Home Breaking Entertainment News Kannada Vijaykumar Gavit : ಐಶ್ವರ್ಯ ರೈ ರೀತಿ ಕಣ್ಣು ಬೇಕೇ? ಬಿಜೆಪಿ ಸಚಿವರ ಸಲಹೆ ಕೇಳಿ!...

Vijaykumar Gavit : ಐಶ್ವರ್ಯ ರೈ ರೀತಿ ಕಣ್ಣು ಬೇಕೇ? ಬಿಜೆಪಿ ಸಚಿವರ ಸಲಹೆ ಕೇಳಿ! ಟೀಕಿಸಿದ ನೆಟ್ಟಿಗರು!!!

Vijaykumar Gavit
Image credit: Sarkarnama

Hindu neighbor gifts plot of land

Hindu neighbour gifts land to Muslim journalist

Vijaykumar Gavit: ರಾಜಕೀಯದಲ್ಲಿ ಮಾತು, ಜಗಳ, ವಾಗ್ದಾಳಿಗಳು ಸರ್ವೇಸಾಮಾನ್ಯ. ಬಿಜೆಪಿ (Bjp), ಕಾಂಗ್ರೆಸ್ (Congress), ಜೆಡಿಎಸ್ (jds) ಪಕ್ಷದ ನಾಯಕರ ಮಧ್ಯೆ ಸದಾ ವಾಗ್ದಾಳಿಗಳು ನಡೆಯುತ್ತಲೇ ಇರುತ್ತದೆ. ಇದೀಗ ಮಹಾರಾಷ್ಟ್ರದ ಬಿಜೆಪಿ ಸಚಿವ ವಿಜಯಕುಮಾರ್ ಗವಿತ್ (Vijaykumar Gavit) ಐಶ್ವರ್ಯ ರೈ ರೀತಿ ಕಣ್ಣು ಬೇಕೇ? ಮೀನು ತಿನ್ನಿ ಎಂದು ಹೇಳುವ ಮೂಲಕ ನೆಟ್ಟಿಗರ ಹಾಗೂ ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದ್ದಾರೆ.

ಸಚಿವ ವಿಜಯಕುಮಾರ್ ಗವಿತ್ ಇತ್ತೀಚೆಗೆ ನಂದೂರಬಾರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮೀನು (fish) ತಿನ್ನುವುದರ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ವಿವರಿಸಿದ್ದು, ಈ ವೇಳೆ ಮಾಜಿ ವಿಶ್ವ ಸುಂದರಿ, ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ (Aishwarya Rai) ಅವರ ಉದಾಹರಣೆಯನ್ನು ನೀಡಿದ್ದಾರೆ.

ಕರ್ನಾಟಕದ (karnataka) ಮಂಗಳೂರಿನವರಾದ (Mangaluru) ಐಶ್ವರ್ಯ ರೈ ನಿಯಮಿತವಾಗಿ ಮೀನು ತಿನ್ನುತ್ತಿದ್ದರು. ಹಾಗಾಗಿ ಅವರು ಸುಂದರವಾದ ಕಣ್ಣುಗಳನ್ನು ಹೊಂದಿದ್ದಾರೆ. ನಿಮಗೂ ಸಹ ಇಂತಹ ಕಣ್ಣುಗಳನ್ನು ಬೇಕಿದ್ದರೆ ಮೀನನ್ನು ತಿನ್ನಿ ಎಂದಿದ್ದಾರೆ. ಸದ್ಯ ಅವರ ಈ ಹೇಳಿಕೆಯನ್ನು ವಿಪಕ್ಷಗಳು ಮಾತ್ರವಲ್ಲದೆ ಬಿಜೆಪಿ ನಾಯಕರೇ ಟೀಕಿಸುತ್ತಿದ್ದಾರೆ.

ಈ ಹಿಂದೆ ಮಧ್ಯಪ್ರದೇಶದ (madhya pradesh) ದಾಮೋಹ್‌ನ ಜಬೇರಾದ ಬಿಜೆಪಿ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರು ತಮ್ಮ ಪ್ರದೇಶದ ರಸ್ತೆಯನ್ನು ತಮ್ಮದೇ ಪಕ್ಷದ ಹಿರಿಯ ಸಂಸದೆ ಹಾಗೂ ಖ್ಯಾತ ನಟಿ ಹೇಮಾ ಮಾಲಿನಿ (hema Malini) ಹಾಗೂ ನಟಿ ಕತ್ರಿನಾ ಕೈಫ್ (Katrina Kaif) ಅವರ ಕೆನ್ನೆಗಳಿಗೆ ಹೋಲಿಸಿದ್ದರು. ಈ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: World’s Richest Transgender Woman : ವಿಶ್ವದ ಶ್ರೀಮಂತ ತೃತೀಯಲಿಂಗಿ ಯಾರು ಗೊತ್ತೇ? ಇವರ ಆದಾಯ ಎಷ್ಟು ಗೊತ್ತಾ?