Home Karnataka State Politics Updates PM Modi: ಜೂ. 8 ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರ !!

PM Modi: ಜೂ. 8 ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರ !!

PM Modi

Hindu neighbor gifts plot of land

Hindu neighbour gifts land to Muslim journalist

PM Modi: ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿ ಕೂಟ ಸ್ಪಷ್ಟ ಬಹುಮತವನ್ನು ಪಡೆದುಕೊಂಡು ಸರ್ಕಾರ ರಚನೆಗೆ ಅವಕಾಶಗಿಟ್ಟಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯ(PM Modi)ವರೇ 3ನೇ ಬಾರಿಗೆ ಪ್ರಧಾನಿಯಾಗಲಿದ್ದು, ಜೂನ್ 8ರಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Prakash Raj: ಮೋದಿ ವಿರುದ್ಧ ಟೀಕೆ ” ನಿಮ್ಮ ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ”: ಪ್ರಕಾಶ್ ರಾಜ್!

ಇಂದು ಸಂಜೆ (ಜೂ. 5) ಉಭಯ ಮೈತ್ರಿ ಕೂಟಗಳ ಪ್ರತ್ಯೇಕ ಸಭೆ ನಡೆಯಲಿದೆ. ಆದರೆ ಈಗಾಗಲೇ ನಿತೀಶ್ ಕುಮಾರ್(Nitish Kumar) ಹಾಗೂ ಚಂದ್ರಬಾಬು ನಾಯ್ಡು(Chandrababu Naydu) ಅವರು ನಮ್ಮ ಬೆಂಬಲ NDA ಕೂಟಕ್ಕೆ ಎಂದು ಹೇಳಿದ್ದಾರೆ. ಹೀಗಾಗಿ ಮೋದಿಯವರೇ ಮುಂದೆಯೂ ಪ್ರಧಾನಿ ಆಗುವುದು ಪಕ್ಕಾ ಆಗಿದ್ದು, ಜೂನ್ 8 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೂನ್‌ 7 ರ ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಸಂಸತ್ ಭವನದಲ್ಲಿ ಎನ್‌ಡಿಎ ಸಂಸದರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ವಿವಿಧ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಸರ್ಕಾರ ವಿಸರ್ಜನೆ:
ಜೂ. 4ರಂದು ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Modi) ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಗಿದೆ. ಹೀಗಾಗಿ 17ನೇ ಲೋಕಸಭಾ ಅವಧಿ ಅಂತ್ಯವಾದ ಹಿನ್ನೆಲೆ ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: 8954 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ!ವೇತನ ಇನ್ನಿತರ ವಿವರ ಇಂತಿವೆ!