Home Karnataka State Politics Updates ನೀವಾಗೇ ಬದಲಾಗಿ, ಇಲ್ಲದಿದ್ದರೆ ನಾವು ಬದಲಾಯಿಸುತ್ತೇವೆ ಎಂದ ಪ್ರಧಾನಿ | ಸಂಸದರ ಬದ್ಧತೆಯ ವಿಷಯದಲ್ಲಿ ಮೋದಿ...

ನೀವಾಗೇ ಬದಲಾಗಿ, ಇಲ್ಲದಿದ್ದರೆ ನಾವು ಬದಲಾಯಿಸುತ್ತೇವೆ ಎಂದ ಪ್ರಧಾನಿ | ಸಂಸದರ ಬದ್ಧತೆಯ ವಿಷಯದಲ್ಲಿ ಮೋದಿ ಗರಂ !!

Hindu neighbor gifts plot of land

Hindu neighbour gifts land to Muslim journalist

ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ಜನನಾಯಕ. ಅವರ ನೇರನುಡಿ, ಶಿಸ್ತುಬದ್ಧ ಜೀವನ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡುವುದು ಸತ್ಯ. ಅವರು ತಮ್ಮ ಜೀವನದಲ್ಲಿ ಶಿಸ್ತನ್ನು ಪಾಲಿಸುವುದಲ್ಲದೇ, ತನ್ನ ಮಂತ್ರಿಮಂಡಲದಲ್ಲಿರುವ ಸಚಿವರು, ಸಂಸದರನ್ನು ಅದೇ ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಸಂಸತ್ ನಲ್ಲಿ ಬಿಜೆಪಿ ಸಂಸದರ ಬದ್ಧತೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ.

ಹಾಜರಾತಿಯ ವಿಷಯದಲ್ಲಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದು, ಸಂಸದರು ತಮ್ಮನ್ನು ಬದಲಾಯಿಸಿಕೊಳ್ಳದೇ ಇದ್ದಲ್ಲಿ ಸಮಯದ ಜೊತೆ ಬದಲಾವಣೆ ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ.

ಸಭೆಯ ವಿವರಗಳನ್ನು ಹಂಚಿಕೊಂಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಂಸದರು ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಸಂಸದರ ಹಾಜರಾತಿ ಬಗ್ಗೆಯೂ ಮೋದಿ ಸಲಹೆಗಳನ್ನು ನೀಡಿದ್ದು, ಸಂಸತ್ ಅಧಿವೇಶನದ ಕಲಾಪಗಳಲ್ಲಿ ಸಂಸದರು ತಪ್ಪದೇ ಭಾಗಿಯಾಗಬೇಕು, ಮಕ್ಕಳೂ ಸಹ ಪದೇ ಪದೇ ಹೇಳಿದರೆ ಮಾಡಿದ ತಪ್ಪನ್ನೇ ಮಾಡುವುದಿಲ್ಲ ಎಂದು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ನೀವಾಗಿಯೇ ಬದಲಾಗಿ ಇಲ್ಲದೇ ಇದ್ದಲ್ಲಿ ಕಾಲದ ಜೊತೆ ಬದಲಾವಣೆ ತಾನಾಗಿಯೇ ಆಗಲಿದೆ ಎಂದು ಸಂಸದರಿಗೆ ಮೋದಿ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಸಂಸತ್ ಅಧಿವೇಶನಗಳಲ್ಲಿ ಬಿಜೆಪಿ ಸಂಸದರ ಕಡಿಮೆ ಹಾಜರಾತಿಯ ವಿಷಯವಾಗಿ ಮೋದಿ ಈ ಹಿಂದೆಯೂ ಹಲವು ಬಾರಿ ಎಚ್ಚರಿಸಿದ್ದರು.