Home Karnataka State Politics Updates Putturu: ‘ಕೊನೆಗೂ ಚಡ್ಡಿ ಬುದ್ದಿ ತೋರಿಸಿದ’ – ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ...

Putturu: ‘ಕೊನೆಗೂ ಚಡ್ಡಿ ಬುದ್ದಿ ತೋರಿಸಿದ’ – ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ ಮುಸ್ಲಿಮರ ಆಕ್ರೋಶ!!

Hindu neighbor gifts plot of land

Hindu neighbour gifts land to Muslim journalist

Putturu: ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಮುಸ್ಲಿಮ್ ಕಾಂಗ್ರೆಸ್ ಕಾರ್ಯಕರ್ತರು ‘ಕೊನೆಗೂ ಚಡ್ಡಿ ಬುದ್ದಿ ತೋರಿಸಿದ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಾರಣ ಏನಂದ್ರೆ ರೈ ಅವರು ವಿಶ್ವಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಎಂಟ್ರಿ ಆಗಿದ್ದು.


ಹೌದು, ಪುತ್ತೂರು (Puttur) ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್‌ ರೈ (MLA Ashok Rai) ಅವರು ಇತ್ತೀಚೆಗೆ ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್‌ (VHP) ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಪುತ್ತೂರಿನಲ್ಲಿ ನಡೆದಿದ್ದ ಈ ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ರೈ ವಿರುದ್ಧ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಕಾರ್ಯಕರ್ತರು ‘ಚಡ್ಡಿ ಬುದ್ಧಿ ತೋರಿಸಿದ ಶಾಸಕ’ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ ಚಾಟ್‌ ಕೂಡಾ ವೈರಲ್ ಆಗುತ್ತಿದೆ.