Home Karnataka State Politics Updates Basanagouda Patil Yatnal: ಹಿಂದೂ ಧರ್ಮವನ್ನು ಕೆದಕುವವರಿಗೆ, ಮುಸ್ಲಿಂ ಹುಟ್ಟಿನ ಬಗ್ಗೆ ಕೇಳುವ ಧೈರ್ಯವಿದೆಯೇ? ಪರಮೇಶ್ವರ್‌ಗೆ...

Basanagouda Patil Yatnal: ಹಿಂದೂ ಧರ್ಮವನ್ನು ಕೆದಕುವವರಿಗೆ, ಮುಸ್ಲಿಂ ಹುಟ್ಟಿನ ಬಗ್ಗೆ ಕೇಳುವ ಧೈರ್ಯವಿದೆಯೇ? ಪರಮೇಶ್ವರ್‌ಗೆ ಟಾಂಗ್ ನೀಡಿದ ಯತ್ನಾಳ್‌

Basanagouda Patil Yatnal

Hindu neighbor gifts plot of land

Hindu neighbour gifts land to Muslim journalist

Basanagouda Patil Yatnal – G Parameshwara: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದ್ದ ಗೃಹ ಸಚಿವ ಜಿ ಪರಮೇಶ್ವರ್‌, ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು ಹುಟ್ಟಿಸಿದ್ದು ಯಾರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ ಎಂದು ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಕೆದಕಿದ್ದರು, ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದು ಅಲ್ಲದೇ, ಟ್ವೀಟ್‌ ಮೂಲಕ ಗೃಹ ಸಚಿವರಿಗೆ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್‌ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal- G Parameshwara) ಪ್ರಶ್ನೆ ಮಾಡಿದ್ದು,
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡುವ ನೀವು ಇಸ್ಲಾಮ್ ಮತದ ಹುಟ್ಟಿನ ಬಗ್ಗೆ ಕೇಳುವ ಧೈರ್ಯವಿದೆಯೇ? ಇದು ನಿಮ್ಮ ನಿಜ ಬಣ್ಣವೋ ಅಥವಾ ನಿಮ್ಮ ರಾಜಕೀಯ ಪರವಾದ ಹೇಳಿಕೆಯೋ? ಎಂದು ಪ್ರಶ್ನಿಸಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್ ನಲ್ಲಿ , ಇಸ್ಲಾಂ ಧರ್ಮದ ಹುಟ್ಟಿನ ಬಗ್ಗೆ ನಿಮಗೆ ಕೇಳುವ ಧೈರ್ಯವಿದೆಯೇ? ಅಲ್ಲಾಹು ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಎಂದು ಘೋಷಿಸಿಕೊಂಡಿರುವ ಪರಮೇಶ್ವರ್‌ ಅವರು ಯಾರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ? ನಿಮ್ಮ ನಿಜ ಬಣ್ಣ ಇದೆಯೋ ಅಥವಾ ನಿಮ್ಮ ರಾಜಕೀಯಕ್ಕಾಗಿ ಹೇಳಿಕೆಯೋ? ಎಂದು ಕಿಡಿಕಾರಿದ್ದಾರೆ.

ಮುಖ್ಯವಾಗಿ ನಾವು ಹಿಂದೂಗಳಲ್ಲವೆಂದು ಹೇಳಿಕೊಳ್ಳುವವರು ಅವರ 3ನೆಯ ತಲೆಮಾರಿನ ವ್ಯಕ್ತಿಯ ಹೆಸರನ್ನು ಸಂಶೋಧನೆ ಮಾಡಲಿ ಅವರೂ ಹಿಂದುವೇ ಆಗಿರುತ್ತಾರೆ. ಹಿಂದೂ ಧರ್ಮ ಬದುಕುವ ರೀತಿ, ಅದು ಮತವಲ್ಲ. ಹಿಂದುತ್ವ ಈ ದೇಶದ ಆತ್ಮ. ಈ ದೇಶ, ಸಂವಿಧಾನದ ಮೌಲ್ಯಗಳು ಹಾಗು ಪ್ರಜಾಪ್ರಭುತ್ವ ಉಳಿದಿರುವುದೇ ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಈಗಾಗಲೇ ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿಕೆಗೆ ಕಿಡಿಕಾರಿರುವ ಕರ್ನಾಟಕ ಬಿಜೆಪಿ, ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್‌ ಅವರ ಹೇಳಿಕೆ, ಅವರ ಬೇಜವಾಬ್ದಾರಿತನವನು ಎತ್ತಿಹಿಡಿಯುತ್ತದೆ. ರಾಷ್ಟ್ರಗೀತೆಯ ಅಂತ್ಯದಲ್ಲಿ ‘ಜೈ ಹಿಂದ್’ ಎನ್ನುವ ಜಯಘೋಷ, ನಮ್ಮ ತಾಯ್ನೆಲದ ಪ್ರಾಮುಖ್ಯತೆ , ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ , ಸಂಸ್ಕೃತಿ, ರಾಷ್ಟ್ರಧರ್ಮ, ಜೀವನ ಪದ್ಧತಿಯ ಬಗ್ಗೆ ತಿಳಿಯದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೇವಲ ರಾಜಕೀಯ ಲಾಭಕ್ಕಾಗಿ ಹೊಲಸು ಮಾತುಗಳನ್ನಾಡಿ ಪರಮೇಶ್ವರ್ ಅವರು ತಮ್ಮ ಘನತೆಗೆ ತಾವೇ ಕುಂದು ತಂದುಕೊಂಡಿದ್ದಾರೆ. ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹೆರಿಗೆ ವೇಳೆ ಡಾಕ್ಟರ್ ನಿಂದ ಅವಾಂತರ- ಮಹಿಳೆ ಹೊಟ್ಟೆಯಲ್ಲೇ ಬಿಟ್ಟ ಊಟದ ಗಾತ್ರದ ತಟ್ಟೆ !! ನಂತರ ಆದದ್ದು ವಿಚಿತ್ರ