Home Karnataka State Politics Updates Prajwal Revanna Case: ಪ್ರಜ್ವಲ್ ರೇವಣ್ಣನ ವಿಡಿಯೋ ಶೇರ್ ಮಾಡಿದ ‘ಪ್ರಜ್ವಲ್’ ನನ್ನು ಬಂಧಿಸಿದ ಪೋಲೀಸರು...

Prajwal Revanna Case: ಪ್ರಜ್ವಲ್ ರೇವಣ್ಣನ ವಿಡಿಯೋ ಶೇರ್ ಮಾಡಿದ ‘ಪ್ರಜ್ವಲ್’ ನನ್ನು ಬಂಧಿಸಿದ ಪೋಲೀಸರು !!

Prajwal Revanna Case

Hindu neighbor gifts plot of land

Hindu neighbour gifts land to Muslim journalist

Prajwal Revanna Case: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ((Prajwal Revanna Case) ಸಂಬಂಧಿಸಿದಂತೆ ಅಶ್ಲೀಲ ವಿಡಿಯೋಗಳನ್ನು ಶೇರ್ ಅಂಡ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಜ್ವಲ್ ನನ್ನು ಪೋಲೀಸರು ಮೂಡಿಗೆರೆಯಲ್ಲಿ ಬಂಧಿಸಿದ್ದಾರೆ.

ಹೌದು, ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡುವುದಾಗಲಿ, ಮೊಬೈಲ್ ನಲ್ಲಿ ಇಟ್ಟುಕೊಳ್ಳುವುದಾಗಲಿ ಅಪರಾಧ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು SIT ತಿಳಿಸಿತ್ತು. ಇಷ್ಟಾದರೂ ತನ್ನ ಮೊಬೈಲ್‌ನಲ್ಲಿರುವ ಅಶ್ಲೀಲ ವಿಡಿಯೋಗಳನ್ನು ತಾನೊಬ್ಬನೇ ನೋಡುವುದೇಕೆ, ಎಲ್ಲರೂ ನೊಡಲೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಹಿಳೆಯರ ಮಾನಹಾನಿ ಮಾಡುತ್ತಿದ್ದ ಮೂಡಿಗೆರೆಯ(Mudigere) ಪ್ರಜ್ವಲ್‌ನನ್ನು(Prajwal) ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Husband Test: ಸಾಮಾಜಿಕ ಮಾಧ್ಯಮದಲ್ಲಿ ‘ಪತಿ ಪರೀಕ್ಷೆ’ ವೈರಲ್, ಏನಿದು ಹಸ್ಬೆಂಡ್‌ ಟೆಸ್ಟ್‌ ?

ಅಂದಹಾಗೆ ಕುದುರೆಮುಖ(Kuduremuka) ಠಾಣೆ ಪೊಲೀಸರು ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಪ್ರಜ್ವಲ್, ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಜೊತೆಗೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವಂತಹ ಪದಬಳಕೆ ಮಾಡಿದ್ದನು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಆತನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದವು. ಕೊನೆಗೂ ಈ ಪುಣ್ಯಾತ್ಮನನ್ನು ಮಟ್ಟ ಹಾಕುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಯುವಕ ಇಂತಹ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸದ್ಯ ಈ ಸಂಬಂಧ ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಸಹ ಆಗಿದ್ದಾನೆ.

ಇದನ್ನೂ ಓದಿ: Speaking English: For ಮತ್ತು Since ಬಳಸುವುದು ಹೇಗೆ, ಬನ್ನಿ ಆತ್ಮವಿಶ್ವಾಸದಿಂದ ಇಂಗ್ಲೀಷ್ ಮಾತಾಡೋಣ !