

PM Modi- Eshwarappa : ಚುನಾವಣಾ ರಾಜಕೀಯದಿಂದ ಸ್ವತಃ ರಾಜೀನಾಮೆ ನೀಡಿದ ಕೆ.ಎಸ್ ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿ (PM Modi- Eshwarappa ) ಅವರೇ ಕರೆ ಮಾತನಾಡಿದ್ದು , ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮಾಧ್ಯಮಗಳೊಂದಿಗೆ ಕೆ,ಎಸ್ ಈಶ್ವರಪ್ಪ ಮಾತನಾಡಿ , ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಕಚೇರಿಯಿಂದ ಕರೆ ಬಂದಿತ್ತು. ಮೊದಲಿಗೆ ಪಿಎ ಮಾತನಾಡಿ ನಂತರ ಮೋದಿ ಅವರೇ ಮಾತನಾಡಿದ್ರು, ಬಳಿಕ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ರಾಜ್ಯಕ್ಕೆ ಬಂದ ನಿಮ್ಮನ್ನು ಭೇಟಿ ಮಾಡುವೆ ಎಂದಿದ್ದಾರೆ. ಈಶ್ವರಪ್ಪ ಪ್ರಭುದ್ಧ ನಡೆಗೆ ಅಭಿನಂದಿಸುವೆ ಎಂದಿದ್ದಾರೆ. ಪಕ್ಷ ಸದಾ ನಿಮ್ಮ ಜೊತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊನೆಯ ಕ್ಷಣದ ತಂತ್ರಗಾರಿಕೆ : ಕನಕಪುರದಿಂದ ಡಿ.ಕೆ.ಸುರೇಶ್ ನಾಮಪತ್ರ ,ಡಿಕೆಶಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ













