Home Karnataka State Politics Updates Exit Poll: ಎಕ್ಸಿಟ್ ಪೋಲ್- 2024 ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ, ಇಂದು ಸಂಜೆ...

Exit Poll: ಎಕ್ಸಿಟ್ ಪೋಲ್- 2024 ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ, ಇಂದು ಸಂಜೆ 6.30 ಕ್ಕೆ ಚುನಾವಣಾ ಸಮೀಕ್ಷೆ

Exit Poll

Hindu neighbor gifts plot of land

Hindu neighbour gifts land to Muslim journalist

Exit Poll: ಪ್ರಪಂಚದ ಅತ್ಯಂತ ದೊಡ್ಡ- ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಇಡೀ ಜಗತ್ತು ಕಂಡು ನೆಟ್ಟು ಕೂತಿದೆ. ಭಾರತದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದು, ಇವತ್ತು ಜೂನ್ 1 ರ ಶನಿವಾರದಂದು ಕೊನೆಯ ಮತ್ತು ಏಳನೆಯ ಹಂತ ಮುಕ್ತಾಯವಾಗಲಿದೆ. ಹಾಗಾಗಿ ಸಾಮಾನ್ಯವಾಗಿ ಚುನಾವಣೆ ನಡೆದ ದಿನದ ಕೊನೆಯಲ್ಲಿ ಪ್ರಸಾರವಾಗುವ ಎಕ್ಸಿಟ್ ಪೋಲ್ 2024 ನಿರೀಕ್ಷಿಸುತ್ತಾ ಎಲ್ಲರೂ ಕುತೂಹರದಿಂದ ಕಾಯುತ್ತಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದೆಯೇ ಅಥವಾ ಪ್ರತಿಪಕ್ಷ ಇಂಡಿಯಾ ಬ್ಲಾಕ್ ಈ ಬಾರಿ ಬಿಜೆಪಿಯನ್ನು ಬಗ್ಗು ಬಡಿಯುವುದೇ, ಇದು ಅಷ್ಟು ಸುಲಭವಾಗಿ ಸಾಧ್ಯವೇ? ಮುಂತಾದ ಪ್ರಶ್ನೆಗಳಿಗೆ ಇವತ್ತು ಸಂಜೆ ಉತ್ತರ ಸಿಗಲಿದೆ.

ಇದನ್ನೂ ಓದಿ: Thirupathi: ತಿರುಪತಿಗೆ ಹೋಗುವವರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ, ಚಾಣಕ್ಯ, ಟೈಮ್ಸ್ ನೌ-ಇಟಿಜಿ, ಸಿ-ವೋಟರ್ ಮತ್ತು ಸಿಎಸ್‌ಡಿಎಸ್-ಲೋಕನೀತಿಯಂತಹ ಹಲವು ಸಮೀಕ್ಷೆಗಳು ಇಂದು ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡುತ್ತವೆ.

ಇದನ್ನೂ ಓದಿ: Violence In West Bengal: ಮತದಾನದ ವೇಳೆ ಭಾರೀ ಗಲಾಟೆ! ಇವಿಎಂ ನ್ನು ಕೆರೆಗೆ ಎಸೆದು ದುಷ್ಕೃತ್ಯ, ವಿಡಿಯೋ ವೈರಲ್‌

ಎಕ್ಸಿಟ್ ಪೋಲ್ ಪ್ರಸಾರದ ಸಮಯ ಯಾವಾಗ ?

ಇಂದು ಶನಿವಾರ ಸಂಜೆ ಆರೋ ಮೂವತ್ತಕ್ಕೆ ಸರಿಯಾಗಿ ದೇಶದಾದ್ಯಂತ ನಡೆದ ಲೋಕಸಭಾ ಚುನಾವಣೆಗಳ ಚುನಾವಣಾ ಸಮೀಕ್ಷೆ ಪ್ರಸಾರವಾಗಲಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ಏಪ್ರಿಲ್ 19 ರಿಂದ ಇಂದು ಜೂನ್ ಒಂದರ ಸಂಜೆ 6.30 PM ತನಕ ಎಕ್ಸಿಟ್ ಪೋಲ್ ಪ್ರಸಾರ ಮಾಡುವುದನ್ನು ಚುನಾವಣಾ ಆಯೋಗ ಬಹಿಷ್ಕರಿಸಿತ್ತು.

ಇವತ್ತು ಸಂಜೆ 6:30 ರಿಂದ ದೇಶದ ಚುನಾವಣಾ ಸಮೀಕ್ಷೆಗಳು ಮುಂದಿನ ಪ್ರಧಾನಿ ಯಾರಾಗುತ್ತಾರೆ ಎನ್ನುವ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಿವೆ. ದೇಶದ ಪ್ರಮುಖ ಸುದ್ದಿ ಮಾಧ್ಯಮಗಳು ಈ ಬಗ್ಗೆ ಸಮೀಕ್ಷಾ ವರದಿ ಪ್ರಕಟಿಸಲು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.