Home Karnataka State Politics Updates JDS ನಿಂದ ಹೆಚ್​ಡಿಕೆ ಉಚ್ಚಾಟನೆ ?! ಏನಂದ್ರು ಗೊತ್ತಾ ಕುಮಾರಸ್ವಾಮಿ ?!

JDS ನಿಂದ ಹೆಚ್​ಡಿಕೆ ಉಚ್ಚಾಟನೆ ?! ಏನಂದ್ರು ಗೊತ್ತಾ ಕುಮಾರಸ್ವಾಮಿ ?!

CM Ibrahim

Hindu neighbor gifts plot of land

Hindu neighbour gifts land to Muslim journalist

CM Ibrahim: ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷದ ಮೈತ್ರಿಗೆ (jds bjp alliance) ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ಸುತರಾಂ ಒಪ್ಪಲ್ಲ ಎಂದಿದ್ದು, ಇದೀಗ ಹೊಸ ಸ್ಟೇಟ್ಮೆಂಟ್ ಒಂದನ್ನು ನೀಡಿ ಇಡೀ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಹೌದು, ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಸಿಎಂ ಇಬ್ರಾಹಿಂ ಬೆಗಳೂರಿನಲ್ಲಿ ಅಕ್ಟೋಬರ್ 16 ರಂದು, ಬೆಂಬಲಿಗರು ಮತ್ತು ಕಾರ್ಯಕರ್ತರ ಜತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯ ಅಚ್ಚರಿಗೆ ಕಾರಣವಾಗಿದೆ. ಸಿಎಂ ಇಬ್ರಾಹಿಂ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಬಿಜೆಪಿಗೆ ಬೆಂಬಲ ಇಲ್ಲ ಎಂದಿರುವ ಇಬ್ರಾಹಿಂ, ನಾನೇಕೆ ಪಕ್ಷ ಬಿಡಲಿ. ನಾನು ಪಕ್ಷ ಬಿಡಲ್ಲ, ನಾನೇ ರಾಜ್ಯಾಧ್ಯಕ್ಷ. ಬಿಜೆಪಿ ಜೊತೆಗೂ ಹೋಗಲ್ಲ ಶಾಸಕರ ನಿರ್ಧಾರ ಏನು ಕಾದು ನೋಡಿ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ. ಇದಕ್ಕೆ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇಬ್ರಾಹಿಂಗೆ ಟಾಂಗ್ ಕೊಟ್ಟಿದ್ದಾರೆ.

ಇಂದು(ಅಕ್ಟೋಬರ್ 17) ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿಮಗೆ ಅದು ದೊಡ್ಡದಾಗಿ ಕಾಣುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಎಂದು ಬರೆದುಕೊಳ್ಳಲಿ ಎಂದು ಟಾಂಗ್ ಕೊಟ್ಟರು.

ಇನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಪಕ್ಷದಿಂದ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಾ ಸಣ್ಣ ವಿಚಾರಕ್ಕೆ ಬರಬೇಡಿ. ನಮಗೆ ಏನು ಮಾಡಬೇಕೊ, ಸರಿ ಮಾಡುತ್ತೇವೆ. ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ? ಅವರು ಫ್ರೀ ಇದ್ದಾರೆ ಮಾತಾಡ್ಕೊಳ್ಳಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನೀವು ಯಾಕೆ ವರಿ ಮಾಡಿಕೊಳ್ಳುತ್ತೀರಿ ಎಂದರು.

ಇಬ್ರಾಹಿಂ ಪ್ರಕಾರ, ನಾನು ರಾಜ್ಯಾಧ್ಯಕ್ಷ ಏನೇ ತೀರ್ಮಾನ ಆದರೂ ನನ್ನಿಂದಲೇ ಆಗಬೇಕು ಎಂದಿದ್ದಾರೆ. ಕೋರ್‌ಕಮಿಟಿ ರಚನೆ ಮಾಡಿ, ದೇವೇಗೌಡರ ಮುಂದೆ ನಮ್ಮ ನಿರ್ಧಾರ ತಿಳಿಸೋಣ ಎನ್ನುವ ಬಗ್ಗೆ ಸಿಎಂ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ನವರಾತ್ರಿ – ಕೊರಗ ಜನಾಂಗದ ವೇಷ ಧರಿಸಿ ಕುಣಿದರೆ ಜೈಲು ಗ್ಯಾರಂಟಿ -ಸಮಾಜ ಕಲ್ಯಾಣ ಇಲಾಖೆ ಎಚ್ಚರಿಕೆ