Home Karnataka State Politics Updates ಮುಂದಿನ ಪ್ರಧಾನಿ ಪಟ್ಟಕ್ಕಾಗಿ ಬಿಜೆಪಿ ಅಭ್ಯರ್ಥಿ ಅಂತಿಮ !! ವಿರೋಧ ಪಕ್ಷಗಳ ಗರ್ಭದಲ್ಲಿ ಹುಟ್ಟಿದ ಚಳಿ...

ಮುಂದಿನ ಪ್ರಧಾನಿ ಪಟ್ಟಕ್ಕಾಗಿ ಬಿಜೆಪಿ ಅಭ್ಯರ್ಥಿ ಅಂತಿಮ !! ವಿರೋಧ ಪಕ್ಷಗಳ ಗರ್ಭದಲ್ಲಿ ಹುಟ್ಟಿದ ಚಳಿ ಜ್ವರ !

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ 2 ನೆಯ ಬಾರಿಗೆ ಫುಲ್ ಬಹುಮತದಿಂದ ಆಯ್ಕೆಯಾಗಿ ಇನ್ನೇನು ತಮ್ಮ ಒಟ್ಟು ಎರಡು ಟರ್ಮನ 10 ವರ್ಷಗಳ ಅಧಿಕಾರದ ಅವಧಿಯನ್ನು ಮುಗಿಸುತ್ತಾ ಬಂದಿರುವ ನರೇಂದ್ರ ಮೋದಿಯವರ ನಂತರ ಮುಂದೆ ಯಾರು ಈ ಮಹಾನ್ ಜನಸಂಖ್ಯೆಯ, ಮಹಾ ವೈರುಧ್ಯ ಮತ್ತು ಸಂಕೀರ್ಣ ಸಂಪ್ರದಾಯಗಳ ರಾಷ್ಟ್ರವನ್ನು  ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಯಾರಲ್ಲೂ ಇದೀಗ ಉದ್ಭವವಾಗಿ ಹಲವು ಜನರನ್ನು ಕಾಡುತ್ತಿತ್ತು. ಬಹುಶಃ ನಿನ್ನೆಯ ತನಕ ಅದು ಉತ್ತರವಿಲ್ಲದೆ ಅಸ್ಥಿರತೆಯಿಂದ ಅಲ್ಲಾಡುತ್ತಿತ್ತು. ಇಂದು ಅದಕ್ಕೆ ಉತ್ತರ ಸಿಕ್ಕಿದೆ. ಪರೋಕ್ಷವಾಗಿ ಆದರೆ ಸ್ಪಷ್ಟವಾಗಿ ಪ್ರಧಾನಿ ಮೋದಿಯವರು ತಮ್ಮ ಉತ್ತರಾಧಿಕಾರಿ ಯಾರು ಎಂಬ ರಿವೀಲ್ ಬಗ್ಗೆ ಮಾಡಿದ್ದಾರೆ. ಆ ಬಗ್ಗೆ ಖುದ್ದು ಮೋದಿಯೇ ಸಂದರ್ಭ ಒಂದರಲ್ಲಿ ಬಾಯಿ ಬಿಟ್ಟಿದ್ದಾರೆ. ಅದರ ಬಗ್ಗೆ ಫುಲ್ ರಿಪೋರ್ಟ್ ಇಲ್ಲಿದೆ ಓದಿ.

‘ಮೋದಿ ಜೀ, ನೀವು ಎರಡು ಅವಧಿಗೆ ಪ್ರಧಾನಿಯಾದರೆ ಸಾಕು’ ಎಂಬುದಾಗಿ ಪ್ರತಿಪಕ್ಷದ ನಾಯಕರೊಬ್ಬರು ಮೋದಿಗೆ ಹೇಳಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.
“ಒಂದು ದಿನ ಒಬ್ಬ ಅತಿದೊಡ್ಡ ನಾಯಕರು ನನ್ನನ್ನು ಭೇಟಿಯಾದರು. ಅವರು ರಾಜಕೀಯವಾಗಿ ನಮ್ಮ ವಿರೋಧಿ. ಅವರು ನನ್ನನ್ನು ಸದಾ ವಿರೋಧಿಸುತ್ತಿರುವವರು. ಆದರೆ ನಾನವರನ್ನು ಗೌರವಿಸುತ್ತೇನೆ. ಅವರು ಕೆಲವು ವಿಷಯಗಳ ಬಗ್ಗೆ ಅಸಂತುಷ್ಟರಾಗಿದ್ದರು. ಆದ್ದರಿಂದ ಆದೊಂದು ದಿನ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವತ್ತು,
ಅವರು ನನ್ನ ಬಳಿ, ಮೋದಿ ಜೀ, ದೇಶವು ಎರಡು ಬಾರಿ ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದೆ. ಇದಕ್ಕಿಂತ ಹೆಚ್ಚು ನೀವೇನು ಬಯಸುತ್ತೀರಿ ಎಂದರು. ಒಬ್ಬರು ಎರಡು ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಿದಂತಾಗುತ್ತದೆ. ಎಂಬುದು ಅವರ ಅಭಿಪ್ರಾಯವಾಗಿತ್ತು.

