Home Karnataka State Politics Updates PM Modi: ಕರ್ನಾಟಕ ರಾಜಕೀಯದ ಕುರಿತು ಅಚ್ಚರಿಯ ಸ್ಟೇಟ್ಮೆಂಟ್ ಕೊಟ್ಟ ಪ್ರಧಾನಿ ಮೋದಿ !!

PM Modi: ಕರ್ನಾಟಕ ರಾಜಕೀಯದ ಕುರಿತು ಅಚ್ಚರಿಯ ಸ್ಟೇಟ್ಮೆಂಟ್ ಕೊಟ್ಟ ಪ್ರಧಾನಿ ಮೋದಿ !!

PM Modi

Hindu neighbor gifts plot of land

Hindu neighbour gifts land to Muslim journalist

PM Modi: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ರಾಜ್ಯ ರಾಜಕೀಯದ ಕುರಿತು ಅಚ್ಚರಿಯ ಹೇಳಿಕೆಯನ್ನು ನೀಡಿದ್ದು ಸಿದ್ದರಾಮಯ್ಯ ಸರ್ಕಾರದ ಕುರಿತು ಭಾರೀ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಹಾಳಾಗಿ ಹೋಗಿದೆ. ಸಿಎಂ ಸಿದ್ದರಾಮಯ್ಯ ಮುಂದೆ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ಎಂಬುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi) ಹೇಳಿದ್ದು ಭಾರೀ ಅಚ್ಚರಿ ಮೂಡಿಸಿದೆ ಎಂದು ಅಚ್ಚರಿಯ ಸ್ಟೇಟ್ಮೆಂಟ್ನೀಡಿದ್ದಾರೆ.

ಅಂದಹಾಗೆ ಮಧ್ಯಪ್ರದೇಶವು(Madhyapradesh) ಸದ್ಯದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದು, ಪ್ರಚಾರಕ್ಕಾಗಿ ಅಲ್ಲಿಗೆ ಆಗಮಿಸಿದ್ದ ಪ್ರಧಾನೆಯವರು ‘ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಮುಂದುವರಿಕೆ ಬಗ್ಗೆಯೇ ಗೊಂದಲಗಳು ಎದ್ದಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಅಧಿಕಾರ ಹಿಡಿದಿರುವ ಕಾಂಗ್ರೆಸ್​ ಭ್ರಷ್ಟಾಚಾರದಲ್ಲಿ ಭಾಗಿಯಾದ್ದರಿಂದ ರಾಜ್ಯಕ್ಕೆ ಹಾನಿ ಉಂಟಾಗಿದೆ. ಉಚಿತ ಗ್ಯಾರಂಟಿಗಳು ಆರ್ಥಿಕತೆಯನ್ನು ಹಾಳುಗೆಡವಿದೆ ಎಂದು ತೀವ್ರ ಬೇಸರದೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಬಿಜೆಪಿ ನಾಯಕರು ಸ್ವಲ್ಪ ಸಮಯದಲ್ಲೇ ರಾಜ್ಯ ಸರ್ಕಾರ ಪತನವಾಗಲಿದೆ, ಲೋಕಸಭಾ ಚುನಾವಣೆಗೂ ಮೊದಲು ಸರ್ಕಾರ ವಿಸರ್ಜನೆ ಆಗಲಿದೆ ಎಂದು ಅಚ್ಚರಿಯ ಹೇಳಿಕೆಗಳನ್ನು ಹರಿಬಿಡುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಮೋದಿಯವರು ಕೂಡ ಸಿಎಂ ಸಿದ್ದರಾಮಯ್ಯ ಮುಂದೆ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ಎಂಬುದಾಗಿ ಹೇಳಿರುವುದು ಕೂಡ ಎಲ್ಲೋ ಒಂದು ಕಡೆ ಇದಕ್ಕೆ ಸಿಂಕ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿಯವರ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.

 

ಇದನ್ನು ಓದಿ: Belthangady: ರಸ್ತೆಗೆ ಉರುಳಿಬಿದ್ದ ವಿದ್ಯುತ್‌ ಟವರ್;‌ ಕಾರು, ಬೈಕ್‌ಗಳಿಗೆ ಹಾನಿ!