Home Karnataka State Politics Updates Shakthi yojane: ಉಚಿತ ಬಸ್ ಪ್ರಯಾಣದಿಂದ ಕೊನೆಗೂ ಪೆಟ್ಟು ತಿಂದ ಸರ್ಕಾರ !! ಮತ್ತೆ ಹೊಸ...

Shakthi yojane: ಉಚಿತ ಬಸ್ ಪ್ರಯಾಣದಿಂದ ಕೊನೆಗೂ ಪೆಟ್ಟು ತಿಂದ ಸರ್ಕಾರ !! ಮತ್ತೆ ಹೊಸ ರೂಲ್ಸ್ ಬಿಡುಗಡೆ!!

Shakthi yojane
Image source- Vistara news

Hindu neighbor gifts plot of land

Hindu neighbour gifts land to Muslim journalist

Shakthi yojane: ಕಾಂಗ್ರೆಸ್ ಸರ್ಕಾರ(Congress Government) ರಚನೆಯಾದ ಕೂಡಲೆ ಜಾರಿಗೆ ತಂದ ‘ಶಕ್ತಿ ಯೋಜನೆ’ (Shakthi Yojane)ಯು ರಾಜ್ಯ ಸಾರಿಗೆ ನಿಗಮದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಮಹಿಳೆಯರೊಂದಿಗೆ ಪುರುಷರೂ ಹೆಚ್ಚು ಪ್ರಯಾಣ ಮಾಡುವುದೂ ಹೆಚ್ಚಾಗಿದೆ. ಆದರೆ ಈ ನಡುವೆ ಅನೇಕ ಗೋಲ್ ಮಾಲ್ ನಡೆದಿದೆ ಎಂಬ ವಿಚಾರ ಕೇಳಿಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರವೀಗ ಎಚ್ಚೆತ್ತುಕೊಂಡಿದೆ.

ಹೌದು, ಮಹಿಳೆಯರಿಗೆ ಸರ್ಕಾರ ಕಲ್ಪಿಸಿಕೊಟ್ಟ ಉಚಿತ ಬಸ್ ಪ್ರಯಾಣ(Free travel) ಯೋಜನೆಗೆ ಭರ್ಜರಿಯಾಗೇ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆಯರೆಲ್ಲರೂ ಬಸ್ ಹತ್ತಿ ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ತಮ್ಮ ಗಂಡಂದಿರು ಹಾಗೂ ಸಂಬಂಧಿಕರ ಜೊತೆ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಈ ವೇಳೆ ಕೆಲ ಪುರುಷರು ವೇಷಮರೆಸಿಕೊಂಡು, ಹೊರ ರಾಜ್ಯದ ಮಹಿಳೆಯರು ಆಧಾರ್ ಕಾರ್ಡ್ ಬದಲಿಸಿಕೊಂಡು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಬಲವಾಗಿ ಕಾಡುತ್ತಿದ್ದು ಸರ್ಕಾರ ಎಚ್ಚೆತ್ತುಕೊಂಡಿದೆ.

ಹಲವು ಪುರುಷರು ಬುರ್ಖಾ(Burkha) ಧರಿಸಿ ಪ್ರಯಾಣದ ಅನುಮಾನ: ಇನ್ನು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆ ಲಾಭ ಪಡೆಯಲು ಹಲವು ಪುರುಷರು ಬುರ್ಖಾ ಧರಿಸಿ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೆ ವ್ಯಕ್ತಿಯೊಬ್ಬ ಹೀಗೆ ಬುರ್ಖಾ ಧರಿಸಿ ಪ್ರಯಾಣ ಮಾಡಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ.

ಹೊರ ರಾಜ್ಯದ ಮಹಿಳೆಯರಿಂದಲೂ ಮೋಸ: ಕರ್ನಾಟಕ ಶಕ್ತಿ ಯೋಜನೆಯ ಲಾಭವನ್ನು ಪಡೆಯುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಖತರ್ನಾಕ್‌ ಬುದ್ಧಿಯನ್ನು ತೋರಿಸಿ ದಾಖಲಾತಿಗಳನ್ನೇ ಬದಲಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್‌ ಮೊದಲ ಗ್ಯಾರಂಟಿಯಾಗಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಂಡ ಬೆನ್ನಲ್ಲೇ ಮಹಿಳೆಯರ ಸಂಚಾರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಅನುಕೂಲವಾಗಿದ್ದು, ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಹಿಳೆಯರು ತಮ್ಮ ಖತರ್ನಾಕ್‌ ಐಡಿಯಾವನ್ನು ಉಪಯೋಗಿಸಿ ಬಸ್‌ನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಅವರ ಐಡಿಯಾ ನೋಡಿದ್ರೆ ನೀವೂ ಕೂಡ ಬೆಚ್ಚಿ ಬೀಳ್ತೀರಾ!

ಆಧಾರ್‌ ಕಾರ್ಡ್‌ನ(Adhar card) ಭಾಷೆ ಬದಲಿಸಿಕೊಂಡ ಮಹಿಳೆಯರು: ಇನ್ನು ಕರ್ನಾಟಕದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್‌ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಪಡೆದುಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ, ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಪಡೆಯಲಾಗಿದೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳಿಗೆ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಸಿಬ್ಬಂದಿಗಳಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಯಾರೆಲ್ಲಾ ಶಕ್ತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಅವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ. ಒಟ್ಟಾರೆಯಾಗಿ ಒಂದು ಯೋಜನೆ ಸದುಪಯೋಗ ಆಗುವುದಕ್ಕಿಂತಲೂ ಅದರ ದುರುಪಯೋಗ ಮಾಡುವವರೇ ಇಂದು ಅಧಿಕವಾಗಿದ್ದು ಇನ್ನು ಮುಂದಾದರೂ ಇಂತವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಬೇಕಿದೆ.

 

ಇದನ್ನು ಓದಿ: Bitcoin Fund: ಭಯೋತ್ಪಾದನೆಗೆ ಬಿಟ್ ಕಾಯಿನ್ ನಂಟು ; ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಬ್ಲಾಸ್ಟ್ ಕೇಸ್’ನಲ್ಲೂ ಬಳಕೆ !!