ಆದರೆ,  ಈ ನರೇಂದ್ರ ಮೋದಿ ವಿಭಿನ್ನ ಗುಣಗಳಿಂದ ರೂಪಿಸಲ್ಪಟ್ಟವರು ಎಂಬುದು ಅವರಿಗೆ ತಿಳಿದಿಲ್ಲ. ಇವತ್ತಿನ ಮೋದಿಯನ್ನು ಇಡೀ ಗುಜರಾತ್ ರೂಪಿಸಿದೆ. ಹೀಗಾಗಿ ನಾನು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಏನಾಗಿದೆಯೋ ಅದೆಲ್ಲ ಆಗಿಹೋಗಿದೆ. ಈಗ ನಾನು ವಿಶ್ರಾಂತಿ ಪಡೆಯಬೇಕೇ? ಖಂಡಿತಾ ಇಲ್ಲ. ಜನಕಲ್ಯಾಣ ಯೋಜನೆಗಳ ಶೇ 100ರಷ್ಟು ಜಾರಿಯೇ ನನ್ನ ಗುರಿ ” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ  ತಾವು ರಿಟೈರ್ಮೆಂಟ್ ಆಗಲ್ಲ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ನಾಯಕರ ಪ್ರಶ್ನೆ ರಾಜಕೀಯದ ಬಗ್ಗೆ ಆಗಿರಲಿಲ್ಲ. ಹಾಗಿದ್ದರೆ ಬೇರೆ ಮಾತು. ಅವತ್ತು ಮಾತಾಡಿದ್ದು ಪ್ರಧಾನ ಮಂತ್ರಿಯ ಪಟ್ಟದ ಬಗ್ಗೆ. ಆಗ ಮೋದಿ ಹೇಳಿದ ಮಾತು ಈಗ ಮಹತ್ವ ಪಡಕೊಂಡಿದೆ. ಮೋದಿಯವರು ಮೂರನೆಯ ಬಾರಿಗೆ ಭಾರತದ ಪ್ರಧಾನ ಮಂತ್ರಿ ಪದವಿಗೆ ಬಿಜೆಪಿಯ ಮೂಲಕ ಸ್ಪರ್ಧಿಸುವುದು ಖಚಿತವಾಗಿದೆ.

ಅಂದ ಹಾಗೆ, ಮೋದಿಯವರನ್ನು ‘ 2 ಸಲ ಸಾಕು ಮಾರ್ರೆ’ ಅಂದ ಆ ಪ್ರತಿಪಕ್ಷ ನಾಯಕ ಯಾರು ಎಂಬುದನ್ನು ಮೋದಿ ಬಹಿರಂಗಪಡಿಸಿಲ್ಲ. ಆದರೆ ರಾಜಕೀಯ ಪಂಡಿತರು ಎಲ್ಲಾ ಕೋನಗಳಿಂದ ಗಮನಿಸಿದ್ದಾರೆ. ಕಳೆದ ತಿಂಗಳು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ದೆಹಲಿಯಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು. ಕೇಂದ್ರದ ತನಿಖಾ ಸಂಸ್ಥೆಗಳು ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿದ್ದರು. ಆಗ ಬಹುಶಃ ಈ ಮಾತುಕತೆ ನಡೆದಿದ್ದಿರಬೇಕು. ಮಾತುಕತೆ ಅದೆಲ್ಲಿಯೇ ನಡೆದಿರಲಿ, ಮೋದಿ ಅವರು ಬಿಗ್ ಬ್ರೇಕಿಂಗ್ ನ್ಯೂಸ್ ಅನ್ನು ಸ್ಫೋಟಿಸಿದ್ದಾರೆ. ಬಿಜೆಪಿಯಿಂದ ಸ್ವತಃ ನರೇಂದ್ರ ದಾಮೋದರ್ ದಾಸ್ ಮೋದಿ ಬಿಜೆಪಿಯ ಅಭ್ಯರ್ಥಿ ಅನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.