Home Karnataka State Politics Updates Post Office Scheme: ತಿಂಗಳಿಗೆ 100 ಠೇವಣಿ ಮಾಡಿ, 20ಲಕ್ಷ ಲಾಭ ಪಡೆಯಿರಿ!ಇಲ್ಲಿದೆ ಇದರ...

Post Office Scheme: ತಿಂಗಳಿಗೆ 100 ಠೇವಣಿ ಮಾಡಿ, 20ಲಕ್ಷ ಲಾಭ ಪಡೆಯಿರಿ!ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್!

Hindu neighbor gifts plot of land

Hindu neighbour gifts land to Muslim journalist

Post Office Schemes: ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಉಳಿತಾಯ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ.

ಗ್ರಾಹಕರಿಗಾಗಿ ಪೋಸ್ಟ್ ಆಫೀಸ್ ನಲ್ಲಿ(Post Office Schemes)ಅನೇಕ ಉಳಿತಾಯ ಯೋಜನೆಗಳಿದ್ದು, ನಿಶ್ಚಿತ ಲಾಭದ ಜೊತೆಗೆ ಭದ್ರತೆ ಪಡೆಯುವುದಲ್ಲದೇ ತೆರಿಗೆ ವಿನಾಯಿತಿ ಕೂಡ ಪಡೆಯಬಹುದು. ಪೋಸ್ಟ್ ಆಫೀಸ್(Post Office) ಕೇವಲ 100 ಹೂಡಿಕೆ ಮಾಡಿದರೆ 20 ಲಕ್ಷಕ್ಕೂ ಅಧಿಕ ಲಾಭವನ್ನು ಗಳಿಸಬಹುದು.

ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಕೇವಲ 100 ರೂಪಾಯಿಗಳೊಂದಿಗೆ ಹೂಡಿಕೆಯನ್ನು(Investment) ಆರಂಭಿಸಿ ಇದರಲ್ಲಿ ಹೂಡಿಕೆದಾರರು ವಾರ್ಷಿಕ 6.8 ಬಡ್ಡಿ ಗಳಿಸಬಹುದು. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯ ಕೂಡ ದೊರೆಯಲಿದೆ. ಇದಲ್ಲದೇ, ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್‌) ಹೊಂದಿದ್ದು, ಸ್ಥಿರ ಆದಾಯ ಒದಗಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (Post Office National Saving Certificate Scheme) ಯೋಜನೆಯು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿ ಶೇ.6.8 ರಷ್ಟು ಬಡ್ಡಿದರ ನಿಗದಿಯಾಗಿದ್ದು, ನಿಮ್ಮ ಹಣವು ಕೇವಲ 5 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. NSC ಅನ್ನು ಒಂದು ನಿರ್ದಿಷ್ಟ ಅವಧಿಯ ಹೂಡಿಕೆ ಯೋಜನೆಯಾಗಿ ವರ್ಗೀಕರಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF), ಕಿಸಾನ್ ವಿಕಾಸ್ ಪತ್ರ (ಕೆವಿಪಿ) ದಂತೆ ಇದೂ ಕೂಡ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದ್ದು, ವ್ಯಕ್ತಿಗಳಿಗೆ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸ ಬೆಳೆಸಲು ನೆರವಾಗಲಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಕೇವಲ ಐದು ವರ್ಷಗಳಲ್ಲಿ ಮಿಲಿಯನೇರ್ ಆಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆದಾರರು 1 ಲಕ್ಷ ರೂ ಹೂಡಿಕೆ ಮಾಡಿದರೆ, ಐದು ವರ್ಷಗಳ ನಂತರ ನಿವ್ವಳ ಲಾಭವು 1,38,949 ರೂ ಲಭ್ಯವಾಗುತ್ತದೆ. 5 ವರ್ಷಗಳ ಬಳಿಕ, 20.85 ಲಕ್ಷ ರೂ.ಗಳ ಮೊತ್ತವನ್ನು ನೀವು ಇಚ್ಛಿಸಿದರೆ ನೀವು 5 ವರ್ಷಗಳಲ್ಲಿ 15 ಲಕ್ಷ ರೂ.ಗಳ ಹೂಡಿಕೆ ಮಾಡಬೇಕಾಗುತ್ತದೆ. ನಿಮಗೆ ಬಡ್ಡಿಯಾಗಿ ಸುಮಾರು 6 ಲಕ್ಷ ರೂ. ಲಾಭ ದೊರೆಯಲಿದೆ.

ಯೋಜನೆಯ ಪ್ರಯೋಜನಗಳು
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿಯನ್ನು 5 ವರ್ಷಗಳವರೆಗೆ ನಿಗದಿ ಮಾಡಲಾಗಿದೆ. ಹಣಕಾಸು ವರ್ಷದ ಪ್ರತಿ ತ್ರೈಮಾಸಿಕದ (3 ತಿಂಗಳು) ಆರಂಭದಲ್ಲಿ ಸರ್ಕಾರವು ಬಡ್ಡಿದರಗಳನ್ನು ನಿಗದಿ ಮಾಡಲಾಗುತ್ತದೆ. ಹೂಡಿಕೆದಾರರು ಕೆಲವು ಷರತ್ತುಗಳೊಂದಿಗೆ 1 ವರ್ಷದ ನಂತರ ಖಾತೆಯಿಂದ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ತೆರಿಗೆ ಮತ್ತು ಹೂಡಿಕೆದಾರರು ಕೇವಲ 100 ರೂಪಾಯಿಗಳೊಂದಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆಯನ್ನು ಆರಂಭಿಸಬಹುದು.