್ದಾರೆ. ಇದೀಗ ಈ ಚುನಾವಣೆ ಹಾಗೂ ಅದರ ಫಲಿತಾಂಶದ ಕುರಿತು ಪ್ರಧಾನಿ ಮೋದಿ(PM Modi) ಟ್ವೀಟ್ ಮಾಡಿದ್ದಾರೆ.

ಹೌದು, ನಾಡಿನ ಅಷ್ಟೂ ಕ್ಷೇತ್ರಗಳ ಫಲಿತಾಂಶ ಹೊರಬಿದ್ದು, ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಬಳಿಕ ಪ್ರಧಾನಿ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಗೆ ಶುಭಕೋರಿದ್ದಾರೆ. ಅಲ್ಲದೆ ಕಾಂಗ್ರೆಸ್ ಕರ್ನಾಟಕ ಜನರಿಗೆ ನೀಡಿದ ಭರವಸೆಗಳನ್ನು, ಆಶ್ವಾಸನೆಗಳನ್ನು ಈಡೇರಿಸೆಂದು ಹಾರೈಸಿ, ಶುಭಕೋರಿದ್ದಾರೆ.

ಅಲ್ಲದೆ ಪ್ರಧಾನಿ ಅವರು ‘ಬಿಜೆಪಿ(BJP) ಕಾರ್ಯಕರ್ತರು, ಪಕ್ಷವನ್ನು ಅಧಿಕಾರಕ್ಕೆ ತರಲು ತುಂಬಾನೇ ಶ್ರಮ ಹಾಕಿದ್ದೀರಿ. ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದೀರಿ. ನಿಮ್ಮ ಪರಿಶ್ರಮಕ್ಕೆ ನನ್ನ ಧನ್ಯವಾದಗಳು’ ಎಂದಿದ್ದಾರೆ.

ಅಂದಹಾಗೆ ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಸ್ವತಃ ಪ್ರಧಾನಿಯವರೇ ಅಖಾಡಕ್ಕೆ ಇಳಿದಿದ್ದರು. ರಾಜ್ಯದಾದ್ಯಂತ ಅಬ್ಬರದ ಪ್ರಚಾರದೊಂದಿಗೆ ಹತ್ತಾರು ರೋಡ್ ಶೋಗಳನ್ನು ನಡೆಸಿದ್ದರು. ಆದರೆ ಇದಾವುದು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ನನ್ನ ತೀರ್ಮಾನವೇ ಅಂತಿಮ. ಯಾರ ಪ್ರಭಾವವವೂ ನಮ್ಮ ಮೇಲಾಗಿಲ್ಲ ಎಂಬುದನ್ನು ಮತದಾರ ಪ್ರಭುಗಳು ತೋರಿಸಿದ್ದಾರೆ.

ಇದನ್ನೂ ಓದಿ :ರಾಜ್ಯದ ಜನರ ತೀರ್ಮಾನವನ್ನು ಗೌರವಿಸುತ್ತೇವೆ- ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